ಬೆಳಗಾವಿ-ಬೆಳಗಾವಿ ನಗರದ ಕೋಟೆ ಕೆರೆಯಲ್ಲಿ ಅತೀ ಎತ್ತರದ ರಾಷ್ಟ್ರ ಧ್ವಜ,ಬುದ್ಧನ ವಿಗ್ರಹ, ಜೊತೆಗೆ ತೆಲಾಡುವ ರೆಸ್ಟೋರೆಂಟ್, ಕೆರೆಯ ಸೌಂಧರ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ
ರಾಜ್ಯ ಸರ್ಕಾರ ಮಂಜೂರು ಮಾಡಿರುವ ನೂರು ಕೋಟಿ ವಿಶೇಷ ಅನುದಾನದಲ್ಲಿ ಮಹಾನಗರ ಪಾಲಿಕೆ ಈ ಮೂರು ಮಹತ್ವದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು ಛತ್ತೀಸಗಡದಲ್ಲಿ ಅತೀ ಎತ್ತರದ ರಾಷ್ಟ್ರಧ್ವಜ ಇದೆ ಇದೇ ಮಾದರಿಯಲ್ಲಿ ರಾಷ್ಟ್ರದಲ್ಲಿಯೇ ಅತೀ ಎತ್ತರವಾದ ರಾಷ್ಟ್ರಧ್ವಜ ಬೆಳಗಾವಿಯ ಕಿಲ್ಲಾ ಕೆರೆಯಲ್ಲಿ ಹಾರಾಡಲಿದೆ
ಹೈದ್ರಾಬಾದಿನ ಕೆರೆಯಲ್ಲಿ ಬೃಹತ್ತ ಆಕಾರದ ಭಗವಾನ ಬುದ್ಧನ ವಿಗ್ರಹ ಇದ್ದು ಇದೇ ಮಾದರಿಯಲ್ಲಿ ಬೆಳಗಾವಿ ಕಿಲ್ಲಾ ಕೆರೆಯಲ್ಲಿಯೂ ವಿಗ್ರಹ ಪ್ರತಿಷ್ಠಾಪಿಸಲು ಪಾಲಿಕೆ ಯೋಜನೆ ರೂಪಿಸಕೊಂಡಿದ್ದು ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ
ಈ ಎರಡೂ ಮಹತ್ವದ ಕಾರ್ಯಗಳ ಜತೆಗೆ ಕಿಲ್ಲಾ ಕೆರೆಯಲ್ಲಿ ತೇಲಾಡುವ ರೆಸ್ಟೋರೆಂಟ್ ಬೆಳಗಾವಿ ನಿವಾಸಿಗರ ಮನರಂಜನೆಯ ಕೇಂದ್ರವಾಗಲಿದೆ
ಬೆಳಗಾವಿ ಮಹಾನಗರ ಪಾಲಿಕೆ ಈ ಮೂರು ಕಾರ್ಯಗಳನ್ನು ಟೆಂಡರ್ ಕರೆಯುವದಾಗಿ ಹೇಳಿ ಹಲವಾರು ತಿಂಗಳು ಗತಿಸಿದರೂ ಟೆಂಡರ್ ಕರೆಯುವದು ಯಾವಾಗ ಈ ಮೂರು ಮಹತ್ವದ ಕಾಮಗಾರಿಗಳು ಸಾಕಾರಗೊಲ್ಳುವದು ಯಾವಾಗ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ
