Breaking News

ಸಾವಗಾಂವ ಕೆರೆಯಲ್ಲಿ ‌ನೀರು ಪಾಲಾದ ಬೆಳಗಾವಿಯ ನಾಲ್ಕು ಯುವಕರು

ಬೆಳಗಾವಿ- ನಗರದ ಸಮೀಪದ ಸಾವಗಾಂವ ಕೆರೆಯಲ್ಲಿ ಈಜಲು ಹೋದ ನಾಲ್ಕು ಜನ ಯುವಕರು ನೀರು ಪಾಲಾದ ಘಟನೆ ಇಂದು ಸಂಜೆ ನಡೆದಿದೆ

ಬೆಳಗಾವಿ ಭಾಗ್ಯನಗರದ,ಚೈತನ್ಯ ಗಜಾನನ ಬಾಂಧುರ್ಗೆ ಶಹಾಪೂರಿನ ಗೌತಮ ನತೀನ ಕಲಘಟಗಿ,ಬೆನಕನಹಳ್ಳಿಯ ಸಾಯಿಲ್ ಯುವರಾಜ ಬೆನಕೆ ,ಹಿಂಡಲಾ ವಿಜಯನಗರದ ಅಮಾನ್ ಮುಖೇಶ್ ಸಿಂಗ್ ಇವರೆಲ್ಲರೂ ಮೃತ ದಯರ್ದೈವಿಗಳಾಗಿದ್ದು ಮೃತಪಟ್ಟ ನಾಲ್ಕು ಜನ ಯುವಕರು 16 ವರ್ಷದವರಾಗಿದ್ದಾರೆ

ಇಂದು ಮದ್ಯಾಹ್ನ ಗೆಳೆಯನ ಬರ್ತಡೇ ಆಚರಿಸಲು ಮನೆಯಲ್ಲಿ ಹೇಳಿ ಹೋದ ನಾಲ್ಕು ಜನ ಯುವಕರು ಸಾವಗಾಂವ ಕೆರೆಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ

ಇಂದು ಸಂಜೆ ನಾಲ್ಕು ಘಂಟೆಗೆ ದನಕಾಯುತ್ತಿದ್ದ ವ್ಯೆಕ್ತಿಯೊಬ್ಬ ಕೆರೆಯ ದಂಡೆಯ ಮೇಲಿದ್ದ ಎರಡು ಬೈಕ್ ಮತ್ತು .ಬಟ್ಟಿಗಳನ್ನು ನೋಡಿ ಕೆರೆಯಲ್ಲಿ ಯಾರಾದ್ರೂ ಮುಳಗಿರಬಹುದು ಎಂದು ಅಂದಾಜಿಸಿ ಪೋಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ

ಸಂಜೆ ಆರು ಘಂಟೆಗೆ ಸಾವಗಾಂವ ಕೆರೆಯಲ್ಲಿ ನಾಲ್ಕು ಜನ ಯುವಕರ ಶವ ಪತ್ತೆಯಾಗಿದ್ದು ಘಟನಾ ಸ್ಥಳಕ್ಕೆ ನಗರ ಪೋಲಿಸ್ ಆಯುಕ್ತ ಡಿಸಿ ರಾಜಪ್ಪ,ಎಡಿಸಿ,ಎಸಿ,ಹಾಗು ಇತರ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ

Check Also

ಬೆಳಗಾವಿ ಜಿಲ್ಲಾಧಿಕಾರಿಗಳ ಇದೊಂದು ಕಾರ್ಯ ಶ್ಲಾಘನೀಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು …

Leave a Reply

Your email address will not be published. Required fields are marked *