Breaking News

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉದ್ಯೋಗದಲ್ಲೂ ಶೇ 30 ರಷ್ಟು ಮೀಸಲಾತಿ

*ಬೆಳಗಾವಿ:-* ಮೋದಿ ಸರಕಾರ ಜನಸಾಮಾನ್ಯರಿಗೆ ಸುಳ್ಳು ಭರವಸೆಗಳ ಮೂಲಕ ದಾರಿತಪ್ಪಿಸುತ್ತಿದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದರು ಬೆಳಗಾವಿಯ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಮಾಡಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇವಲ ರಾಜಕೀಯ ಕ್ಷೇತ್ರದಲ್ಲಿ ಅಷ್ಟೇ ಅಲ್ಲ ಉದ್ಯೋಗದಲ್ಲೂ ಶೇ 30 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು

ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೋಳ್ಳುತ್ತಿದೆ.
ಸುಪ್ರೀಂಕೋರ್ಟ್ನ ನಾಲ್ಕು ಹಿರಿಯ ನ್ಯಾಯಾಧೀಶರು ತಮ್ಮಗಾಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ ಬೇದಿಗಿಳಿದು ಪ್ರತಿಭಟಿಸುವ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಆತಂಕಕಾರಿಯಾಗಿದೆ.ಮೋದಿ ಸರಕಾರ ಮಾತಿನಲ್ಲೇ ಸಾಧನೆ ಮಾಡುತ್ತಿದೆ ಮೋದಿ ಸರಕಾರ ಜನರಿಗೆ ಮಾಡುತ್ತಿರುವ ಅನ್ಯಾಯ,ಮೋಸ ಸೇರಿದಂತೆ ಅನೇಕ ಪರಿಣಾಮಕಾರಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್ ಪಕ್ಷವೂ ಜನಾನುಕೂಲ ಪ್ರಣಾಳಿಕಯನ್ನು ನಾನಾ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿ ಜನಸ್ನೇಹಿ ಪ್ರಣಾಳಿಕೆ ಸಿದ್ದಪಡಿಸಿದೆ ಮೋದಿ ಸರಕಾರದ ಅವಧಿಯಲ್ಲಿ ನೀಡಿದ ಭರವಸೆಗಳು ಹಾಗೂ ಅವರ ಪ್ರಣಾಳಿಕೆಯಲ್ಲಿಯ ಯೋಜನೆಗಳು ಎಷ್ಟು ಜಾರಿಗೆತಂದಿದೀರಾ ಎಂದು ಪ್ರಶ್ನಿಸಿದರು. ನೋಟ್ ಅಮ್ಯಾನದಿಂದ ಶ್ರೀಮಂತರಿಗೆ ಲಾಭವಾಗಿದೆ ಹೋರತು ಬಡವರಿಗಿಲ್ಲ ಬಡವರು ಹಾಗೆ ಇದ್ದಾರೆ ಶ್ರೀಮಂತರು ಬೆಳೀತಿದಾರೆ ಕಳೆದ ಐದು ವರ್ಷಗಳಲ್ಲಿ ಯಾವ ಸಾಧನೆಯನ್ನು ಮೋದಿ ಸರ್ಕಾರ ಮಾಡಿದೆ? ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿರುವ ಮೋದಿಯವರು ವಾಟ್ಸ್ಅಫ್ ನಲೇ ಸಾಧನೆ ಮಾಡುದ್ದಾರೆ ಎಂದು ವ್ಯಂಗ್ಯವಾಡಿದ ಅವರು ಜಿಡಿಪಿಯಲ್ಲೂ ಹಸ್ತಕ್ಷೇಪ ಮಾಡಿ ಅದರಲ್ಲೂ ಜನರನ್ನು ಮಂಗ ಮಾಡುವ ಹವ್ಯಾಸ ಮೋದಿಯವರಿಗಿದೆ.
ಮೋದಿಯವರು ಪ್ರತೀಯೋಬ್ಬ ಭಾರತೀಯನಿಗೆ 15 ಲಕ್ಷ ಹಾಕ್ತೀನಿ ಅಂದ ಮೋದಿ ಯವರು ಹಾಕಿಲ್ಲ! ಯಾಕೆ? ಕಪ್ಪುಹಣವನ್ನು ವಿದೇಶದಿಂದ ತಂದು ಬಡವರಿಗೆ ನೀಡ್ತಿನಿ ಅಂತ ಹೇಳಿದ್ದವರು ಯಾಕೆ ತಂದಿಲ್ಲ! ಬಾಬಾ ರಾಮದೇವ,ವಿ ಕೆ ಸಿಂಗ್ ಸೇರಿದಂತೆ ಹೇಳಿಕೆ ನೀಡಿ ಜನರನ್ನು ಮೂರ್ಖರನ್ನಾಗಿ ಮಾಡಿದವರು ಮೋದಿ ಟೀಮ್ ನವರೆ ಇದಾರೆ ಎಂದು ಮೋದಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಪ್ರತಿಯೋಂದು ಕುಟುಂಬಕ್ಕೆ 72 ಸಾವಿರ ನೀಡುವ ನೂತನ ಯೋಜನೆ,ರೈತರಿಗಾಗಿಯೇ ವಿಶೇಷ ಬಜೆಟ್,ಜಿಡಿಪಿ 3% ಕಡಿಮೆಮಾಡಿರುವದನ್ನು ಸರಿಪಡಿಸುವ ಭರವಸೆ,3% ಆರೋಗ್ಯಕ್ಕಾಗಿ ಏರಿಕೆ,ಶಿಕ್ಷಣಕ್ಕಾಗಿ 3 ರಿಂದ ಶೇ 6ಕ್ಕೆ ಜಿಡಿಪಿ ಏರಿಕೆ ಮಾಡುವ ಯೋಜನೆ,ಜಿಎಸ್ ಟಿಯಲ್ಲಿ ಅಡಿಯಲ್ಲಿ ಪೆಟ್ರೋಲ್,ಡಿಸೇಲ್ ಉದ್ಯೋಗದಲ್ಲಿ ಶೇ33 ಖಾತರಿ ಮಾಡುವ ಭರವಸೆ,ಮಾನನಷ್ಟ ಮೋಕದ್ದಮೆಗಳಲ್ಲಿ ಐಪಿಸಿ ತೆಗೆದು ಸಿವಿಲ್ ಡ್ಯಾಮೇಜ್ ಆಗುವಂತಹ ಬದಲಾವಣೆ,ಶೆಕ್ಷನ್124ಎ ದೇಶದ್ರೋಹದ ವಿಚಾರದಲ್ಲಿ ತೆಗೆದು ಹಾಕುವುದು, ದೇಶದ ಪ್ರಗತಿಯಲ್ಲಿ ಸರ್ಕಾರದ ಖರ್ಚು ಮುಖ್ಯವಾಗಿದೆ ಅದರಂತೆ ಖಾಸಗಿ ಆದಾಯವೂ ಮುಖ್ಯವಾಗಿದೆ.
ವಿದ್ಯಾಸಂಸ್ಥೆಗಳಲ್ಲಿ ಪೋಲಿಸರ ಪ್ರವೇಶ ನಿಷೇಧ ಕಾನೂನು ತರುವ ಚಿಂತನೆ ಪ್ರಣಾಳಿಕೆಯಲ್ಲಿ ನೀಡಿದ್ದೆವೆ ಎಂದರು

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.