ಬೆಳಗಾವಿ-ಕಳೆದ ಮೂರು ದಿನಗಳಿಂದ ಬೆಳಗಾವಿ ಬಸ್ ನಿಲ್ಧಾಣದಲ್ಲಿ ಧರಣಿ ನಡೆಸುತ್ತಿರುವ ಸಾರಿಗೆ ನೌಕರರ ಮುಖಂಡರ ಜೊತೆ,ಮತ್ತು ರೈತ ಮುಖಂಡರ ಜೊತೆ ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ,ಎಸ್ ಪಿ ನಿಂಬರಗಿ,ಮತ್ತು ನಗರ ಪೋಲೀಸ್ ಆಯುಕ್ತರು ಸಭೆ ನಡೆಸಿದರು.
ಜಿಲ್ಲಾಡಳಿತ ಸಾರಿಗೆ ನೌಕರರ ಜೊತೆಗಿದೆ,ನೌಕರರಿಗೆ ಯಾವುದೇ ರೀತಿಯ ಸಮಸ್ಯೆ ಇದ್ದರೆ ಜಿಲ್ಲಾಡಳಿತ ಅದಕ್ಕೆ ತಕ್ಷಣ ಸ್ಪಂದಿಸುತ್ತದೆ. ಕೂಡಲೇ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿ ,ಎಲ್ಲರೂ ಡ್ಯುಟಿ ರಿಪೋರ್ಟ್ ಮಾಡಿ ಎಂದು ಜಿಲ್ಲಾಧಿಕಾರಿ ಹಿರೇಮಠ ಹೋರಾಟಗಾರರಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ಭಾಗವಹಿಸಿದ್ದ ಮಹಿಳಾ ಕಾರ್ಮಿಕರೊಬ್ಬರು ,ಸಾರಿಗೆ ಅಧಿಕಾರಿಗಳು ವಿನಾಕಾರಣ ಕಿರುಕುಳ ಕೊಡುತ್ತಾರೆ.ದಂಡ ಹಾಕ್ತಾರೆ,ಮಾನಸಿಕ ಹಿಂಸೆ ಆಗುತ್ತಿದೆ ಎಂದು ಡಿಸಿ ಎದುರು ಕಣ್ಣೀರು ಹಾಕಿದ್ರು.
ಯಾವುದೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತರಬೇಕು,ಸಾರಿಗೆ ನೌಕರರ ಹಿತ ಕಾಯಲು ನಾವು ಬದ್ಧರಾಗಿದ್ದೇವೆ. ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ರು.
ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಸಕ್ಸೆಸ್ ಆಯಿತು,ಗೋರಾಟಗಾರರು ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದಿಸಿದರು ಸಾರಿಗೆ ನೌಕರರ ಮುಖಂಡರು ಕರ್ತವ್ಯಕ್ಕೆ ಹಾಜರಾಗುವದಾಗಿ ಭರವಸೆ ನೀಡಿದರು.
ತಡರಾತ್ರಿಯಿಂದ ಜಿಲ್ಲಾಡಳಿತ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಯಿತು.ಬಸ್ ಗಳ ಓಡಾಟ ನಿರಾತಂಕವಾಗಿ ಸಾಗಲು ಅನೂಲವಾಯಿತು.