Breaking News

ಶರದ್ ಪವಾರ್ ಇಂದು ಬೆಳಗಾವಿಗೆ

ಬೆಳಗಾವಿ – ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಂಧರ್ಭದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಬೆಳಗಾವಿ ಎಂಇಎಸ್ ಸಂಘಟನೆಯ ನಿರ್ಮಾಪಕ ನಿರ್ದೇಶಕರಾಗಿರುವ ಶರದ್ ಪವಾರ್ ಇಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ.

ಬೆಳಗಾವಿಯ ಅರ್ಜುನ್ ರಾವ್ ಗೋವೀಂದ್ ರಾವ್ ಘೋರ್ಪಡೆಯವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಬೆಳಗಾವಿಯ ಮರಾಠಾ ಮಂದಿರದಲ್ಲಿ ಇಂದು ಸಂಜೆ 4 ಗಂಟೆಗೆ ಜರುಗಲಿದೆ ಈ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಮಹಾ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಭಾಗವಹಿಸುತ್ತಿದ್ದಾರೆ.

ಶರದ್ ಪವಾರ್ ಅವರು ತಮ್ಮ ರಾಜಕೀಯ ಕ್ಷೇತ್ರದ ಆರಂಭದಿಂದ ಬೆಳಗಾವಿಯ ಎಂಇಎಸ್ ಸಂಘಟನೆಯ ಜೊತೆಗೆ ನಂಟು ಹೊಂದಿದ್ದು ಬೆಳಗಾವಿಯ ಮುಗ್ದ ಮರಾಠಿ ಭಾಷಿಕ ರನ್ನು ಪ್ರಚೋದಿಸಿ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷಬೀಜ ಬಿತ್ತಿ ಮಹಾರಾಷ್ಟ್ರದಲ್ಲಿ ರಾಜಕಾರಣ ಮಾಡುತ್ತ ಬಂದಿರುವ ಶರದ್ ಪವಾರ್ ಇಂದು ಜನ್ಮ ಘೋರ್ಪಡೆ ಜನ್ಮ ಶತಮಾನೋತ್ಸವದ ನೆಪ ಮಾಡಿ ಇಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ.

ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡು ಕಂಗಾಲಾಗಿರುವ ಎಂಇಎಸ್ ಗೆ ಜೀವ ತುಂಬಿದ್ರೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ರಾಜಕೀಯ ಲಾಭ ಆಗಬಹುದು ಎನ್ನುವ ಲೆಕ್ಕಾಚಾರ ಶರದ್ ಪವಾರ್ ಅವರದ್ದಾಗಿದೆ. ಬೆಳಗಾವಿಯ ಎಂಇಎಸ್ ನಾಯಕರು ಮೊಸಳೆ ಕಣ್ಣೀರು ಹಾಕುವದರಕ್ಲಿ ನಿಸ್ಸೀಮರು,ಇವರಿಗೆ ಪಂಪ್ ಮಾಡಿ ಕಣ್ಣೀರು ಹಾಕಿಸುವದಕ್ಕಾಗಿಯೇ ಶರದ್ ಪವಾರ್ ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿಗೆ ಬರುವ ಶರದ್ ಪವಾರ್ ಅವರ ಜೊತೆ ಮೀಟೀಂಗ್ ಮಾಡಲು ಬೆಳಗಾವಿಯ ನಾಡದ್ರೋಹಿ ಎಂಇಎಸ್ ನಾಯಕರು ರೆಡಿಯಾಗಿದ್ದಾರೆ.

Check Also

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …

Leave a Reply

Your email address will not be published. Required fields are marked *