
ಪೋಟೋ ಶಿರ್ಷಿಕೆ.
ಬೆಳಗಾವಿಯ ಕಂಗ್ರಾಳ ಗಲ್ಲಿಗೂ ಅಂಬ್ಯುಲೆನ್ಸ ದೌಡಾಯಿಸಿದ್ದು ಇಲ್ಲಿಯೂ ಸೊಂಕಿತ ಪತ್ತೆಯಾದ ಶಂಕೆ ಇದೆ.
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಮರಣಮೃದಂಗ ಮುಂದುವರೆದಿದೆ ಈ ಕಿಲ್ಲರ್ ವೈರಸ್ ಗೆ ಬೆಳಗಾವಿಯ ಮತ್ತೊಬ್ಬ ವ್ಯೆಕ್ತಿ ಬಲಿಯಾಗಿದ್ದಾನೆ.
ಬೆಳಗಾವಿಯ ಚವ್ಹಾಟ ಗಲ್ಲಿಯಲ್ಲಿ ಟೇಲರಿಂಗ್ ಉದ್ಯೋಗ ಮಾಡುತ್ತಿದ್ದ ಹಿಂಡಲಗಾ ರಕ್ಷಕ ಕಾಲೋನಿಯ ನಿವಾಸಿಯಾಗಿದ್ದ 58 ವರ್ಷದ ವ್ಯೆಕ್ತಿಯೊಬ್ಬ ಮೃತಪಟ್ಟಿದ್ದಾನೆ.ಈತನ ರಿಪೋರ್ಟ್ ಪಾಸಿಟೀವ್ ಎಂದು ದೃಡವಾಗಿದೆ ಎಂದು ನಂಬಲರ್ಹ ಮೂಗಳು ಖಚಿತಪಡಿಸಿವೆ.
ಕೆಲ ದಿನಗಳ ಹಿಂದೆ ಇಂದು ಮೃತಪಟ್ಟ ವ್ಯೆಕ್ತಿಯ ತಾಯಿಯೂ ಕೊರೋನಾಗೆ ಬಲಿಯಾಗದ್ದಳು ಎಂದು ತಿಳಿದು ಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ