Breaking News
Home / Breaking News / ಶಾಸಕ ಅಭಯ ಪಾಟೀಲರ ಛಲ..ಬೆಳಗಾವಿ ಐಟಿ ಪಾರ್ಕ್ ಗೆ ಭೀಮ ಬಲ…!!!

ಶಾಸಕ ಅಭಯ ಪಾಟೀಲರ ಛಲ..ಬೆಳಗಾವಿ ಐಟಿ ಪಾರ್ಕ್ ಗೆ ಭೀಮ ಬಲ…!!!

ಬೆಳಗಾವಿ-ಶಾಸಕ ಅಭಯ ಪಾಟೀಲ ಅಭಿವೃದ್ಧಿಯ ವಿಚಾರದಲ್ಲಿ ತುಂಬಾ ಹಠವಾದಿ,ಛಲಗಾರ,ಮಾಡಿದ ಸಂಕಲ್ಪ ಈಡೇರುವವರೆಗೂ ಸುಮ್ಮನೇ ಕುಳಿತುಕೊಳ್ಳದ ಜಿಗುಟ ಮನಸ್ಥಿತಿಯ ನಾಯಕ ಎನ್ನುವದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು, ಕಳೆದ ಒಂದು ದಶಕದಿಂದ ಬೆಳಗಾವಿಯಲ್ಲಿ ಐಟಿ,ಬಿಟಿ ಪಾರ್ಕ್ ಆಗಲೇಬೆಕೆಂದು ಹಠಕ್ಕೆ ಬಿದ್ದು,ಶಾಸಕರ ಸಹಿ ಸಂಗ್ರಹ ಮೂಲಕ ಹೋರಾಟ ಆರಂಭಿಸಿದ ಅವರು ಅಷ್ಟಕ್ಕೆ ಸುಮ್ಮನಾಗದೇ ವಿಧಾನಸಭೆಯ ಅಧಿವೇಶನದಲ್ಲಿ ಖಾಸಗಿ ನಿರ್ಣಯ ಮಂಡಿಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು,ಈ ಕುರಿತು ಕಳೆದ ಬಾರಿಯ ಅಧಿವೇಶನದಲ್ಲಿ ಸುಧೀರ್ಘ ಚರ್ಚೆಯಾಗಿ ಸರ್ಕಾರ ಕೊನೆಗೆ ಬೆಳಗಾವಿಯಲ್ಲಿ ಬೃಹತ್‌ ಐಟಿ,ಬಿಟಿ ಪಾರ್ಕ್ ನಿರ್ಮಾಣಕ್ಕೆ ಮಂಜೂರಾತಿ ನೀಡಿತ್ತು.

ಬೆಳಗಾವಿಯಲ್ಲಿ ಐಟಿ,ಬಿಟಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಪಡೆದಿರುವ ಅಭಯ ಪಾಟೀಲ ಇಂದು ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಬೆಳಗಾವಿ ಜಿಲ್ಲೆಯ ನಾಯಕರ ನಿಯೋಗದೊಂದಿಗೆ ಭೇಟಿಯಾಗಿ,ಬೆಳಗಾವಿ ನಗರದ ಕೆ.ಎಲ್.ಇ ಆಸ್ಪತ್ರೆಯ ಎದುರು,ಹೈವೇ ಪಕ್ಕದಲ್ಲಿ ರಕ್ಷಣಾ ಇಲಾಖೆಗೆ ಸೇರಿದ 774 ಎಕರೆ ಜಮೀನು ಇದ್ದು ಈ ಜಾಗೆಯಲ್ಲಿ ಐಟಿ,ಬಿಟಿ ಪಾರ್ಕ್ ನಿರ್ಮಾಣ ಮಾಡಲು ಜಮೀನನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಮನವಿ ಮಾಡಿಕೊಂಡರು.

ಬೆಳಗಾವಿಯಲ್ಲಿ ಐಟಿ,ಬಿಟಿ ಪಾರ್ಕ್ ನಿರ್ಮಾಣಕ್ಕೆ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ರಕ್ಷಣಾ ಇಲಾಖೆಯ 774 ಎಕರೆ ಜಮೀನು ಕೊಟ್ಟರೆ ಸುಮಾರು 1 ಲಕ್ಷ ಜನರಿಗೆ ಪರೋಕ್ಷವಾಗಿ,ಅಪೋಕ್ಷವಾಗಿ ಉದ್ಯೋಗ ಕಲ್ಪಿಸಲು ಸಾಧ್ಯವಿದೆ ಎಂದು ಶಾಸಕ ಅಭಯ ಪಾಟೀಲ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಡಿಸಿಎಂ ಹಾಗೂ ರಾಜ್ಯ ಐಟಿ,ಬಿಟಿ ಸಚಿವ ಅಶ್ವತ್ಥ ನಾರಾಯಣ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌,  ಉಪಸ್ಥಿತರಿದ್ದರು.

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *