ಬೆಳಗಾವಿ-;ಸರ್ಕಾರದ ಯೋಜನೆಗಳ ಕಥೆ ಇಷ್ಟೇ ಆ ಯೋಜನೆ ಅನುಷ್ಠಾನ ಆಗುವ ಮೊದಲೇ ಹಳ್ಳ ಹಿಡೀತೈತಿ ಇಲ್ಲಾ ಅಂದ್ರೆ ಆದ್ಮೇಲೆ ಹಳ್ಳ ಹಿಡಿತೈತಿ.ಸರ್ಕಾರದ ಅನುದಾನ,ಸರ್ಕಾರದ ಯೋಜನೆ, ಅಂದ್ರೆ ಬೇವರ್ಸಿ ಎನ್ನುವ ಪರಿಸ್ಥಿತಿ ಈಗ ಸಾಮನ್ಯವಾಗಿದೆ.
ಬೆಳಗಾವಿ ಮಹಾನಗರದ ಹೃದಯಭಾಗದಲ್ಲಿ ಇರುವ ಕೋಟೆ ಕೆರೆಯ ಅಭಿವೃದ್ದಿಗೆ ಕೋಟಿ,ಕೋಟಿ ಸುರಿದರೂ ಅದೇನು ಸುಧಾರಣೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಬೆಳಗಾವಿ ಮಹಾನಗರದ ಮಕ್ಕಳ ಮನರಂಜನೆಗೆ ಕೋಟೆ ಕೆರೆ ಬಿಟ್ರೆ ಬೇರೆ ಜಾಗವೇ ಇಲ್ಲ.ಬೆಳಗಾವಿಯ ಜನ ಕೋಟೆ ಕೆರೆಯ ದಡದಲ್ಲಿ ಎಂಜಾಯ್ ಮಾಡಲಿ ಅಂತಾ ಮಾಜಿ ಶಾಸಕ ಫಿರೋಜ್ ಸೇಠ ಅವರು ಕೋಟೆ ಕೆರೆಯ ಅಂದವನ್ನು ಹೆಚ್ಚಿಸಲು ಇಲ್ಲಿ ನಗರ ನಿವಾಸಿಗಳನ್ನು ಆಕರ್ಷಿಸಲು ಕೋಟೆ ಕೆರೆಯಲ್ಲಿ ಸಂಗೀತ ಕಾರಂಜಿ ಮ್ಯಸಿಕ್ ಫೌಂಟೇನ್ ಮಾಡಿದ್ರು.ಈ ಕಾರಂಜೆ ಪ್ರತಿ ಶನಿವಾರ ಮತ್ರು ಭಾನುವಾರ ಸಂಜೆ ಬೆಳಗಾವಿಯ ಜನರನ್ನು ರಂಜಿಸಿತ್ತು,ಈ ಕಾರಂಜಿ ಮೂರ್ನಾಲ್ಕು ತಿಂಗಳು ಮಾತ್ರ ಪುಟಿಯಿತು ನಂತರ ಈ ಸಂಗೀತ ಕಾರಂಜಿ ಹಳ್ಳ ಹಿಡಿದು ಕೋಟೆ ಕೆರೆಯಲ್ಲಿ ನೀರು ಪಾಲಾಗಿದ್ದು ಇತಿಹಾಸ
ಬೆಳಗಾವಿಯ ಕೋಟೆ ಕೆರೆಯಲ್ಲಿ ಸ್ಥಾಪಿತವಾದ ಸಂಗೀತ ಕಾರಂಜಿ ನಿರ್ವಹಣೆ ಇಲ್ಲದೇ ಕೆರೆಯಲ್ಲಿ ತೇಲಾಡುತ್ತಲೇ ಈಗ ದಡ ಸೇರಿದೆ. ಬೆಳಗಾವಿ ಮಹಾನಗರ ಪಾಲಿಕೆ ಸರ್ಕಾರದ ವಿಶೇಷ ಅನುದಾನದಲ್ಲಿ ಈ ಸಂಗೀತ ಕಾರಂಜಿಯನ್ನು ನಿರ್ಮಿಸಿ ನಂತರ ಅದನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವದರಿಂದ ಈ ಕಾರಂಜಿ ಈಗ ಸದ್ಯಕ್ಕೆ ಬೇವರ್ಸಿಯಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟೆ ಕೆರೆಯ ಸುತ್ತ ಮುತ್ತ ಸಿಮೆಂಟ್ ನಿಂದ ತಯಾರಿಸಲಾದ ಒಂದೆರಡು ಡೈನಾಸೋರ್, ಕೆರೆಯ ದಡದಲ್ಲಿ ಮೂರ್ನಾಲ್ಕು ವ್ಯಾಯಾಮ ಉಪಕರಣಗಳನ್ನು ಫಿಟ್ ಮಾಡಿ,ಹಾಗು ವಾಯು ವಿಹಾರಿಗಳ ವಿಶ್ರಾಂತಿಗೆ ಮೂರ್ನಾಲ್ಕು ಹಟ್ ಗಳನ್ನು ನಿರ್ಮಿಸಿ ಕೋಟಿ,ಕೋಟಿ ಲೂಟಿ ಹೊಡೆಯುವ ಕಾಮಗಾರಿ ಇಲ್ಲಿ ನಡೆದಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಅನುದಾನ ಯಾವ ರೀತಿ ದುರುಪಯೋಗ ಆಗಿದೆ ಅನ್ನೋದನ್ನು ತನಿಖೆ ಮಾಡಬೇಂದ್ರ ಕೋಟೆ ಕೆರೆಯ ಕಾಮಗಾರಿಯನ್ನು ಸರಿಯಾಗಿ ಪರಶೀಲನೆ ಮಾಡಿದ್ರೆ ಸಾಕು ಸ್ಮಾರ್ಟ್ ಸಿಟಿ ಕಾಮಗಾರಿಗಳ ಹುಳುಕು,ಕೊಳಕು ಎರಡೂ ಹೊರಬೀಳುವದರಲ್ಲಿ ಸಂದೇಹವೇ ಇಲ್ಲ.
ಮಳೆ ಬಂದಾಗ ಮಳೆಯ ನೀರನ್ನು ಕೆರೆಗೆ ಬಿಡಲು ಹೊಂಡ ನಿರ್ಮಿಸಲಾಗಿದೆ ಈ ಹೊಂಡದಲ್ಲಿರುವ ಗಲೀಜು ನೋಡಿದ್ರೆ ಸಾಕು ಕೋಟೆ ಕೆರೆ ಎಷ್ಟು ಅಭಿವೃದ್ಧಿ ಆಗಿದೆ.ಎನ್ನುವದನ್ನು ಲೆಕ್ಕ ಹಾಕಬಹುದು.