ಎನ್‍ಜಿಎಲ್ ಟ್ರಸ್ಟ್ ಕಡೆಯಿಂದ ಸಾಲ ಕೊಡಿಸುವುದಾಗಿ ಹೇಳಿ 10 ಲಕ್ಷ ರೂ. ವಂಚಿಸಿದ ಮಹಿಳೆಯನ್ನು ಎಪಿಎಂಸಿ ಪೆÇಲೀಸರು ಬಂದಿಸಿದ್ದು, ಈ ವಂಚನೆ ಪ್ರಕರಣದಲ್ಲಿ ಈವರೆಗೆ ಮೂವರನ್ನು ಬಂಸಿದಂತಾಗಿದೆ.
ಸಹ್ಯಾದ್ರಿ ನಗರದ ರೋಜಿ ಸ್ಯಾಮ್ಯುಯಲ್ ಪವಾರ ಎಂಬ ಮಹಿಳೆಯನ್ನು ಬಂ„ಸಲಾಗಿದೆ. ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ನ್ಯಾಯಾಲಯದ ಆದೇಶದಂತೆ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.
ವಂಚನೆ ಪ್ರಕರಣದಲ್ಲಿ ಶ್ರೀನಗರದ ಹೀನಾಕೌಸರ ಮಹಮದ್ ಅನ್ಸಾರಿ ಹಾಗೂ ಭಾಗ್ಯನಗರದ ಮಮತಾ ಉರ್ಫ ಆಕಾಂಕ್ಷಾ ಶ್ರೀಪಾದ ಕುಲಕರ್ಣಿ ಎಂಬವರನ್ನು ಈ ಮುಂಚೆಯೇ ಬಂಸಲಾಗಿತ್ತು. ಈಗ ಬಂತರ ಸಂಖ್ಯೆ ಮೂರಕ್ಕೇರಿದಂತಾಗಿದೆ. ಜುಲೈ 31ರಂದು ವಿಶ್ವೇಶ್ವರಯ್ಯ ನಗರದ ಅನ್ನಪೂರ್ಣ ಇಂಚಲ ಎಂಬವರು ನಾಲ್ಕು ಜನರ ವಿರುದ್ಧ ವಂಚನೆ ದೂರು ನೀಡಿದ್ದರು. ಈ ಕುರಿತು ಎಪಿಎಂಸಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
		
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ