Breaking News
Home / Breaking News / ವಿಮಾನಗಳು ರದ್ದಾದ ಮೇಲೆ ಎಚ್ಚೆತ್ತುಕೊಂಡ ಬೆಳಗಾವಿಯ ಸಂಸದರು..!!

ವಿಮಾನಗಳು ರದ್ದಾದ ಮೇಲೆ ಎಚ್ಚೆತ್ತುಕೊಂಡ ಬೆಳಗಾವಿಯ ಸಂಸದರು..!!

ಬೆಳಗಾವಿ: ಬೆಳಗಾವಿಯಿಂದ ದೆಹಲಿ ಮತ್ತು ಮುಂಬೈಯ ನಡುವೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿಮಾನಗಳು ತಮ್ಮ ಸೇವೆಯನ್ನು ನಿಲ್ಲಿಸಿದ್ದು ಅವುಗಳನ್ನು ಪುನರಾರಂಭಿಸಬೇಕೆಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮನವಿ ನೀಡಿ ಒತ್ತಾಯಿಸಿದರು.

ಬುಧವಾರ ಡಿ-21 ರಂದು ನವದೆಹಲಿಯ ಸಂಸತ್ತಿನಲ್ಲಿ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆ ಮತ್ತು ಬೆಳಗಾವಿ ವಿಮಾನ ನಿಲ್ದಾಣವು ಉತ್ತರ ಕರ್ನಾಟಕದ ಅತ್ಯಂತ ಹಳೆಯ ವಿಮಾನ ನಿಲ್ದಾಣವಾಗಿದೆ. ಇದನ್ನು ಕರ್ನಾಟಕ ಮತ್ತು ರಾಯಲ್ ಏರ್ ಫೋರ್ಸ್ 1942 ರಲ್ಲಿ ಸ್ಥಾಪಿಸಲಾಗಿದ್ದು, ಪ್ರಸ್ತುತ ಬೆಳಗಾವಿ ವಿಮಾನ ನಿಲ್ದಾಣವು ಉಡಾನ-3 ಅಡಿಯಲ್ಲಿ 5 ಏರ್‌ಲೈನ್‌ಗಳ ಮೂಲಕ 13 ನಗರಗಳ ಸಂಪರ್ಕಗಳನ್ನು ನೀಡುತ್ತಿದೆ.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಉಡಾನ್ ಯೋಜನೆಯಡಿ ನೀಡಲಾದ ಸಹಾಯದ ಅವಧಿ 3 ವರ್ಷಗಳು, ಇದು 2023 ರಲ್ಲಿ ಕೊನೆಗೊಳ್ಳುತ್ತದೆ. ಪ್ರಸ್ತುತ ಅನೇಕ ವಿಮಾನಯಾನ ಸಂಸ್ಥೆಗಳು ಬೆಂಬಲದ ಕೊರತೆಯಿಂದಾಗಿ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸುತ್ತಿವೆ. ಬೆಳಗಾವಿಯ ಆರ್ಥಿಕ ಸಾಮರ್ಥ್ಯ ಮತ್ತು ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮತ್ತು ಮುಂಬೈ ದೆಹಲಿಯಂತಹ ಇತರ ವಿಮಾನ ನಿಲ್ದಾಣಗಳಿಗೆ 2026 ರವರೆಗೆ ವಿಮಾನಯಾನ ಯೋಜನೆಯ ಅವಧಿಯನ್ನು ವಿಸ್ತರಿಸಬೇಕೆಂದರಲ್ಲದೆ ಬೆಳಗಾವಿಯಿಂದ ವಾರಣಾಸಿಗೆ ಸಂಪರ್ಕ ಕಲ್ಪಿಸಲು ಬೆಳಗಾವಿಯ ಜನರಿಂದ ವಿನಂತಿ ಇದ್ದು ಬಹಳಷ್ಟು ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ವ್ಯಾಪಾರಸ್ಥರಿಗೆ, ಪ್ರವಾಸೋದ್ಯಮ ತಾಣಗಳಾದ ಅಯೋಧ್ಯೆ, ಪ್ರಯಾಗರಾಜ್, ಲಕ್ನೋ, ಹರಿದ್ವಾರ ಮೊದಲಾದ ಸ್ಥಳಗಳಿಗೆ ಹೆಚ್ಚಿನ ಸಂಪರ್ಕ ಕಲ್ಪಿಸಬೇಕಾಗಿದೆ. ಚೆನ್ನೈ, ಮೈಸೂರು, ಮಂಗಳೂರು ಮತ್ತು ಪುಣೆಗೆ ವಿಮಾನಗಳ ಹೆಚ್ಚು ಬೇಡಿಕೆ ಇದ್ದು ಬೆಳಗಾವಿ ವಿಮಾನ ನಿಲ್ದಾಣದಿಂದ ಮೊದಲಿದ್ದ ವಿಮಾನಗಳನ್ನು ಮುಂದುವರಿಸಲು ಮತ್ತು ಇತರ ಹೊಸ ನಗರಗಳಿಗೆ ಹೆಚ್ಚಿನ ವಿಮಾನಗಳನ್ನು ಪ್ರಾರಂಭಿಸಲು ವಿನಂತಿಸಲಾಗಿದ್ದು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆAದು ಸಂಸದ ಈರಣ್ಣ ಕಡಾಡಿ ಹೇಳಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬೆಳಗಾವಿ ಲೋಕಸಭಾ ಸಂಸದೆ ಮಂಗಲಾ ಸುರೇಶ ಅಂಗಡಿ ಉಪಸ್ಥಿತರಿದ್ದರು.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *