Home / Breaking News / ಬೆಳಗಾವಿ ಉಪ ಚುನಾವಣೆ ಬಿಜೆಪಿಗೆ,ಸ್ಪೂರ್ತಿ….!

ಬೆಳಗಾವಿ ಉಪ ಚುನಾವಣೆ ಬಿಜೆಪಿಗೆ,ಸ್ಪೂರ್ತಿ….!

ಬೆಳಗಾವಿ- ಕೇಂದ್ರದ ರೇಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದ, ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದಾಗಿ ಬೆಳಗಾವಿ ಲೋಕಸಭಾ ಮತ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ,ಈ ಕ್ಷೇತ್ರದಲ್ಲಿ ಸುರೇಶ್ ಅಂಗಡಿ ಅವರ ಉತ್ತರಾಧಿಕಾರಿ ಯಾರು ? ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.

ಸುರೇಶ್ ಅಂಗಡಿ ಅವರ ಅವರ ಪತ್ನಿ ಮಂಗಳಾ ಅಂಗಡಿ,ಅಥವಾ ಅವರ ಹಿರಿಯ ಪುತ್ರಿ ಸ್ಪೂರ್ತಿ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ಕೊಡಬೇಕು ಎನ್ನುವ ಒತ್ತಾಯ ಸೋಶಿಯಲ್ ಮಿಡಿಯಾದಲ್ಲಿ ಜೋರಾಗಿಯೇ ನಡೆದಿದೆ,ಇದರ ಜೊತೆಗೆ ಕೆಲವರು ಸುರೇಶ್ ಅಂಗಡಿ ಅವರ ಕಿರಿಯ ಪುತ್ರಿ ಶ್ರದ್ಧಾ ಅವರಿಗೆ ಟಿಕೆಟ್ ಕೊಡಬೇಕು ಎನ್ನುವ ಒತ್ತಾಯವನ್ನು ಮಾಡುತ್ತಿದ್ದಾರೆ.

ಸುರೇಶ್ ಅಂಗಡಿ ಅವರ ಮಾವ,ಲಿಂಗರಾಜ್ ಪಾಟೀಲ್ ಅವರು ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು ಅವರ ಬಳಿ,ಸುರೇಶ್ ಅಂಗಡಿ ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ,ಇದಕ್ಕೆ ಬಿಜೆಪಿಯ ಹಲವಾರು ಜನ ನಾಯಕರು ಸಮ್ಮತಿ ಸೂಚಿಸಿ ಬೆಂಬಲ ವ್ಯೆಕ್ತ ಪಡಿಸಿದ್ದಾರೆ.

ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ದಿಸಲು ಸುರೇಶ್ ಅಂಗಡಿ ಅವರ ಕುಟುಂಬಸ್ಥರು ಗ್ರೀನ್ ಸಿಗ್ನಲ್ ಕೊಡುವದಷ್ಟೇ ಬಾಕಿ ಇದ್ದು,ಅವರು ತಮ್ಮ ನಿಲುವು ಸ್ಪಷ್ಟ ಪಡಿಸಿದ ಬಳಿಕ ಅಂಗಡಿ ಕುಟುಂಬದ ಪರವಾಗಿ ನಿಲ್ಲಲು ಅವರಿಗೆ ಟಿಕೆಟ್ ಕೊಡಿಸಲು ಕೆಲವು ಬಿಜೆಪಿ ನಾಯಕರೇ ತುದಿಗಾಲಲ್ಲಿ ನಿಂತಿದ್ದಾರೆ

ಟಿಕೆಟ್ ಗಾಗಿ ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿಗಳ ದಂಡು ತಯಾರಾಗಿದೆ‌.ಆಕಾಂಕ್ಷಿಗಳ ಹೆಸರುಗಳ ಒಂದು ದೊಡ್ಡ ಪಟ್ಟಿಯೇ ತಯಾರಾಗಿದೆ, ಇವರು ಆಕಾಂಕ್ಷಿಗಳು ಅಲ್ಲ ಎಂದು ಹೇಳುವದು ಕಷ್ಟ ಯಾಕಂದ್ರೆ ಅಷ್ಟೊಂದು ಆಕಾಂಕ್ಷಿಗಳು ಇದ್ದಾರೆ ಬಿಜೆಪಿಯಲ್ಲಿ

ಆಕಾಂಕ್ಷಿಗಳ ಪಟ್ಟಿ

ರಮೇಶ್ ಕತ್ತಿ

ಡಾ! ರವಿ ಪಾಟೀಲ

ಎಂ.ಬಿ ಝಿರಲಿ

ಸಂಜಯ ಪಾಟೀಲ್

ಜಗದೀಶ್ ಮೆಟಗುಡ್

ವಿಶ್ವನಾಥ ಪಾಟೀಲ್

ಕಿರಣ ಜಾಧವ

ರಾಜೇಂದ್ರ ಹರಕುಣಿ

ರಾಜು ಜಿಕ್ಕನಗೌಡರ

ಶಂಕರಗೌಡ ಪಾಟೀಲ

ರುದ್ರಣ್ಣಾ ಚಂದರಗಿ

ರಾಜೀವ ಟೋಪಣ್ಣವರ

ಭಾರತಿ ಮಗದುಮ್

 

ಚುನಾವಣೆ ಘೋಷಣೆ ಆಗಿಲ್ಲ ಆದ್ರೆ,ದಿನಕಳೆದಂತೆ ಆಕಾಂಕ್ಷಿಗಳ ಸಂಖ್ಯೆಯೂ ಬೆಳೆಯುತ್ತಲೇ ಇದೆ,ಆದ್ರೆ ಬಿಜೆಪಿಯ ವರಿಷ್ಠ ನಾಯಕರು ಅಂಗಡಿ ಅವರ ಕುಟುಂಬದವರಿಗೆ ಟೆಕೆಟ್ ಕೊಡುತ್ತಾರೋ ಅಥವಾ ಬೆಂಗಳೂರಿನಲ್ಲಿ ತೇಜಸ್ವಿ ಸೂರ್ಯ ಎಂಬ ನಾಯಕನನ್ನು ಪರಿಚಯಿಸಿದಂತೆ,ಬೆಳಗಾವಿಯಲ್ಲೂ ಪರ್ಯಾಯ ನಾಯಕನೊಬ್ಬನನ್ನು ಮುಂದಕ್ಕೆ ತರುತ್ತಾರೆಯೋ ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.

ಒಟ್ಟಾರೆ ಬೆಳಗಾವಿ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಯಾರ್ಯಾರು ಲಾಭಿ ನಡೆಸಿದ್ದಾರೆ ಎಂದು ಚರ್ಚೆ ಮುಂದುವರೆದರೆ ಪ್ರತಿ ದಿನ ಹೊಸ,ಹೊಸ ಹೆಸರುಗಳು ಪ್ರತ್ಯಕ್ಷವಾಗುವದರಲ್ಲಿ ಅನುಮಾನವೇ ಇಲ್ಲ

ಕ್ಯಾಮರಾ ಜೊತೆ
ಕ್ಯಾಮರಾ ಮನ್

ಬೆಳಗಾವಿ ಸುದ್ಧಿ ಡಾಟ್ ಕಾಮ್ ನ್ಯುಸ್ ನೆಟವರ್ಕ್
ಬೆಳಗಾವಿ.

Check Also

ಗೆಲುವಿನತ್ತ SSLC ವಿಧ್ಯಾರ್ಥಿಗಳ ಪಯಣ

SSLC ವಿದ್ಯಾರ್ಥಿಗಳ ಕೈ ಹಿಡಿದ “ಗೆಲುವಿನತ್ತ ನಮ್ಮ ಪಯಣ” ಪುಸ್ತಕ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದ ವಿದ್ಯಾರ್ಥಿಗಳು …

Leave a Reply

Your email address will not be published. Required fields are marked *