Breaking News

ಕರ್ನಾಟಕದ ಬಿಜೆಪಿಯ ಎಲ್ಲಾ ಸಂಸದರು ಶಿಖಂಡಿಗಳು- ಬಾರಕೋಲ ಕುಲಕರ್ಣಿ

ಬೆಳಗಾವಿ-
ಬೆಳಗಾವಿಯಲ್ಲಿ ಕಳಸಾ, ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದ ಕೇಂದ್ರ ಮಂತ್ರಿಗಳ ವಿರುದ್ಧ ಕಿಡಿಕಾರಿದ್ದಾರೆ.

60 ವರ್ಷಗಳಿಂದ ಮಹದಾಯಿ ವಿಚಾರದಲ್ಲಿ ಅನ್ಯಾಯ ಆಗಿದೆ ಸ್ವಾರ್ಥಕ್ಕಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ರೈತರನ್ನು ಬಲಿ ಕೊಟ್ಟದ್ದಾರೆ ಇಲ್ಲಿಯ ವರೆಗೆ ಶಾಂತ ರೀತಿಯಲ್ಲಿ ಹೋರಾಟ ಮಾಡಿದ್ದೇವೆ ಇನ್ನು ಮುಂದೆ ಉಗ್ರ ಹೋರಾಟಕ್ಕೆ ಸಿದ್ದತೆ ಮಾಡುತ್ತಿದ್ದೇವೆ ಎಂದು ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಅನೇಕ ಭರವಸೆ ನೀಡಿದ ಬಿಜೆಪಿಯ
ಕರ್ನಾಟಕದ ಎಲ್ಲಾ ಸಂಸದರು ಶಿಖಂಡಿಗಳು
ಬಿಜೆಪಿ ಸರ್ಕಾರ ರೈತ ವಿರೋಧಿ ಸರ್ಕಾರ
ಪ್ರಲ್ಹಾದ್ ಜೋಶಿ, ಮಲಪ್ರಭಾ ನೀರನ್ನೇ ಕುಡಿಯುತ್ತಾರೆ
ಕಾಮಗಾರಿ ಆಗಲೇಬಾರದು ಎಂಬ ಉದ್ದೇಶ ಜೋಶಿಗೆ ಇದೆ ಎಂದು ಕುಲಕರ್ಣಿ ಆರೋಪಿಸಿದರು.

ಕಿತ್ತೂರು ಚನಮ್ಮ ಬ್ರಿಟಿಷರ ವಿರೋಧ ಹೋರಾಟದ ರೀತಿ ಹೋರಾಟ ಮಾಡುತ್ತೇವೆ
ರೈತರು ಯಾವುದೇ ಸಾಲ ತುಂಬಬಾರದು.
ನೀರು ಕೊಡೊವರಗೆ ಸಾಲ ತುಂಬಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು
ಬಿಜೆಪಿ ಸಂಸದರು ಎಲ್ಲರಿಗಿಂತ ದುಷ್ಟರು.
ಪ್ರಜಾಪ್ರಭುತ್ವ ವಿರೋಧಿಗಳು ಇವರ ವಿರುದ್ಧ ಹೋರಾಟ ಮಾಡಬೇಕು
ಕಳಸಾ ಬಂಡೂರಿ ನಾಲಾದ ಮೂರು ಬೊಗಸೆ ನೀರು ಕುಡಿದು ಸಾಯಬೇಕು ಎಂದುಕೊಂಡಿದೆ.
ಈಗ ರಾಜಕಾರಣಿಗಳ ಬಾಯಿಗೆ ಮೂರು ಹಿಡಿ ಮಣ್ಣು ಹಾಕಿ ಸಾಯಿತ್ತೇನೆ ಎಂದರು ಬಾರಕೋಲ ಕುಲಕರ್ಣಿ
ನರಗುಂದ ಬಂಡಾಯ ಹೋರಾಟದ ಮಾದರಿಯಲ್ಲಿ ಹೋರಾಟ ನಡೆಯುತ್ತದೆ
ಬೆಳಗಾವಿಯಲ್ಲಿ ಹೋರಾಟಗಾರ ವಿಜಯ ಕುಲಕರ್ಣಿ ಹೇಳಿದರು.

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *