ಸುಸೈಡ್ ಸ್ಪಾಟ್ ಆಗುತ್ತಿದೆಯಾ,ಬೆಳಗಾವಿಯ ಕೋಟೆ ಕೆರೆ…
ಬೆಳಗಾವಿ- ಬೆಳಗಾವಿಯ ಕೋಟೆ ಕೆರೆಯಲ್ಲಿ ಇಂದು ಅಪರಿಚಿತ ಶವ ದೊರೆತಿದ್ದು ಈ ಕೆರೆ ದಿನಕಳೆದಂತೆ ಸುಸೈಡ್ ಸ್ಪಾಟ್ ಆಗುತ್ತಿದೆ
ಇಂದು ಕೋಟೆ ಕೆರೆಯಲ್ಲಿ ದೊರೆತಿರುವ ಅಪರಿಚಿತ ವ್ಯೆಕ್ತಿಯ ಶವ ,50 ರಿಂದ 55 ವರ್ಷದ ವ್ಯೆಕ್ತಿಯ ಶವವಾಗಿದೆ ಎಂದು ಪೋಲಿಸರು ಅಂದಾಜಿಸಿದ್ದು ನೀಲಿ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.
ಈ ವ್ಯೆಕ್ತಿಯ ಕುರಿತು ಮಾಹಿತಿ ಇದ್ದಲ್ಲಿ ಕೂಡಲೇ ಬೆಳಗಾವಿಯ ಮಾರ್ಕೆಟ್ ಠಾಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಅಪರಿಚಿತ ಶವ ದೊರೆತಿರುವ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ಕೋಟೆ ಕೆರೆಯಲ್ಲಿ ಇತ್ತೀಚಿಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು.ಈ ಕುರಿತು ಪೋಲೀಸರು ನಿಗಾ ವಹಿಸುವದು ಅತ್ಯಗತ್ಯವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ