ಬೆಳಗಾವಿ- ಮಂಗಳವಾರ ಬೆಳಗಾವಿ ಮಹಾನಗರ ಪಾಲಿಕೆಯ ನಗರ ಸೇವಕಿಯರು ಮತ್ತು ಪಾಲಿಕೆಯ ಮಹಿಳಾ ಸಿಬ್ಬಂಧಿಗಳು ಪುಲ್ ಎಂಜಾಯ್ ಮೂಡ್ ನಲ್ಲಿದ್ದರು ಪಾಲಿಕೆಯ ದಿನನಿತ್ಯದ ಜಂಜಾಟದಿಂದ ದೂರಾಗಿ ಮನೋರಂಜನಾ ಕಾರ್ಯಕ್ರಮದಲ್ಲಿ ಬ್ಯುಜಿ ಆಗಿದ್ದರು
ಮಾರ್ಚ 1 ರಂದು ಮೇಯರ್ ಸರೀತಾ ಪಾಟೀಲರ ಅಧಿಕಾರದ ಅವಧಿ ಮುಗಿಯಲಿದೆ ಹೀಗಾಗಿ ಮೇಯರ್ ಸರೀತಾ ಪಾಟೀಲರು ಪಾಲಿಕೆ ಆವರಣದಲ್ಲಿ ನಗರ ಸೇವಕಿಯರಿಗೆ ಸ್ಪರ್ದಾತ್ಮಕ ಮನೋರಂಜನಾ ಕಾರ್ಯಕ್ರಮ ಆಯೋಜಿಸಿದ್ದ ರು
ಪ್ರ ಪ್ರಥಮವಾಗಿ ನಡೆದ ಸಂಗೀತ ಖುರ್ಚಿ ಸ್ಪರ್ದೆಯಲ್ಲಿ ಮೇಯರ್ ಸರೀತಾ ಪಾಟೀಲ ಪಾಲಿಕೆ ಆಯುಕ್ತ ಶಶಿಧರ ಕುರೇರ ಹಾಗು ನಗರ ಸೇವಕಿಯರು ಮತ್ತು ಪಾಲಿಕೆಯ ಮಹಿಳಾ ಅಧಿಕಾರಿಗಳು ಭಾಗವಹಿಸಿ ಎಲ್ಲರ ಗಮನ ಸೆಳೆದರು
ಇದಾದ ಬಳಿಕ ಲಿಂಬು ಚಮಚ ಓಟ,ತೆಲೆ ಯಲ್ಲಿ ಸ್ಟ್ರಾ ಇಟ್ಟಿಕೊಳ್ಳುವ ಸ್ಪರ್ದೆ ಸೇರಿದಂತೆ ಮನೋರಂಜನಾ ಸ್ಪರ್ದೆಗಳು ನಡೆದವು ಎಲ್ಲ ಸ್ಪರ್ಧೆಗಳಲ್ಲಿ ಎಲ್ಲ ಮಹಿಳಾ ನಗರ ಸೇವಕಿಯರು ಭಾಗವಹಿಸಿದ್ದರು ದಿನ ನಿತ್ಯದ ಕಿರಿ ಕಿರಿಯಯಿಂದ ಪಾಲಿಕೆಯ ಮಹಿಳಾ ಸಿಬ್ಬಂದಿ ಫುಲ್ ರಿಲ್ಯಾಕ್ಸ ಆಗಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ