ಬೆಳಗಾವಿ, ನಗರದಲ್ಲಿ ಮೈಸೂರಿನ ಲುಕ್….!!!

ಬೆಳಗಾವಿ-ಮೈಸೂರಿನಲ್ಲಿ ಪಾಲಿಕೆ ಆಯುಕ್ತರಾಗಿ ಸೇವೆ ಮಾಡಿ ಬೆಳಗಾವಿಗೆ ಬಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಅವರು ಬೆಳಗಾವಿ ನಗರಕ್ಕೆ ಮೈಸೂರಿನ ಲುಕ್ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ‌‌ .

ರಾಜ್ಯೋತ್ಸವದ ಸಂಧರ್ಭದಲ್ಲಿ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿರುವ. ಚನ್ನಮ್ಮಾಜಿಯ ಮೂರ್ತಿಗೆ, ಕಿತ್ತೂರ ರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ ಬಿಂಬಿಸುವ ಅತ್ಯಾಕರ್ಷಕ ಆರ್ಟ್ ಮಾಡಿಸಿ ವೀರಮಾತೆಯ ಮೂರ್ತಿಗೆ ಹೊಸ ಲುಕ್ ಕೊಡಸಿದ್ದೇ ಪಾಲಿಕೆ ಆಯುಕ್ತ ಜಗದೀಶ್ ಅವರು

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಅವರ ಈ ವಿಭಿನ್ನ ಮತ್ತು ವಿಶೇಷ ಕಾರ್ಯಕ್ಕೆ ಬೆಳಗಾವಿಯ ಕನ್ಬಡಪರ ಸಂಘಟನೆಗಳಿಂದ ಅಪಾರ ಮೆಚ್ವುಗೆ ವ್ಯೆಕ್ತವಾಗಿತ್ತು.

ಬೆಳಗಾವಿ ನಗರವನ್ನು ಸುಂಧರೀಕರಣ ಮಾಡುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಇಟ್ಟಿರುವ ಜಗದೀಶ್ ಅವರು ಬೆಳಗಾವಿ ಮಹಾನಗರದ ಪ್ರಮುಖ ರಸ್ತೆಗಳಲ್ಲಿ,ರಸ್ತೆ ಪಕ್ಕದ ಕಾಂಪೌಂಡ್ ಗೋಡೆಗಳ ಮೇಲೆ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸುವ ಕಾಮಗಾರಿ ಆರಂಭಿಸಿದ್ದಾರೆ.

ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬೆಳಗಾವಿ ನಗರದಲ್ಲಿ ಈಗ ಕಾಂಪೌಂಡ್ ಗೋಡೆಗಳ ಮೇಲೆ ಚಿತ್ರ ಬಿಡಿಸಲು ಮೈಸೂರಿನಿಂದ ಇಬ್ಬರು ಕಲಾವಿದರು ಬೆಳಗಾವಿಗೆ ಬಂದಿದ್ದು ಅವರು ಬೆಳಗಾವಿಯಲ್ಲಿ ತಮ್ಮ ಕಲೆಯನ್ನು ಗೋಡೆಗಳ ಮೇಲೆ ಚಿತ್ರಿಸುತ್ತಿದ್ದು,ಮೈಸೂರಿನ ಇಬ್ಬರು ಕಲಾವಿದರು ಬೆಳಗಾವಿಯ ಕಲಾವಿದರಿಗೂ ತರಬೇತಿ ಕೊಡುತ್ತಿರುವದು ವಿಶೇಷ

ಈ ಮಹತ್ಕಾರ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಬಹುದಾಗಿದೆ.ಈ ಕಾರ್ಯಕ್ಕೆ ಈಗಾಗಲೇ ಬೆಳಗಾವಿ CREDAI ಸಂಸ್ಥೆ ರೂ. 35,000/- ಹಾಗೂ ಬೆಳಗಾವಿ ಇಂಜಿನೀಯರ್ಸ ಅಸೋಸಿಯೇಷನ್ ರೂ. 15,000/- ಹೀಗೆ ಒಟ್ಟು ರೂ.50,000/- ರೂಪಾಯಿಗಳ ಟೆರ್ರಾಕೊಟ್ಟಾ ಪೇಂಟನ್ನು ಬೆಳಗಾವಿ ನಗರದ ಸೌಂದರ್ಯೀಕರಣಕ್ಕೆ ಉಚಿತವಾಗಿ ಪಾಲಿಕೆಗೆ ಕೊಟ್ಟು ಸಹಕರಿಸಿ ಮಾದರಿಯಾಗಿದ್ದಾರೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *