Breaking News

ಬೆಳಗಾವಿ ಕೇಂದ್ರ ಬಸ್ ನಿಲ್ಧಾನದ ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ

ಬೆಳಗಾವಿ-ನಗರದ ಕೇಂದ್ರ ಬಸ್ ನಿಲ್ದಾನದ ಅಬಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಶನಿವಾರ ಬೆಳಿಗ್ಗೆ ಚಾಲನೆ ನೀಡಿದರು

ಹೈಟೆಕ್ ಬಸ್ ನಿಲ್ಧಾಣದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು ಬೆಳಗಾವಿ ನಗರ   ಊತ್ತರ ಕರ್ನಾಟಕದ ಪ್ರಮುಖ ನಗರವಾಗಿದ್ದು ಸರ್ಕಾರ ಈ ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಬೆಳಗಾವಿ ನಗರ ಬೆಲೆಯುತ್ತಿರುವ ನಗರವಾಗಿದ್ದು ಇಲ್ಲಿಯ ಜೀವನಮಟ್ಟ ಸುಧಾರಣೆಗೆ ಸರ್ಕಾರ ೆಲ್ಲ ರೀತಿಯ ಕ್ರಮಗಳನ್ನು ಜರುಗಿಸುತ್ತಿದೆ ಎಂದರು

ಬೆಳಗಾವಿ ನಗರ ಗಡಿಭಾಗದಲ್ಲಿರು ಮುಖ್ಯ ನಗರವಾಗಿದ್ದು ಇಲ್ಲಿ ದಿನ ನಿತ್ಯ 65 ಸಾವಿರ ಪ್ರಯಾಣಿಕರು ಬಸ್ ನಿಲ್ಧಾಣಕ್ಕೆ ಬಂದು ಹೋಗುತ್ತಾರೆ ಪ್ರತಿ ದಿನ 1600 ಬಸ್ ಗಳು ಓಡಾಡುವ ಜನನಿಭಿಡ ಬಸ್ ನಿಲ್ದಾಣ ಇದಾಗಿದ್ದು ಇದನ್ನು 1962 ರಲ್ಲಿ ನಿರ್ಮಿಸಲಾಗಿತ್ತು ಅತ್ಯಂತ ಹಳೆಯದಾದ  ಬಸ್ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಿ ಪ್ರಥಮ ಹಂತದ ಕಾಮಗಾರಿಗೆ ಮೂವತ್ತು ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗಿದೆ ಮುಂದಿನ ಹಂತದ ಯೋಜನೆಗೂ ಅನುದಾನ ನೀಡುತ್ತೇವೆ ಈ ನಿಲ್ದಾಣ ಬೆಳಗಾವಿ ನಗರಕ್ಕೆ ಗರಿ ಆಗಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆಶಯ ವ್ಯೆಕ್ತಪಡಿಸಿದರು

ಕಾಮಗಾರಿ 2018 ಜನೇವರಿ ತಿಂಗಳಲ್ಲಿ ಪೂರ್ಣಗೊಳ್ಳಬೇಕು 2018 ಫೇಬ್ರವರಿ ತಿಂಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆ ಆಗಬೇಕು ಕಾಗಾರಿಯಲ್ಲಿ ವಿಳಂಬವಾದರೆ ಪೆನಾಲ್ಟಿ ಹಾಕುತ್ತೇವೆ ಎಂದು ಗುತ್ತಿಗೆದಾರನನ್ನು ವೇದಿಕೆಗೆ ಕರೆಯಿಸಿ ತಾಕೀತು ಮಾಡಿದರು

ಕರ್ನಾಟಕ ಸಾರಿಗೆ ಸಂಸ್ಥೆ  ಉತ್ತಮ ಸೇವೆಗೆ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಇದರ ಶ್ರೇಯ ಸಾರಿಗೆ ಸಂಸ್ಥೆಯ  ಎಲ್ಲ ನೌಕರರಿಗೆ ಸಲ್ಲುತ್ತದೆ ಈ ರೀತಿಯ ಸೇವೆ ಮುಂದುರೆಯಬೇಕು ಅದಕ್ಕಾಗಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು

ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ,ಸಂಸದರಾದ ಸುರೇಶ ಅಂಗಡಿ,ಪ್ರಕಾಶ ಹುಕ್ಕೇರಿ,ಅಶೋಕ ಪಟ್ಟಣ ಫಿರೋಜ ಸೇಠ ಗನೇಶ ಹುಕ್ಕೇರಿ ಲಕ್ಷ್ಮೀ ಹೆಬ್ಬಾಳಕರ ಆಶಾ ಐಹೊಳೆ ಸೇರಿದಂತೆ ಅಧಿಕಾರಿಗಳು ಹಾಗು ಮತ್ತಿತರರು ಉಪಸ್ಥಿತರಿದ್ದರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *