ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭೂಗತವಾಗಿದ್ದ ಹಳೆಯ ಭೂತಗಳು ಒಂದೊಂದಾಗಿ ಏಳುತ್ತಿವೆ.20 ಕೋಟಿ ರೂ ಪರಿಹಾರ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪಾಲಿಕೆ ಸದಸ್ಯರು ವಿಶೇಷ ತುರ್ತುಸಭೆ ನಡೆಸಿ ವಿಶೇಷ ನಿರ್ಣಯ ಕೈಗೊಂಡ ಬೆನ್ನಲ್ಲಿಯೇ ಇದೇ ಮಾದರಿಯ ಮತ್ತೂಂದು ಪ್ರಕರಣದ ತೂಗುಗತ್ತಿ ಈಗ ಬೆಳಗಾವಿ ಪಾಲಿಕೆಯ ಮೇಲೆ ನೇತಾಡುತ್ತಿದೆ.
2008 ರಲ್ಲಿ ಬೆಳಗಾವಿಯ ಮಹಾತ್ಮಾಪುಲೆ ರಸ್ತೆಯಲ್ಲಿ ಐದು ಸಾವಿರ ಸ್ಕ್ವೇರ್ ಫುಟ್ ಜಾಗೆಯನ್ನು ಕಳೆದುಕೊಂಡ ಜಮೀನು ಮಾಲೀಕರಿಗೆ ಮಾನ್ಯ ಉಚ್ಛ ನ್ಯಾಯಾಲಯ 76 ಲಕ್ಷ ರೂ ಪರಿಹಾರ ನೀಡುವಂತೆ ಈ ಹಿಂದೆಯೇ ಆದೇಶಿಸಿತ್ತು ಬೆಳಗಾವಿ ಪಾಲಿಕೆ ನೀಡದೇ ಇರುವದರಿಂದ ಅಗಸ್ಟ್ 21 ರಂದು ಪಾಲಿಕೆಯ ಕಂದಾಯ ಅಧಿಕಾರಿಗಳ ಕಾರು ಜಪ್ತಿಗೆ ವಕೀಲರು ಮುಂದಾಗಿದ್ದರು.ಪಾಲಿಕೆಯ ಕಾನೂನು ಅಧಿಕಾರಿಗಳು ಹೈಕೋರ್ಟ್ ಗೆ ಅರ್ಜಿ ಹಾಕಿ ಕಾಲಾವಕಾಶ ಕೇಳಿದ್ದರು.
21 ರಂದು ಪಾಲಿಕೆ ಕಂದಾಯ ಅಧಿಕಾರಿಗಳ ಕಾರು ಜಪ್ತಿಗೆ ಮುಂದಾಗಿದ್ದ ವಕೀಲರು ಇಂದು ಮಂಗಳವಾರ ಮಧ್ಯಾಹ್ನ ಮತ್ತೆ ಪಾಲಿಕೆ ಕಂದಾಯ ಅಧಿಕಾರಿಗಳ ಕಾರಿಗೆ ನೋಟೀಸ್ ಅಂಟಿಸಿ ಕಾರು ಜಪ್ತಿಗೆ ಪ್ರಯತ್ನ ನಡೆದಿತ್ತು ಈ ಸಂಧರ್ಭದಲ್ಲಿ ಸ್ಥಳಕ್ಕೆ ದೌಡಾಯಿಸಿದ ಪಾಲಿಕೆಯ ಕಾನೂನು ಅಧಿಕಾರಿ ಉಮೇಶ್ ಮಹಾಂತಶೆಟ್ಟಿ, ಕಾರು ಜಪ್ತಿಗೆ ಅಕ್ಷೇಪ ವ್ಯಕ್ತಪಡಿಸಿದರು.
ಕಾಲಾವಕಾಶಕ ಕೇಳಿ ನಾವು ಹೈಕೋರ್ಟ್ ಗೆ ಅರ್ಜಿ ಹಾಕಿದ್ದೇವೆ ನಾಳೆ ಹೈಕೋರ್ಟಿನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.ಮುಂದಿನ ಹೈಕೋರ್ಟ್ ಆದೇಶ ಬರುವವರೆಗೂ ಕಾಯಬೇಕು,ಹಳೆಯ ಆದೇಶದ ಮೇಲೆ ಕಾರು ಜಪ್ತಿಗೆ ಅವಕಾಶ ನೀಡುವದಿಲ್ಲ,ಒಂದು ವೇಳೆ ಕಾರು ಜಪ್ತಿ ಮಾಡಿದ್ದಲ್ಲಿ ನಾನು ಕಾರಿನ ಮುಂದೆ ಮಲಗುತ್ತೇನೆ ಎಂದು ಬೆಳಗಾವಿ ಪಾಲಿಕೆ ಅಧಿಕಾರಿಗಳು ತೀವ್ರ ಅಕ್ಷೇಪ ವ್ಯಕ್ತಪಡಿದಾಗ ಕಾರಿನ ಮೇಲೆ ಅಂಟಿಸಿದ ನೋಟಿಸ್ ಮಾಯ ವಾಯಿತು.
2008 ರಲ್ಲಿ ಬೆಳಗಾವಿಯ ಮಹಾತ್ಮಾಪುಲೆ ರಸ್ತೆ ಅಗಲೀಕರಣದಲ್ಲಿ ಬೆಳಗಾವಿಯ ನೇಮಾಣಿ ಗಾಂಗಳೆ ಮತ್ತು ಬಾಬು ಗಾಂಗಳೆ ಎಂಬಾತರು ಸುಮಾರು ಐದುಸಾವಿರ ಸ್ಕ್ವೇರ್ ಫೀಟ್ ಜಾಗೆ ಕಳೆದುಕೊಂಡಿದ್ದರು ಜಮೀನು ಮಾಲೀಕರಿಗೆ 76 ಲಕ್ಷ ರೂ ಪರಿಹಾರ ನೀಡುವಂತೆ ಮಾನ್ಯ ಹೈಕೋರ್ಟ್ ಆದೇಶ ನೀಡಿತ್ತು ಪಾಲಿಕೆ ಅಧಿಕಾರಿಗಳು ಪರಿಹಾರ ನೀಡದೇ ಇರುವದರಿಂದ ಜಮೀನು ಮಾಲೀಕರು ಪಾಲಿಕೆ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲು ಮಾಡಿದ್ದರು
ಬೆಳಗಾವಿ ಮಹಾನಗರ ಪಾಲಿಕೆ ಹಳೆಯ ಕೇಸ್ ಗಳು ಈಗ ಕಂಟಕವಾಗಿವೆ. 20 ಕೋಟಿ ಪರಿಹಾರ ನೀಡುವ ಸಮಸ್ಯೆ ಇತ್ಯರ್ಥವಾಗುವ ಮೊದಲೇ ಈಗ ಮತ್ತೊಂದು ಕೇಸ್ ಉದ್ಭವಿಸಿದೆ. ಹಿಂದಿನ ಅಧಿಕಾರಿಗಳು ಮಾಡಿದ ತಪ್ಪಿಗೆ ಈಗಿನ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ.
ಚಾಲಕನಿಂದಲೂ ಪಾಲಿಕೆ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್…
ಗುತ್ತಿಗೆ ಆಧಾರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ ಚಾಲಕನೊಬ್ಬ ನನ್ನು ಖಾಯಂ ಮಾಡುವಂತೆ ಲೇಬರ್ ಕೋರ್ಟ್ ಆದೇಶ ಮಾಡಿದೆ.ಈ ಆದೇಶ ಇನ್ನುವರೆಗೆ ಪಾಲನೆ ಆಗದೇ ಇರುವದರಿಂದ ಪಾಲಿಕೆಯ ವಾಹನ ಚಾಲಕ ಈಗ ಪಾಲಿಕೆಯ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲು ಮಾಡಿದ್ದು ಬೆಳಗಾವಿ ಮಹಾನಗರ ಪಾಲಿಕೆ ಈಗ ಸಂಕಷ್ಟದ ಹೊಂಡದಲ್ಲಿ ಮುಳುಗಿದೆ.