ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಇಂದು 36 ಕ್ಕೆ ಏರಿದ್ದು ಇನ್ನೂ 243 ಜನರ ರಿಪೋರ್ಟ ಬರುವದು ಬಾಕಿ ಇದೆ
243 ಕೊರೋನಾ ಶಂಕಿತರ ಗಂಟಲು ದ್ರವ ವನ್ನು ಶಿವಮೊಗ್ಗ ಮತ್ತು ಬೆಂಗಳೂರಿನ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು ಜಿಲ್ಲಾಡಳಿತ ರಿಪೋರ್ಟ್ ನಿರೀಕ್ಷೆಯಲ್ಲಿದೆ.
ಬೆಳಗಾವಿ ಜಿಲ್ಲಾಡಳಿತ ಹಾಗು ಆರೋಗ್ಯ ಇಲಾಖೆ ಈಗಾಗಲೇ 1947 ಜನರ ಮೇಲೆ ನಿಗಾ ಇಟ್ಟಿದೆ. 356 ಜನ 14 ದಿನದ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ 36 ಜನರನ್ನು ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗಿದೆ.668 ಜನ 14 ದಿನದ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ.887 ಜನ 28 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಹಾವಳಿ ಆರಂಭವಾದಾಗಿನಿಂದ ಈವರೆಗೆ 656 ಜನರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಅದರಲ್ಲಿ 36 ಜನರ ರಿಪೋರ್ಟ್ ಪಾಸಿಟೀವ್ ಬಂದಿದೆ 36 ರಲ್ಲಿ ಒಬ್ಬರು ಮೃತ ಪಟ್ಟಿದ್ದಾರೆ.375 ಜನರ ರಿಪೋರ್ಟ ನೆಗೆಟೀವ್ ಬಂದಿದ್ದು ಇನ್ನೂ 243 ಜನ ಶಂಕಿತರ ರಿಪೋರ್ಟ್ ಬರೋದು ಬಾಕಿ ಇದೆ.
ಬೆಳಗಾವಿಯಲ್ಲಿ ಪ್ರಯೋಗಾಲಯ ಆರಂಭ ಆಗೋದು ಯಾವಾಗ..?
ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ… ಆರೋಗ್ಯ ಇಲಾಖೆಯ ಬೇಜವಾಬ್ದಾರಿ ಜನಪ್ರತಿನಿಧಿಗಳ ಬೇಜವಾಬ್ದಾರಿಯಂದಾಗಿ ಬೆಳಗಾವಿಗೆ ಕೊರೋನಾ ಪ್ರಯೋಗಾಲಯ ಇನ್ನುವರೆಗೆ ಮಂಜೂರಾಗಿಲ್ಲ
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು 243 ಜನರ ಗಂಟಲು ದ್ರವದ ರಿಪೋರ್ಟ್ ಬರಬೇಕಾಗಿದೆ.