Breaking News

ಮಳೆಗಾಲದ ಅಧಿವೇಶನದಲ್ಲಿ ಬೆಳಗಾವಿ ಶಾಸಕರ ಧ್ವನಿ….!!

ಬೆಳಗಾವಿ- ನಮ್ಮ ಕ್ಷೇತ್ರದ ಶಾಸಕರು ಅಧಿವೇಶನದಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೋಗಿದ್ದಾರೆ ಅವರು ನಮ್ಮ ಪರವಾಗಿ ಸದನದಲ್ಲಿ ಅವಾಜ್ ಹಾಕ್ತಾರೋ ಇಲ್ಲವೋ ಎನ್ನುವ ಕುತೂಹಲ ಎಲ್ಲರಿಗೂ ಇರುವದು ಸಹಜ.

ಬೆಳಗಾವಿ ಜಿಲ್ಲೆಯ ಶಾಸಕರಾದ ರಾಜು ಕಾಗೆ,ಬಾಬಾಸಾಹಶೆಬ್ ಪಾಟೀಕ, ದುರ್ಯೋಧನ ಐಹೊಳೆ,ಮಹಾಂತೇಶ್ ಕೌಜಲಗಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವಾರು ಜನ ಶಾಸಕರು ಸೋಮವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಭಾಗವಹಿಸಿ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದಿದ್ದಾರೆ.

ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ದೊಡ್ಡ ಜಿಲ್ಲೆಯಾಗಿದೆ. ಕಾಗವಾಡ ಕ್ಷೇತ್ರದಲ್ಲಿ ಕೃಷ್ಣಾ ನದಿ ಹರಿದು ಹೋಗಿದೆ.ಇಲ್ಲಿ ಮೀನುಗಾರರ ಸಂಖ್ಯೆಯೂ ಹೆಚ್ಚಾಗಿದೆ. ಮೀನುಗಾರಿಕೆ ಇಲಾಖೆ ಕೇವಲ 6 ರಿಂದ 7;ಜನ ಮೀನುಗಾರರಿಗೆ ಮನೆಗಳನ್ನು ಮಂಜೂರು ಮಾಡಿದೆ.ಕೆಲವೇ ಕೆಲವು ಮೀನುಗಾರರಿಗೆ ಬೈಕ್ ಹಾಗು ಕಿಟ್ ಗಳನ್ನು ಕೊಟ್ಟಿದೆ.ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ಮೀನುಗಾರರ ಕ್ಷೇಮಾಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಮಾತನಾಡಿ ಬೈಲಹೊಂಗಲ ಡಿಪೋದಲ್ಲಿ ಲಕ್ಷಾಂತರ ಕೀ.ಮೀ ಓಡಾಡಿದ ಹಳೆಯ ಬಸ್ಸುಗಳಿದ್ದು ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.ಬೈಲಹೊಂಗಲ ಡಿಪೋಗೆ ಹೊಸ ಬಸ್ ಗಳನ್ನು ಕೊಡಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿಕೊಂಡರು ವಾಯುವ್ಯ ಬಸ್ ನಿಗಮದಲ್ಲಿ ಹೊಸ ಬಸ್ ಗಳನ್ನು ಖರೀಧಿ ಮಾಡಲಾಗುತ್ತಿದೆ.ಆದಷ್ಡು ಬೇಗನೆ ಹೊಸ ಬಸ್ ಕೊಡುವದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ರು.

ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಮತ್ತು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು ಕಿತ್ತೂರು ಮತ್ತು ರಾಯಬಾಗ್ ಕ್ಷೇತ್ರಗಳಲ್ಲಿ ಖಾಲಿ ಇರುವ ಸರ್ವೇಯರ್ ಮತ್ತು ಎಡಿಎಲ್ಆರ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಪ್ರಶ್ನೋತ್ತರ ಕಲಾಪದಲ್ಲಿ ಕಂದಾಯ ಸಚಿವರ ಗಮನ ಸೆಳೆದರು.

ರಾಜ್ಯದಲ್ಲಿ ಸರ್ವೆಯರ್ ಮತ್ತು ಎಡಿಎಲ್ಆರ್ ಮತ್ತು ಭೂಮಾಪಕರ ಹುದ್ದೆಗಳು ಖಾಲಿ ಇವೆ.ಖಾಲಿ ಹುದ್ದೆಗಳನ್ನು ತುಂಬುವ ಪ್ರಸ್ತಾವಣೆಯನ್ನು ಸಿಎಂ ಅನುಮೋದಿಸಿದ್ದು kpsc ಮೂಲಕ ನೇರ ನೇಮಕಾತಿ ಮೂಲಕ ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದ್ರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *