Breaking News
Home / Breaking News / 33 ಜನರ ಗಂಟಲು ದ್ರವ ಲ್ಯಾಬ್ ಗೆ ರವಾನೆ. ರಿಪೋರ್ಟ್ ನಿರೀಕ್ಷೆಯಲ್ಲಿ ಜಿಲ್ಲಾಡಳಿತ.

33 ಜನರ ಗಂಟಲು ದ್ರವ ಲ್ಯಾಬ್ ಗೆ ರವಾನೆ. ರಿಪೋರ್ಟ್ ನಿರೀಕ್ಷೆಯಲ್ಲಿ ಜಿಲ್ಲಾಡಳಿತ.

ಬೆಳಗಾವಿ- ಮಹಾರಾಷ್ಟ್ರ,ಗೋವಾ ಗಡಿಗಳನ್ನು ಸಂಪೂರ್ಣವಾಗಿ ಲಾಕೌಟ್ ಮಾಡಿ ನೆಮ್ಮದಿಯಿಂದ ದಿನ ಕಳೆಯುತ್ತಿದ್ದ ಬೆಳಗಾವಿ ಜಿಲ್ಲೆಯಲ್ಲಿ ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಧಾರ್ಮಿಕ ಸಭೆ ವಿಚಾರ ,ಜಿಲ್ಲೆಯ ಜನರಲ್ಲಿ ಭೀತಿ ಹುಟ್ಟಿಸಿದೆ.

*ಸಭೆಗೆ ತೆರಳಿದ್ದ 33 ಜನರ ತಪಾಸಣಾ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತವಿದ್ದು ಈ 33 ಜನರ ರಿಪೋರ್ಟ್ ಏನಾಗಬಹುದು ಎಂಬ ಕುತೂಹಲ, ಮತ್ತು ಆತಂಕ ಬೆಳಗಾವಿ ಜನರಲ್ಲಿದೆ.

ದೆಹಲಿಯ ಮರ್ಕಜ್ ಧಾರ್ಮಿಕ ಸಭೆಗೆ ಹೋಗಿ ಬಂದ ಬೆಳಗಾವಿ ಜಿಲ್ಲೆಯ 62 ಜನರ ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ.ಹೊತ್ತು ಕಳೆದಂತೆ ನಿಜಾಮುದ್ದೀನ ದಾರ್ಮಿಕ ಸಭೆಯಲ್ಲಿ ಭಾಗವಹಿಸಿದವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ಇವರನ್ನು ಟ್ರೆಸ್ ಮಾಡಲು,ಬೆಳಗಾವಿ ಪೋಲೀಸರು ಹಗಲು,ರಾತ್ರಿ,ವಿಶ್ರಮಿಸದೇ ಶ್ರಮ ಪಡುತ್ತಿದ್ದಾರೆ.

ಜಮಾತ್‌ನಿಂದ ಬಂದ ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ ಎಂಬ ಮಾಹಿತಿ ಜಿಲ್ಲಾಡಳಿತ ನೀಡಿದೆ. .ಡಯಾಬಿಟಿಸ್, ಅಸ್ಥಮಾ, ಹೈಪರ್‌ಟೆನ್ಷನ್, ಹೃದಯಸಂಬಂಧಿ ಕಾಯಿಲೆ ಹೊಂದಿದ 33 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

ದೆಹಲಿಯಿಂದ ಮರಳಿದ 62 ಜನರ ಪೈಕಿ 33 ಜನರು ಸೀನಿಯರ್ ಸಿಟಿಜನ್ ಆಗಿದ್ದು 33 ಜನರ ಗಂಟಲು ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಿರುವ ಜಿಲ್ಲಾಡಳಿತ ಅವರ ರಿಪೋರ್ಟ್ ಗಾಗಿ ದಾರಿ ಕಾಯುತ್ತಿದೆ.

ಈಗಾಗಲೆ ಬೆಳಗಾವಿ ಜಿಲ್ಲಾಡಳಿತ ಕಳುಹಿಸಿದ ಎಲ್ಲ ಸ್ಯಾಂಪಲ್ ಗಳ ರಿಪೋರ್ಟ್ ನೆಗಟೆವ್ ಆಗಿದ್ದು ಮುಂದೆ ಬರುವ 33 ಜನರ ರಿಪೋರ್ಟ್ ನೆಗೆಟೀವ್ ಆಗಿರಲಿ ಎಂದು ಬೆಳಗಾವಿಯ ಜನ ಪ್ರಾರ್ಥಿಸುತ್ತಿದ್ದಾರೆ.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *