Breaking News
Home / Breaking News / ಕಂಬಕ್ಕೆ,ಹಗ್ಗ ಬಿಗಿದುಕೊಂಡು ಬಿಗಿಪಟ್ಟು…!!!

ಕಂಬಕ್ಕೆ,ಹಗ್ಗ ಬಿಗಿದುಕೊಂಡು ಬಿಗಿಪಟ್ಟು…!!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಕಂಬವನ್ನು ನಿಲ್ಲಿಸಿ,ಕನ್ನಡದ ಧ್ವಜವನ್ನು ಹಾರಿಸಿ,ಕನ್ನಡದ ಅಭಿಮಾನವನ್ನು ಪ್ರದರ್ಶಿಸಿದ,ಕನ್ನಡದ ಸೇನಾನಿಗಳು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಪಾಲಿಕೆ ಎದರು ಕನ್ನಡ ಧ್ವಜ ಹಾರಿಸಿರುವ ಕನ್ನಡದ ಹೋರಾಟಗಾರರು,ಧ್ವಜ ಕಂಬಕ್ಕೆ ಹಗ್ಗವನ್ನು ತೊಳಕು ಹಾಕಿ ಅದೇ ಹಗ್ಗವನ್ನು ಕುತ್ತಿಗೆಗೆ ಬಿಗಿದುಕೊಂಡು,ಕನ್ನಡ ಧ್ವಜವನ್ನು ಪ್ರಾಣ ಹೋದರೂ ತೆರವು ಮಾಡಲು ಬಿಡುವದಿಲ್ಲ ಎಂದು ಈ ಕನ್ನಡದ ಸೇನಾನಿಗಳು ಬಿಗಿಪಟ್ಟು ಹಿಡಿದಿದ್ದಾರೆ…

ಭೀಮಪ್ಪಾ ಗಡಾದ ಬೆಂಬಲ..

ಸಮಾಜ ಸೇವಕ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ ಕನ್ನಡಪರ ಹೋರಾಟಗಾರರು ಬೆಳಗಾವಿ ಮಹಾನಗರ ಪಾಲಿಕೆ ಎದುರು ನಡೆಸಿರುವ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ.

ಯಾವುದೇ ಕಾರಣಕ್ಕೂ ಕನ್ನಡದ ಧ್ವಜ ತೆರವು ಮಾಡಬಾರದು ಪಾಲಿಕೆ ಎದರು ನಿರಂತರವಾಗಿ ಕನ್ನಡದ ಧ್ವಜ ಹಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಜನಗನ ಮನ..,!!!

ಬೆಳಗಾವಿ ಮಹಾನಗರ ಪಾಲಿಕೆ ಎದುರು ನಿಲ್ಲಿಸಲಾದ ಕನ್ನಡದ ಧ್ವಜ ಕಂಬವನ್ನು ತೆರವುಗೊಳಿಸಲು, ಪೋಲೀಸರು ಮುಂದಾದ ಕೂಡಲೇ,ಪೋಲೀಸರು ಧ್ವಜ ಕಂಭಕ್ಕೆ ಕೈ ಹಚ್ವುತ್ತಿದ್ದಂತೆಯೇ ಕನ್ನಡಪರ ಹೋರಾಟಗಾರರು ರಾಷ್ಟ್ರಗೀತೆ ಹಾಡಲು ಶುರು ಮಾಡಿದ್ರು,ಪೋಲೀಸರು ರಾಷ್ಟ್ರಗೀತೆಗೆ ಗೌರವ ಸೂಚಿಸಿದರು…!!!

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *