ಬೆಳಗಾವಿ- ಕರ್ನಾಟಕ ಸರ್ಕಾರ ಮರಾಠಿ ಮಹಾ ಮೇಳಾವ್ ಗೆ ಬ್ರೇಕ್ ಹಾಕುತ್ತಿದ್ದಂತೆಯೇ ಬೆಳಗಾವಿಯ ಎಂಇಎಸ್ ನಾಯಕರು ಈಗ ಮಹಾರಾಷ್ಟ್ರಕ್ಕೆ ಪಲಾಯನ ಮಾಡಿದ್ದಾರೆ.
ಕರ್ನಾಟಕ ಸರ್ಕಾರ ಬೆಳಗಾವಿಯ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಿದೆ.ಮರಾಠಿಗರ ಮೇಲೆ ಪೋಲೀಸರ ದೌರ್ಜನ್ಯ ಹೆಚ್ಚಾಗಿದೆ ಎಂದು ಮೊಸಳೆ ಕಣ್ಣೀರು ಹಾಕಲು ಬೆಳಗಾವಿಯ ಎಂಇಎಸ್ ನಾಯಕರು ಮಹಾರಾಷ್ಟ್ರಕ್ಕೆ ಪಲಾಯನ ಮಾಡುತ್ತಿದ್ದಾರೆ.
ಡಿಸೆಂಬರ್ 26 ರಂದು ಬೆಳಗಾವಿಯ ಎಂಇಎಸ್ ನಾಯಕರು ಕೊಲ್ಹಾಪೂರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಿದ್ದಾರೆ ಚಲೋ ಕೊಲ್ಹಾಪೂರ್ ಎನ್ನುವ ಪೋಸ್ಟರ್ ಗಳನ್ಬು ಮಾಡಿ ನಾಡದ್ರೋಹಿಗಳು ಸೋಷಿಯಲ್ ಮೀಡಿಯಾ ದಲ್ಲಿ ಪ್ರಚಾರ ಶುರು ಮಾಡಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಹೋರಾಟ ಹಮ್ಮುಕೊಂಡರೆ ಇಲ್ಲಿ ಜನ ಸೇರುತ್ತಿಲ್ಲ.ಬೆಳಗಾವಿಯ ಮರಾಠಿಗರಿಗೆ ಢೋಂಗಿ ಎಂಇಎಸ್ ನಾಯಕರ ನಿಜ ಬಣ್ಣ ಗೊತ್ತಾಗಿದ್ದು ಅವರ ಹೋರಾಟಕ್ಕೆ ಬೆಳಗಾವಿಯಲ್ಲಿ ಜನ ಸ್ಪಂದಿಸುತ್ತಿಲ್ಲ ಎಂದು ಇವರು ಈಗ ತಮ್ಮ ಹೋರಾಟಗಳನ್ನು ಮಹಾರಾಷ್ಟ್ದದ ಕೊಲ್ಹಾಪೂರಕ್ಕೆ ಶಿಪ್ಟ್ ಮಾಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
