Home / Breaking News / ಆತ ಯೋಗಿನೋ ,ರೋಗಿನೋ ಗೊತ್ತಿಲ್ಲ- ಸಿದ್ರಾಮಯ್ಯ

ಆತ ಯೋಗಿನೋ ,ರೋಗಿನೋ ಗೊತ್ತಿಲ್ಲ- ಸಿದ್ರಾಮಯ್ಯ

ಬೆಳಗಾವಿ-ಯೋಗಿ ಆದಿತ್ಯನಾಥ ಸರ್ಕಾರ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ.ಜಂಗಲ್ ರಾಜ್ಯದಲ್ಲಿ ಕಾನೂನು ಇಲ್ಲ, ಪೊಲೀಸರು ಸರ್ವಾಧಿಕಾರಿ ರೀತಿಯಲ್ಲಿ ವರ್ತನೆ ಮಾಡ್ತಿದ್ದಾರೆ.ಸಂ ತ್ರಸ್ತೆ ಹೆಣ್ಣು ಮಗಳ ಮನೆಗೆ ಹೋಗಿ ಸಾಂತ್ವನ ಹೇಳಲು ಹೋಗುತ್ತಿದ್ದರು.

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಗೆ ಹೋಗಲು ಪೊಲೀಸರು ಬಿಡಲಿಲ್ಲ.ಈ ದೇಶ ಬಿಜೆಪಿ ಆಸ್ತಿ ಅಲ್ಲ, ಯೋಗಿ ಆದಿತ್ಯನಾತ್ ಆಸ್ತಿಅಲ್ಲ. ಎಂದುಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಯೋಗಿಯ ವಿರುದ್ಧ ಕಿಡಿ ಕಾರಿದ್ದಾರೆ.

ಬ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮುಖ್ಯಮಂತ್ರಿ ಸೂಚನೆಯಂತೆ ಪೊಲೀಸರು ರಾಹುಲ್ ಗಾಂಧಿ ತಡೆದ್ದಾರೆ.
ಯೋಗಿ ಆದಿತ್ಯನಾತ್ ಸಿಎಂ ಆಗಿ ಮುಂದುವರೆಯಬಾರದು ಕೂಡಲೇ ರಾಜೀನಾಮೆ ನೀಡಲಿ. ಯೋಗಿನೋ ಆತ ರೋಗಿನೋ ಗೊತ್ತಿಲ್ಲ. ಎಂದು ಸಿದ್ರಾಮಯ್ಯ ಲೇವಡಿ ಮಾಡಿದ್ರು

ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಟ್ಟಿಲ್ಲ, ದುಡ್ಡು ಕೊಟ್ಟಿಲ್ಲ. ಈ ಸಾರಿ ಪ್ರವಾಹ ಬಂದಾಗ ಒಂದೇ ಒಂದು ಪೈಸೆ ಖರ್ಚು ಮಾಡಿಲ್ಲ. ಭ್ರಷ್ಟಾಚಾರ ಆಗಿದೆ, ಮೆಡಿಕಲ್ ಸಾಮಾಗ್ರಿಗಳ ಹಗರಣ ಆಗಿದೆ ಅಂದಾಗ ಒಪ್ಪಲಿಲ್ಲ. ನಾಲ್ಕು ಸಾವಿರ ಕೋಟಿಯಲ್ಲಿ ಎರಡು ಸಾವಿರ ಕೋಟಿ ಲಂಚ ಹೊಡೆದಿದ್ದಾರೆ.
ಅಧಿವೇಶನದಲ್ಲಿ ಸುಧಾಕರ್ ಉತ್ತರ ಕೊಟ್ಟಿದ್ದಾರೆ, ಯಡಿಯೂರಪ್ಪ ಚೆಕ್ ಮೂಲಕ ತೆಗೆದುಕೊಂಡ್ರೇ ಮೊಮ್ಮಗ ಆರ್‌ಟಿಜಿಎಸ್ ಮೂಲಕ ಪಡೆಯುತ್ತಿದ್ದಾರೆ. ಎಂದು ಸಿದ್ರಾಮಯ್ಯ ಆರೋಪಿಸಿದರು.

ಸಿದ್ದರಾಮಯ್ಯ ಬ್ರಿಟಿಷರಗಿಂತ ಕೆಟ್ಟದಾಗಿ ಅಧಿಕಾರ ನಡೆಸಿದ್ರೂ ಎಂದು ಕಟೀಲ್ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ರಾಮಯ್ಯ ನಳೀನ್ ಕುಮಾರ್ ಕಟೀಲ್ ಯಕಶ್ಚಿತ್ ರಾಜಕಾರಣಿ, ನನ್ನ ಕಾಲದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ. ಇವರ ಕಾಲದಲ್ಲಿ ಸಂಬಳ ಕೊಡಲು ದುಡಿಲ್ಲ.ಎಂದು ಆರೋಪಿಸಿದರು.

ಲೋಕಸಭೆ ಉಪಚುನಾವಣೆ ಇಂದು ಸಂಜೆ ಸಭೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ
ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ.ಇಂದು ಸಂಜೆ ಜಿಲ್ಲಾ ಕಾಂಗ್ರೆಸ್ ಕಮೀಟಿ ಜತೆ ಸಭೆ ಕರೆದಿದ್ದೇವೆ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಎಂದರು

ಕೇಂದ್ರ ಸಚಿವ ಸುರೇಶ್ ಅಂಗಡಿ ದೆಹಲಿಯಲ್ಲಿ ನಿಧನರಾಗಿದ್ದರು. ಅಂಗಡಿಯವರ ಪಾರ್ಥಿವ ಶರೀರ ಬೆಳಗಾವಿಗೆ ತರಬೇಕಿತ್ತು. ಬೆಳಗಾವಿಯಲ್ಲಿ ಅಂತಿಮ ದರ್ಶನಕ್ಕೆ ಕ್ಷೇತ್ರದ ಜನರಿಗೆ ಅವಕಾಶ ಕೊಡಬಹುದಾಗಿತ್ತು. ಎರಡು ತಿಂಗಳ ಹಿಂದೆ ಎನೇನೂ ರಾಜಕಾರಣ ನಡೆತು ಅಂತಾ ಕುಟುಂಬ ಸದಸ್ಯರು ಹೇಳಿದ್ದಾರೆ.ಈ ಸಂದರ್ಭದಲ್ಲಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗಲಿಲ್ಲ. ಸುರೇಶ್ ಅಂಗಡಿ ಕೇಂದ್ರದ ಮಂತ್ರಿ ಇದ್ದರು. ಬೆಳಗಾವಿಯಲ್ಲಿ ಮಿಲಿಟರಿ ಬೇಸ್ ಇದೆ, ಪಾರ್ಥಿವ ಶರೀರ ಬೆಳಗಾವಿಗೆ ತಂದು ಗೌರವ ಸಲ್ಲಿಸಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ಆಗಲಿಲ್ಲ. ಎಂದು ಡಿ.ಕೆ ಶಿವಕುಮಾರ್ ಆರೋಪಿಸಿದರು.

ಯೋಗಿ ಆದಿತ್ಯನಾತ್ ಸರ್ಕಾರ ಇಡೀ ಪ್ರಪಂಚಕ್ಕೆ ಕಪ್ಪು ಚುಕ್ಕೆ, ಮನುಕುಲಕ್ಕೆ ಅವಮಾನ ಎಂದು ವಾಗ್ದಾಳಿ ಮಾಡಿದ ಅವರು ಪ್ರವಾಹ ಸಂತ್ರಸ್ತರಿಗೆ ನ್ಯಾಯ ಕೊಡಲು ಸರ್ಕಾರಕ್ಕೆ ಆಗುತ್ತಿಲ್ಲ. ಬೆಳಗಾವಿಯಲ್ಲಿ ಇಷ್ಟು ಜನ ಸಚಿವರು, ಎಂಪಿಗಳು ಇದ್ದು ನ್ಯಾಯ ಕೊಡಲು ಆಗಿಲ್ಲ. ಈ ಬಗ್ಗೆ ಬೆಳಗಾವಿ ಜಿಲ್ಲೆಯ ಜನರೇ ನಿರ್ಧರಿಸಬೇಕು.ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

Check Also

ಗೆಲುವಿನತ್ತ SSLC ವಿಧ್ಯಾರ್ಥಿಗಳ ಪಯಣ

SSLC ವಿದ್ಯಾರ್ಥಿಗಳ ಕೈ ಹಿಡಿದ “ಗೆಲುವಿನತ್ತ ನಮ್ಮ ಪಯಣ” ಪುಸ್ತಕ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದ ವಿದ್ಯಾರ್ಥಿಗಳು …

Leave a Reply

Your email address will not be published. Required fields are marked *