Breaking News

ಸದನದಲ್ಲಿ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಪ್ರಸ್ತಾಪ…

ಬೆಂಗಳೂರು- ಮಳೆಗಾಲದ ಅಧಿವೇಶನ ಶುರುವಾಗಿದೆ.ಮೊದಲ ದಿನದ ಸದನದಲ್ಲಿ ವಾಲ್ಮೀಕಿ ನಿಗಮದ ಹಗರಣದ ಕುರಿತು ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ

ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ವಾಲ್ಮೀಕಿ ನಿಗಮದ ಹಗರಣದ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಸದಸ್ಯರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು ಈ ಹಗರಣದ ಕುರಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಸುಧೀರ್ಘವಾಗಿ ಮಾತನಾಡಿ,187 ಕೋಟಿ ರೂ ನಿಗಮದ ಹಣ ಹೇಗೆ ವರ್ಗಾವಣೆ ಆಯ್ತು ಎನ್ನುವದರ ಬಗ್ಗೆ ಮಾತಾಡಿದ್ರು.

ಆರ್ ಅಶೋಕ್ ಅವರು ಮಾತಾಡುವಾಗ ಸಿಎಂ,ಡಿಸಿಎಂ ಒಂದೇ ಪಕ್ಷದವರು, ವಾಲ್ಮೀಕಿ ನಿಗಮಗದಲ್ಲಿ ನಡೆದಿರುವ ಹಗರಣದ ಬಗ್ಗೆ ಇಬ್ಬರು ವಿಭಿನ್ನವಾಗಿ ಹೇಳಿಕೆ ಕೊಟ್ಟಿದ್ದಾರೆ.ಡಿ.ಕೆ ಶಿವಕುಮಾರ್ ಅವರು ನಾಗೇಂದ್ರ ಅವರು ತಪ್ಪು ಮಾಡಿಲ್ಲ,ತನಿಖೆ ಮುಗಿದ ಬಳಿಕ ಸತ್ಯಾಂಶ ಹೊರಗೆ ಬರುತ್ತೆ ಅಂತಾ ಹೇಳಿದ್ದಾರೆ.ಸಿಎಂ ಅವರು ತನಿಖೆಗೆ ಸಿಬಿಐ ಬರುತ್ತಾ ಬರಲಿ,ಈಡಿ ಬರುತ್ತಾ ಬರಲಿ ಎಂದು ಹೇಳಿದ್ದಾರೆ.ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರು ಲೂಟಿ ಆಗಿರುವದು ದಲಿತರ ಹಣ, ಬಿಜೆಪಿಯವರೇ ಬಿಟ್ರು ನಾನು ಬಿಡೋಲ್ಲ.ಅಂತಾ ಹೇಳಿದ್ದಾರೆ ಹಗರದ ಕುರಿತು ಕಾಂಗ್ರೆಸ್ ನಾಯಕರೇ ವಿಭಿನ್ನ ಹೇಳಿಕೆ ಕೊಟ್ಟಿದ್ದಾರೆ ಎಂದು ಆರ್ ಅಶೋಕ್ ಹೇಳಿದ್ರು

ಇದೇ ಸಂಧರ್ಬದಲ್ಲಿ ವಾಲ್ಮೀಕಿ ಹಗರಣದ ವಿಚಾರವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ವಾಲ್ಮೀಕಿ ಹಗರಣ ಸರ್ಕಾರಕ್ಕೆ ಮುಜುಗರ ತಂದಿದೆ.ತನಿಖೆ ನಡೆದಿದೆ.ಈಗಲೇ ಏನು ಹೇಳೋಕೆ ಆಗೋಲ್ಲ, ಎಂದು ಹೇಳಿದ್ದಾರೆ ಎಂದು ಆರ್ ಅಶೋಕ್ ಅವರು ಸತೀಶ್ ಜಾರಕಿಹೊಳಿ ಅವರ ಹೇಳಿಕೆ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದರು.

ಈ ಸಂಧರ್ಭದಲ್ಲಿ ಮದ್ಯಪ್ರವೇಶಿಸಿದ ಡಿ.ಕೆ ಶಿವಕುಮಾರ್ ಅವರು ನಾಗೇಂದ್ರ ಅವರನ್ನು ಕರೆಯಿಸಿ ಮಾತಾಡಿದ್ದೇನೆ ನಾನೂ ಏನೂ ತಪ್ಪು ಮಾಡಿಲ್ಲ ಅಂತಾ ಹೇಳಿದ್ದಾರೆ.ತನಿಖೆ ಮುಗಿಯಲಿ ನಾಗೇಂದ್ರ ಅವರು ಇದರಿಂದ ಹೊರಗೆ ಬರ್ತಾರೆ ಅಂತಾ ಆನ್ ರಿಕಾರ್ಡ್ ಇವತ್ತು ಹೇಳ್ತೇನಿ ಅಂತಾ ಡಿ.ಕೆ ಶಿವಕುಮಾರ್ ಆರ್ ಅಶೋಕ್ ಅವರಿಗೆ ಪ್ರತ್ಯುತ್ತರ ನೀಡಿದ್ರು.

Check Also

ಎಸ್ ಎಂ ಕೃಷ್ಣ ನಿಧನ, ನಾಳೆ ಸರ್ಕಾರಿ ರಜೆ ಘೋಷಣೆ,

ಎಸ್​ಎಂ ಕೃಷ್ಣ ನಿಧನ: ರಾಜ್ಯದಲ್ಲಿ 3 ದಿನ ಶೋಕಾಚರಣೆ; ನಾಳೆ ಸರ್ಕಾರಿ ರಜೆ ಘೋಷಣೆ, ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಅಂತ್ಯಕ್ರಿಯೆ …

Leave a Reply

Your email address will not be published. Required fields are marked *