ಬೆಳಗಾವಿ;
ಮಹಾನಗರ ಪಾಲಿಕೆ ಆಯುಕ್ತ ನೀರು ಸರಬರಾಜು ಮಂಡಳಿಯ ಅಧಿಕಾರಿ ಪ್ರಸನ್ನ ಮೂರ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಬೆಳಗಾವಿ ನಗರದ ವಂಟಮೂರಿ ಆಶ್ರಯ ಕಾಲೋನಿಗೆ ಭೇಟಿ ಮಾಡಿ ಅಲ್ಲಿಯ ಸಮಸ್ಯೆಗಳನ್ನು ಆಲಿಸಿದರು.
ನೀರು ಸರಬರಾಜು ಮಂಡಳಿಯಿಂದ ವಂಟಮೂರಿ ಆಶ್ರಯ ಕಾಲೋನಿಯ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆಶ್ರಯ ಕಾಲೋನೆಯಲ್ಲಿ ೩೮೦ ಮನೆಗಳಿದ್ದು ಅದರಲ್ಲಿ ೨೪೦ ಮನೆಗಳಿಗೆ ನೀರಿನ ಪೈಪ್ ಲೈನ್ ಮಾಡಲಾಗಿದೆ. ಉಳಿದ ೧೪೦ ಮನೆಗಳಿಗೂ ನೀರಿನ ಪೈಪ್ ಲೈನ್ ಮಾಡುವಂತೆ ಪಾಲಿಕೆ ಆಯುಕ್ತ ಶಶಿಧರ ಕುರೇರ್ ನೀರು ಸರಬರಾಜು ಮಂಡಳಿ ಗೆ ಸೂಚನೆ ನೀಡಿದರು.
ನಗರ ಸೇವಕ ಡಾ.ದಿನೇಶ ನಾಸಿಪುಡಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಂಟಮೂರಿ ಕಾಲೋನಿ ಯ ನೀರಿನ ಸಮಸ್ಯೆ ಕುಳಿತು ತಕರಾರು ಮಾಡಿದ ಹಿನ್ನೆಲೆ ಪಾಲಿಕೆ ಹಾಗೂ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಇದಕ್ಕೆ ಸ್ಪಂದಿಸಿ ಆಶ್ರಯ ಕಾಲೋನಿಯ ಸಮಸ್ಯೆಗಳನ್ನು ಆಲಿಸಿದರು.
ಆಶ್ರಯ ಕಾಲೋನಿಯ ೨೪೦ ಮನೆಗಳಿಗೆ ಮಾಡಲಾಗಿರುವ ನೀರಿನ ಪೈಪ್ಗಳಿಗೆ ನಲ್ಲಿಗಳನ್ನು ಅಳವಡಿಸುವದು ಸೇರಿದಂತೆ ಆಶ್ರಯ ಕಾಲೋನಿಯ ನೀರಿನ ವ್ಯವಸ್ಥೆ ಯನ್ನು ಸರಿಪಡಿಸಲು ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಲಾಯಿತು.
ನಗರ ಅಭಿಯಂತರ ಆರ್.ಎಸ್.ನಾಯಿಕ, ಪಾಲಿಕೆ ಆರೋಗ್ಯ ಅಧಿಕಾರಿ ನಾಡಗೌಡ, ಪರಿಸರ ಅಧಿಕಾರಿ ಉದಯಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.