ಬೆಳಗಾವಿ- ಇತ್ತೀಚಿಗೆ ಮಚ್ಛೆ ಗ್ರಾಮದಲ್ಲಿ ನಡೆದ ಇಬ್ಬರು ವಿವಾಹಿತ ಮಹಿಳೆಯರ ಡಬಲ್ ಮರ್ಡರ್ ಪ್ರಕರಣ ಭೇದಿಸಲು ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ತನಿಖೆ ಮುಂದುವರೆಸಿದ್ದಾರೆ.
ಡಬಲ್ ಮರ್ಡರ್ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಗಣಿಸಿರುವ ಬೆಳಗಾವಿಯ ಪೋಲೀಸರು,ಇಬ್ಬರು ಮಹಿಳೆಯರ ಹತ್ಯೆಗೆ ಕಾರಣ ಏನು,ಎಂಬುವದನ್ನು ಪತ್ತೆ ಹಚ್ವಲು,ಪೋಲೀಸರು ಹಲವಾರು ಜನರನ್ನು ವಿಚಾರಣೆಗೊಳಪಡಿಸಿದ್ದು,ಪೋಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ ಎಂದು ತಿಳಿದು ಬಂದಿದೆ
ಕೊಲೆಯಾದ ಕಾಳೇನಟ್ಟಿ ಗ್ರಾಮದ ರೋಹಿಣಿಯ ಗಂಡ,ರೋಹಿಣಿಯ ಜೊತೆ ಮದುವೆಯಾಗುವ ಮೊದಲು ಒಬ್ಬಳ ಜೊತೆ ಮದುವೆ ಆಗಿದ್ದ ನಂತರ,ರೋಹಿಣಿ ಜೊತೆ ಮದುವೆಯಾದ ಬಳಿಕವೂ ಇನ್ನೊಬ್ಬಳ ಜೊತೆ ಮದುವೆಯಾಗಿದ್ದ,ಎಂದು ತಿಳಿದು ಬಂದಿದ್ದು ಕೊಲೆಗೆ ರೋಹಿಣಿಯ ಗಂಡನ ತ್ರಿಬಲ್ ಲವ್ ಕಾರಣವಾಗಿರಬಹುದು,ಎನ್ನುವ ಚರ್ಚೆ ಈಗ ಕಾಳೇನಟ್ಟಿ ಗ್ರಾಮದಲ್ಲಿ ಶುರುವಾಗಿದೆ.
ರೋಹಿಣಿಯ ಗಂಡ ಮಾಡಿದ ಕಿತಾಪತಿಗೆ ರೋಹಿಣಿ ಬಲಿಯಾದಳೇ ಎನ್ನುವದನ್ನು ಪತ್ತೆ ಹಚ್ಚಲು ಪೋಲೀಸರು ಕೆಲವರನ್ನು ವಿಚಾರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ
ಅತ್ಯಂತ ಕಗ್ಗಂಟಾಗಿದ್ದ ಡಬಲ್ ಮರ್ಡರ್ ಪ್ರಕರಣ ಭೇದಿಸಲು ಪೋಲೀಸರ ಪ್ರಯತ್ನ ಮುಂದುವರೆದಿದ್ದು,ಈ ಪ್ರಕರಣಕ್ಕೆ ಸಮಂಧಿಸಿದಂತೆ ಅಹೋರಾತ್ರಿ ತನಿಖೆ ನಡೆಯುತ್ತಿದೆ.
ರೋಹಿಣಿಯ ಕೊಲೆ ಮಾಡಿದಾಗ ಗೆಳತಿ ಜಯಶ್ರೀಯೂ ಅವಳ ಜೊತೆಗಿದ್ದಳು,ಅವಳು ಸಾಕ್ಷಿ ಹೇಳಬಹುದು ಅಂತಾ ಅವಳ ಕೊಲೆ ಮಾಡಿದ್ರಾ ಎನ್ನುವ ಹಲವಾರು ಪ್ರಶ್ನೆಗಳಿಗೆ ಪೋಲೀಸರ ತನಿಖೆ ಮುಗಿದ ಬಳಿಕವೇ ಡಬಲ್ ಮರ್ಡರ್ ಹಿಂದಿನ ರಹಸ್ಯ ಬಯಲಾಗಲಿದೆ.