ಮುಂದೆ ಆಗೋದು ಬಾಯಿಪಾಠ್…ಹಿಂದೆ ಆಗಿದ್ದು ಸಪಾಟ್.ಇದು ಬೆಳಗಾವಿ ಪಾಲಿಕೆಯ ಹೊಸ ಆಟ…!!!
ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಇರೋದೆ.ಗುತ್ತಿಗೆದಾರರ ಜೇಬು ತುಂಬಲು ಎನ್ನುವದು ಪಾಲಿಕೆ ಅಧಿಕಾರಿಗಳು ಮಾಡುತ್ತಿರುವ ಕರಾಮತ್ತುಗಳಿಂದಲೇ ಸಾಭೀತಾಗುತ್ತದೆ.
ಬೆಳಗಾವಿಯಲ್ಲಿ ರಾಷ್ಟ್ರದಲ್ಲಿಯೇ ಎರಡನೇಯ ಅತೀ ಎತ್ತರದ ,ದೇಶದಲ್ಲಿಯೇ ಮೊದಲನೇಯ ಬೃಹತ್ ಗಾತ್ರದ ನಮ್ಮ ಸ್ಬಾಭಿಮಾನದ ರಾಷ್ಟ್ರ ದ್ವಜ ಹಾರಾಡುತ್ತಿರುವದು ನಮ್ಮ ಬೆಳಗಾವಿಯಲ್ಲಿ ಎಂದು ಹೇಳುವ ಕಾಲವೊಂದಿತ್ತು ಆದ್ರೆ ಸ್ಥಳಕ್ಕೆ ಈಗ ದೊಡ್ಡ ಕೀಲಿ ಜಡಿಯಲಾಗಿದ್ದು ತಿರಂಗಾ ಧ್ವಜವನ್ನು ಹಾರಿಸದೇ ಪ್ಯಾಕ್ ಮಾಡಿ ಇಟ್ಟಿರುವದು ದುರ್ದೈವ
ಬೆಳಗಾವಿಯ ಕಿಲ್ಲಾ ಕೆರೆಯ ದಡದಲ್ಲಿ ಸರ್ಕಾರದ ನೂರು ಕೋಟಿ ವಿಶೇಷ ಅನುದಾನದಲ್ಲಿ ಕೋಟಿಗೂ ಹೆಚ್ವು ಹಣ ಖರ್ಚು ಮಾಡಿ ಅತೀ ಎತ್ತರದಲ್ಲಿ ಬೃಹತ್ ಗಾತ್ರದ ರಾಷ್ಟ್ರಧ್ವಜ ಹಾರಿಸಿ ಧ್ವಜ ಕಂಬದ ಸುತ್ತಲೂ ಆಕರ್ಷಕ ಗಾರ್ಡನ್ ನಿರ್ಮಿಸಲಾಗಿತ್ತು ,ಆದ್ರೆ ಈ ಗಾರ್ಡನ್ ಗೆ ಕೀಲೀ ಬಿದ್ದಿದ್ದು ಧ್ವಜ ಕಂಬವೂ ಧ್ವಜ ಇಲ್ಲದೇ ಖಾಲಿ..ಖಾಲಿಯಾಗಿದೆ.
ಕೋಟೆ ಕೆರೆಯಲ್ಲಿ ಪ್ರತಿ ಶನಿವಾರ ಭಾನುವಾರ ಲೇಜರ್ ಶೋ ನಡೆಸುತ್ತಿತ್ತು ಆದ್ರೆ ಈ ಲೇಜರ್ ಶೋ ಕೂಡಾ ಆಗೊಮ್ಮೆ ಈಗೊಮ್ಮೆ ಮಿನುಗಿ ಮಾಯವಾಗುತ್ತಿದೆ.
ಬೆಳಗಾವಿ ಸ್ಮಾರ್ಟ್ ಸಿಟಿಯಾಗುವ ಹೊಸ್ತಿಲ್ಲಲ್ಲಿದೆ,ನಗರದಲ್ಲಿ ಹೊಸ ಹೊಸ ಯೋಜನೆಗಳು ಅನುಷ್ಠಾನ ಗೊಳ್ಳುತ್ತಿವೆ,ಆದ್ರೆ ಈಗಾಗಲೇ ಅನುಷ್ಠಾನಗೊಂಡಿರುವ ಹಳೆಯ ಯೋಜನೆಗಳು ಹಳ್ಳ ಹಿಡಿಯುತ್ತಿವೆ,
ಕಿಲ್ಲಾ ಕೆರೆಯ ದಡದಲ್ಲಿರುವ ಧ್ವಜ ಕಂಬದ ಮೇಲೆ ನಿರಂತರವಾಗಿ ನಮ್ಮ ಸ್ವಾಭಿಮಾನದ ಧ್ವಜ ಹಾರಬೇಕೆನ್ನುವದು ಬೆಳಗಾವಿ ನಿವಾಸಿಗರ ಆಶಯವಾಗಿದೆ ಮಾಜಿ ಶಾಸಕ ಫಿರೋಜ್ ಸೇಠ ಅವರ ಕನಸಿನ ಕೂಸಾಗಿರುವ ಈ ಧ್ವಜದ ಪ್ರೋಜೆಕ್ಟ ಈಗ ಮಹತ್ವ ಕಳೆದುಕೊಂಡಿದ್ದು ಅತೀ ಎತ್ತರದ ದ್ವಜ ನಿರಂತರವಾಗಿ ಹಾರಿಸಲು ಪಾಲಿಕೆ ಅಧಿಕಾರಿಗಳಿಗೆ ಪುರಸೊತ್ತು ಸಿಗುತ್ತಿಲ್ಲವೇ , ಈ ಬಗ್ಗೆ ನಮ್ಮ ಅಪ್ಪಟ ದೇಶಾಭಿಮಾನಿಗಳಾದ ಕೇಂದ್ರ ಮಂತ್ರಿ ಸುರೇಶ್ ಅಂಗಡಿ,ಅನೀಲ ಬೆನಕೆ,ಅಭಯ ಪಾಟೀಲ ಕ್ರಮ ಕೈಗೊಳ್ಳಬೇಕು ಬೆಳಗಾವಿ ನಗರದಲ್ಲಿ ಅತೀ ಎತ್ತರದ ರಾಷ್ಟ್ರಧ್ವಜ ನಿರಂತರವಾಗಿ ಬಾನೆತ್ತರದಲ್ಲಿ ಹಾರಾಡಬೇಕು ಎನ್ನುವದು ರಾಷ್ಟ್ರಾಭಿಮಾನಿಗಳ ಒತ್ತಾಯ ಆಗಿದೆ.