Breaking News

ಕುದ್ರೆಮನಿ ಗ್ರಾಮದಲ್ಲಿ ಚಿರತೆ ಪತ್ತೆ …..ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭ …!!!

ಕಳಗಾವಿ- ಹಿಂಡಾಲ್ಕೋ ಆವರಣದಲ್ಲಿ ಕಾಣಿಸಿಕೊಂಡ ಚಿರತೆ ಇಂದು ಬೆಳಿಗ್ಗೆ ಕುದ್ರೆಮನಿ ಗ್ರಾಮದಲ್ಲಿ ಪತ್ತೆಯಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯುವ ಕಾರ್ಯಾಚರಣೆ ಆಭಿಸಿದ್ದಾರೆ

ಇಂದು ಬೆಳಿಗ್ಗೆ ಕುದ್ರೆಮನಿ ಗ್ರಾಮದ ಹದ್ದಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಆರ್ ಎಫ್ ಓ ಕಡೋಲ್ಕರ್ ತಮ್ಮ ತಂಡದೊಂದಿಗೆ ಕುದ್ರೆಮನಿ ಗ್ರಾಮಕ್ಕೆ ತೆರಳಿದ್ದು ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ

ಬೋನಿನಲ್ಲಿ ನಾಯಿ ಇಟ್ಟು ಚಿರತೆ ಹಿಡಿಯವ ತಯಾರಿಯಲ್ಲಿದ್ದು ಚಿರತೆ ನೋಡಲು ಜನ ತಂಡೋಪ ತಂಡವಾಗಿ ಅಲ್ಲಿಗೆ ಬಂದು ಗದ್ದಲ ಮಾಡುತ್ತಿರುವದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಜನಜಂಗುಳಿ ನಿಯಂತ್ರಣ ಮಾಡಲು ಕಾಕತಿ ಪೋಲೀಸರು ಕುದ್ರೆಮನಿ ಗ್ರಾಮಕ್ಕೆ ದೌಡಾಯಿಸೊದ್ದಾರೆ

ಕುದ್ರೆಮನಿ ಗ್ರಾಮದ ಹದ್ದಿ ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿದ್ದು ಚಾಲಾಕಿ ಚಿರತೆ ಮಹಾರಾಷ್ಟ್ರ ಹದ್ದಿಯಲ್ಲಿ ಸುತ್ತಾಡಿ ನೀರು ಕುಡಿಯಲು ಮಾತ್ರ ಕರ್ನಾಟಕದ ಹದ್ದಿಯಲ್ಲಿರುವ ಕುದ್ರೆಮನಿ ಗ್ರಾಮಕ್ಕೆ ನೀರು ಕುಡಿಯಲು ಬರುತ್ತಿದೆ

Check Also

46 ಜನ ಎಂಇಎಸ್ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್

ಬೆಳಗಾವಿ – ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕರಾಳ ದಿನಾಚರಣೆ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ 46 ಜನ ಎಂಇಎಸ …

Leave a Reply

Your email address will not be published. Required fields are marked *