ಬೆಳಗಾವಿ: ತಂದೆ-ತಾಯಿ ಹಿಂದೂ ಲಿಂಗಾಯತರಿದ್ದಾರೆ. ಸಂಬಂಧಿಕರು ಲಿಂಗಾಯತರಿದ್ದಾರೆ. ಆದರೆ, ಈ ಯುವಕ ಹೇಗೆ ನೇಕಾರ ಆದ್ರಿ. ಕಸುಬು ಆಧರಿಸಿ ನೀವು ಜಾತಿ ತೀರ್ಮಾನಿಸತೇನ್ರಿ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಸುಬು ಆಧರಿಸಿನ ಜಾತಿ ನಿರ್ಧರಿಸಬೇಡರಿ.
ಈಗ ಬ್ರಾಹ್ಮಣರು ಕಲ್ಲು ಒಡೆದರೆ ಅವರನ್ನು ವಡ್ಡರು ಎಂದು ಕರೆಯುತ್ತೀರಾ? ಸಮಗ್ರವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳರೀ ಎಂದು ಖಡಕ್ಕಾಗಿ ಅಧಿಕಾರಿಗೆ ಸೂಚಿಸಿದರು. ಬೇಕಾಬಿಟ್ಟಿಯಾಗಿ ಬೇಜವಾಬ್ದಾರಿಯಿಂದ ಏನೇನೋ ವರದಿ ಕೊಡಬ್ಯಾಡ್ರಿ. ಸರಿಯಾಗಿ.ಪರೀಶೀಲನೆ.ನಡೆಸುವಂತೆ ಸೂಚಿಸಿದರು ಜಿಲ್ಲೆಯಲ್ಲಿ ಜಾತಿ ಪರಶೀಲನೆ ಸರಿಯಾಗಿ ಆಗುತ್ತಿಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಡಿಸಿ ಜಯರಾಂ ಎಲ್ಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ