ಬೆಳಗಾವಿ- ಮಾನ್ಯ ಸರ್ವೋಚ್ಚ ನ್ಯಾಯಾಲಯ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಅಭಿಪ್ರಾಯ ವ್ಯೆಕ್ತ ಪಡಿಸಿದ್ದು ಇದನ್ನು ಮರು ಪರಶೀಲನೆ ಮಾಡುವಂತೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗದ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಗ್ರಾಮೀಣ,ಮತ್ತು ನಗರ ಜಿಲ್ಲಾ ಘಟಕದ ಕಾರ್ಯಕರ್ತರು ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು
ಗ್ರಾಮೀಣ ಜಿಲ್ಲಾ ಘಟಕದ ಅದ್ಯಕ್ಷ ವಿನಯ ನಾವಲಗಟ್ಟಿ ಮತ್ತು ನಗರ ಜಿಲ್ಲಾ ಘಟಕದ ಅದ್ಯಕ್ಷ ರಾಜು ಸೇಠ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿದ್ದರು
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ.ಕೇಂದ್ರ ಸರ್ಕಾರ ಎಸ್ ಸಿ ಎಸ್ ಟಿ ಮೀಸಲಾತಿಯನ್ನು ರದ್ದು ಪಡಿಸುವ ಹುನ್ನಾರ ನಡೆಸಿದೆ.ಮಾನ್ಯ ಸರ್ವೋಚ್ಚ ನ್ಯಾಯಾಲಯವು ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಅಭಿಪ್ರಾಯ ವ್ಯೆಕ್ತಪಡಿಸಿದ್ದು ಕಳವಳಕಾರಿ ಸಂಗತಿಯಾಗಿದೆ.ಇದನ್ನು ಮರುಪರಶೀಲನೆ ಮಾಡುವಂತೆ ಕೇಂದ್ರ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಬೇಕಾಗಿತ್ತು,ಆದ್ರೆ ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಮೀಸಲಾತಿಯನ್ನು ರದ್ದು ಮಾಡುವ ಹುನ್ನಾರ ನಡೆಸಿದೆ ಎಂದು ವಿನಯ ನಾವಲಗಟ್ಟಿ ಆರೋಪಿಸಿದರು
ನಗರ ಜಿಲ್ಲಾ ಅದ್ಯಕ್ಷ ರಾಜು ಸೇಠ ಮಾತನಾಡಿ ಕೇಂದ್ರ ಸರ್ಕಾರದ ಹಠಮಾರಿ ನಿರ್ಧಾರಗಳು ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಆತಂಕ ಎದುರಾಗಿದೆ.ಕೇಂದ್ರ ಸರ್ಕಾರ ಎಸ್ ಸಿ,ಎಸ್ ಟಿ ಸಮುದಾಯದ ಮೀಸಲಾತಿಯ ಹಕ್ಕನ್ನು ಕಿತ್ತುಕೊಳ್ಳುವ ಕುತಂತ್ರಕ್ಕೆ ಕೈ ಹಾಕಿದೆ ದೇಶದ ಜನ ಜಾಗೃತರಾಗಿದ್ದು ಕೇಂದ್ರದ ಕುತಂತ್ರಕ್ಕೆ ಬಲಿಯಾಗುವದಿಲ್ಲ ಶೋಷಿತ ಸಮುದಾಯಗಳ ಹಿತಾಸಕ್ತಿಗೆ ಧಕ್ಕೆಯಾದರೆ ಕಾಂಗ್ರೆಸ್ ಸಹಿಸುವುದಿಲ್ಲ ಎಂದು ರಾಜು ಸೇಠ ಎಚ್ಚರಿಕೆ ನೀಡಿದರು
ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಕಟಾಂಬಳೆ, ಪರಶುರಾಮ ವಗ್ಗಣ್ಣವರ,ಜಯಶ್ರೀ ಮಾಳಗಿ,ಮಲ್ಲೇಶ ಚೌಗಲೆ,ಲತಾ ಮಾನೆ,ಬಸವರಾಜ ಶೇಗಾವಿ,ಸದಾ ಕೋಲಕಾರ್,ರಸೂಲ ಮುಲ್ಲಾ,ಸೇರಿದಂತೆ ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.