ಬೆಳಗಾವಿ- ರೇಶನ್ ಕಾರ್ಡಗಳಿಗೆ ಆಧಾರ್ ಕಾರ್ಡಗಳ ಲಿಂಕ್ ಕೊಟ್ಟಿಲ್ಲ ಎಂದು ಜಿಲ್ಲೆಯ ಬಡವರಿಗೆ ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಬಡವರಿಗೆ ಪಡಿತರ ಧಾನ್ಯ ಕೊಟ್ಟಿಲ್ಲ ಆ ಧಾನ್ಯ ಎಲ್ಲಿ ಹೋಯಿತು ಎಂದು ಸಂಸದ ಪ್ರಕಾಶ ಹುಕ್ಕೇರಿ ಕೆಡಿಪಿ ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು
ಅಧಿಕಾರಿಗಳು ಆಧಾರ್ ಲಿಂಕ್ ಇಲ್ಲ ಅಂತ ರೇಶನ್ ಕೊಡುವದನ್ನು ನಿಲ್ಲಿಸಬೇಡಿ ತಲಾಠಿಗಳ ಮೂಲಕ ಆದಾರ್ ಲಿಂಕ್ ಪಡೆದುಕೊಳ್ಳಿ ಪ್ರತಿ ತಿಂಗಳು ಚೀಟಿ ಪಡೆಯುವ ಪದ್ದತಿ ನಿಲ್ಲಲಿ ಆಧಾರ್ ಇಲ್ಲ ಅಂತ ಬಡವರಿಗೆ ಅನ್ಯಾಯ ಮಾಡಬೇಡಿ ಎಂದು ಪ್ರಕಾಶ ಹುಕ್ಕೇರಿ ಸಭೆಯಲ್ಲಿ ಕಳಕಳಿಯ ಮನವಿ ಮಾಡಿಕೊಂಡರು
ಜಿಲ್ಲಾಧಿಕಾರಿ ಜಯರಾಂ ಮಾತನಾಡಿ ಜಿಲ್ಲೆಯಲ್ಲಿ ಆಧಾರ್ ಕಾರ್ಡ ಲಿಂಕ್ ಇಲ್ಲ ಅಂತ ನಾಲ್ಕು ಲಜ್ಷ ೫೫ ಸಾವಿರ ರೇಶನ್ ಕಾರ್ಡಗಳನ್ನು ಡಿಲಿಟ್ ಮಾಡಲಾಗಿತ್ತು ಈಗ ನಾಲ್ಕು ಲಕ್ಷ ಕಾರ್ಡಗಳ ಆಧಾರ ಲಿಂಕ್ ಪಡೆಯಲಾಗಿದೆ ಈ ಕಾರ್ಡಗಳ ಪಡಿತರ ಧಾನ್ಯ ಬಿಡುಗಡೆ ಆಗಿದೆ ಎಂದರು
ಮಾರ್ಚ ೧೫ ರೊಳಗೆ ಜಿಲ್ಲೆಯ ಎಲ್ಲ ತಹಶೀಲದಾರರು ಮಾರ್ಚ ಹದಿನೈದರೊಳಗಾಗಿ ಎಲ್ಲ ರೇಶನ್ ಕಾರ್ಡಗಳಿಗೆ ಆಧಾರ್ ಲಿಂಕ್ ಪಡೆಯಬೇಕು ಎಂದು ಡಿಸಿ ಸೂಚನೆ ನೀಡಿದರು