Breaking News
Home / Breaking News / ಬೆಳಗಾವಿ TO ಗೋಕಾಕ್ ಹೇರಾಯಿನ್ ಸಪ್ಲಾಯ್ ಮೂವರ ಅರೆಸ್ಟ್

ಬೆಳಗಾವಿ TO ಗೋಕಾಕ್ ಹೇರಾಯಿನ್ ಸಪ್ಲಾಯ್ ಮೂವರ ಅರೆಸ್ಟ್

ಗೋಕಾಕ ನಗರದಲ್ಲಿ ಹೆರಾಯಿನ್, ಗಾಂಜಾ ವಶ ; ನಾಲ್ವರ ಆರೆಸ್ಟ್

ಬೆಳಗಾವಿ – ನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬೆಳಗಾವಿಯ ಮೂವರು ಮತ್ತು ಖರೀದಿಗೆ ಮುಂದಾಗಿದ್ದ ಗೋಕಾಕದ ಒಬ್ಬನನ್ನು ಗೋಕಾಕ್ ನಗರದಲ್ಲಿ ಬಂಧಿಸಿರುವ ಪೊಲೀಸರು ಭಾರಿ ಪ್ರಮಾಣದಲ್ಲಿ ಪೆನ್ನಿಯನ್ನು ವಶಪಡಿಸಿಕೊಂಡಿದ್ದಾರೆ.

ಗೋಕಾಕ ಪಿಡಬ್ಲೂಡಿ ಐಬಿಯ ಹತ್ತಿರ ಬೆಳಗಾವಿಯ ಅಬ್ದುಲ್‌ಖಾದಿರ @ ಜಿಯಾ ನಾಯಿಕ, ಮೋಸಿನ್ ಜಮಾದಾರ ಮತ್ತು ಸಲ್ಮಾನ ಮುಲ್ಲಾ ಇವರು ತಮ್ಮ ಕಾರ್ (ನಂಬರ ಕೆಎ-5l-ಎಮ್ ಸಿ0787 ನೇದ್ದರಲ್ಲಿ) ನಲ್ಲಿ ನಿಷೇಧಿತ ಹೇರಾಯಿನ್ (ಪೆನ್ನಿ) ಮಾದಕ ವಸ್ತು ಮತ್ತು ಗಾಂಜಾ ಮಾದಕ ವಸ್ತುವನ್ನು ಬೆಳಗಾವಿಯಿಂದ ತೆಗೆದುಕೊಂಡು ಗೋಕಾಕಕ್ಕೆ ಹೋಗಿ ಗೋಕಾಕದಲ್ಲಿ ‘ಪಿಡಬ್ಲೂಡಿ ಐಬಿ ಗೇಟ್ ಎದುರು ಅರ್ಬಾಜ ಶಬಾಸಖಾನ ಸಾ: ಗೋಕಾಕ ಎಂಬಾತನಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಗೋಕಾಕ ಡಿಎಸ್ಪಿ ಮನೋಜಕುಮಾರ ನಾಯಿಕ ಮತ್ತು ಬೆಳಗಾವಿಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪಿಐ ವೀರೇಶ ಟಿ ದೊಡಮನಿ ಹಾಗೂ ಸಂಗಡ ನಾಗನಗೌಡ ಕಟ್ಟಿಮನಿಗೌಡ್ರ ಪಿಎಸ್‌ಐ ಸಿಇಎನ್, ಸಿಹೆಚ್‌ಸಿ 1414, ಎಸ್ ಆರ್. ಮಾಳಗಿ, ಸಿಹೆಚ್‌ಸಿ 1779 ವೈ ವಿ ಸಪ್ತಸಾಗರ, ಸಿಪಿಸಿ 3181 ಎಮ್ ಬಿ ಕಾಂಬಳೆ, ಸಿಪಿಸಿ 3179 ಜಿ ಎಸ್ ಲಮಾಣಿ, ಸಿಪಿಸಿ 3902 ಎನ್ ಆರ್ ಘಡಪ್ಪನವರ, ಹಾಗೂ ಗೋಕಾಕ ಶಹರ ಠಾಣೆಯ ಸಿಪಿಸಿ 369 ಆರ್ ಎನ್ ಮುರನಾಳ ಸಿಬ್ಬಂದಿ ಯೊಂದಿಗೆ ಗೋಕಾಕಕ್ಕೆ ತೆರಳಿ ಅಕ್ರಮವಾಗಿ ನಿಷೇಧಿತ ಪೆನ್ನಿ ಮಾದಕ ವಸ್ತು ಮತ್ತು ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುವಾಗ ದಾಳಿಮಾಡಿದರು.
1. ಅಬ್ದುಲ್‌ಖಾದಿರ @ ಜಿಯಾ ಅತಿಕ್‌ಉರ್‌ರಹಮಾನ್ ನಾಯಿಕ ಸಾ: ಸೆಕ್ಟರ್ ನಂಬರ 12, ನಂಬರ 2611, ಮಾಳಮಾರುತಿ ಎಕ್ಸಟೆನ್ಸನ್ ಮಹಾಂತೇಶ ನಗರ, ಬೆಳಗಾವಿ, 2. ಮೋಸಿನ್ ಅಬ್ದುಲ್‌ಮಜಿದ್ ಜಮಾದಾರ ಸಾ: ಮನೆ ನಂಬರ 463, ಮದರಸಾ ಹತ್ತಿರ, ಮುಖ್ಯರಸ್ತೆ, ಪಂತ ಬಾಳೆಕುಂದ್ರಿ ತಾ: ಬೆಳಗಾವಿ, 3. ಸಲ್ಮಾನ ರಫೀಕ ಮುಲ್ಲಾ ಸಾ: ಶಗನಮಟ್ಟಿ ಹಾಲಿ: ತಾರಿಹಾಳ ರೋಡ್, ಹಲಗಾ ತಾ: ಬೆಳಗಾವಿ, 4. ಅರ್ಬಾಜ ಇಸ್ಮಾಯಿಲ ಶಬಾಸಖಾನ ಸಾ: ಮಸ್ತಾನಸಾಬ ದರ್ಗಾ ಹತ್ತಿರ, ಮೋಮಿನ್ ಗಲ್ಲಿ ಗೋಕಾಕ ಇವರನ್ನು ಬಂಧಿಸಲಾಗಿದೆ.
ವಶಪಡಿಸಿಕೊಳ್ಳಲಾದ ವಸ್ತುಗಳು –

1) ನಿಷೇಧಿತ ಹೇರಾಯಿನ್ (ಪೆನ್ನಿ) -ಮಾದಕ ವಸ್ತು ಒಟ್ಟು 87 ಚೀಟಗಳು (8 ಗ್ರಾಂ)
26,100/- ರೂಪಾಯಿ
2) ಗಾಂಜಾ -ಮಾದಕ ಪದಾರ್ಥ 600 ಗ್ರಾಂ 20,000/- ರೂಪಾಯಿ
3) ಚವರಲೆಟ್ ಸ್ಪಾರ್ಕ ಕಂಪನಿಯ ಕಾರ್‌ ನಂಬರ್ ಕೆಎ-51-ಎಮ್-ಸಿ0787, 1,00,000/ ರೂ.
4) ಹೊಂಡಾ ಕಂಪನಿಯ ಡಿಯೊ ಮೋಟರ್ ಸೈಕಲ್ ನಂಬರ ಕೆಎ-49-ಡಬ್ಲ್ಯೂ-8018, 50,000 ರೂ
5) ಒಟ್ಟು 5 ಮೊಬೈಲ್‌ ಫೋನ್‌
ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *