ಬೆಳಗಾವಿ- ಸ್ಥಳಿಯ ಸಂಸ್ಥೆಗಳ ವಿಧಾನ ಪರಿಷತ್ತಿನ ಚುನಾವಣೆ ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಗಾವಿ ಭೇಟಿಯ ಬಳಿಕ ಗುಣಾಕಾರ,ಭಾಗಾಕಾರದ ಸೂತ್ರವೇ ಬದಲಾಗಿದೆ.
ಬೆಳಗಾವಿ ಕ್ಷೇತ್ರದ ಪರಿಷತ್ತಿನ ಚುನಾವಣೆ,ರಾಜ್ಯದ ಗಮನ ಸೆಳೆದಿದೆ,ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಗುದ್ದಾಟ ಅಲ್ಲವೇ ಅಲ್ಲ,ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಜಿದ್ದಾಜಿದ್ದಿಯ ಯುದ್ಧ ಅನ್ನೋದು ಸ್ಪಷ್ಟವಾಗಿದೆ.ಈ ಯುದ್ಧದಲ್ಲಿ ಯಾರು ವಿಜಯಶಾಲಿ ಆಗ್ತಾರೆ,ಫಲಿತಾಂಶ ಏನಾಗುತ್ತದೆ ತ್ರೀಬಲ್ ಸೆಣಸಾಟದಲ್ಲಿ ಯಾರಿಗೆ ಟ್ರಬಲ್ ಅಂತಾ ಹೇಳೋದು ಕಷ್ಟವಾಗಿದೆ.ಯಾಕಂದ್ರೆ ಬೆಳಗಾವಿ ರಾಜಕಾರಣವೇ ಹಾಗೆ ಹೇಳೋದೊಂದು ಮಾಡೋದೊಂದು ಇದು ಬೆಳಗಾವಿ ಪಾಲಿಟೀಕ್ಸ್…
ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಡಿಹೊಳಿ ಅವರನ್ನು ಗೆಲ್ಲಿಸಲು ಡಿ.ಕೆ ಶಿವಕುಮಾರ್ ತಂತ್ರ ರೂಪಿಸಿದ್ದಾರೆ.ಅವರ ಬಲಗೈ ಬಂಟ ಶಾಸಕ ಹ್ಯಾರೀಸ್ ಅವರನ್ನು ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ವೀಕ್ಷಕರನ್ನಾಗಿ ನೇಮಿಸಿ ಇಲ್ಲಿಯ ಕ್ಷಣ,ಕ್ಷಣದ ಮಾಹಿತಿ ಪಡೆದು ಡಿಕೆಶಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಜಾರಕಿಹೊಳಿ ಸಹೋದರರ ನಡೆ ಯಾರ ತಲೆಗೂ ಹತ್ತುತ್ತಿಲ್ಲ,ಸಹೋದರರ ನಡೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ತಲೆ ಕೆಡಿಸಿರುವದು ಸತ್ಯ.ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರಿಗೆ ಇರುವ ಹಿಡಿತ,ಅವರ ನೆಟವರ್ಕ್, ಅವರ ಬೆಂಬಲಿಗರ ಪಡೆಯ ಪ್ರಾಮಾಣಿಕ ಶ್ರಮ ಲಖನ್ ಜಾರಕಿಹೊಳಿ ಅವರನ್ನು ಪರಿಷತ್ತಿಗೆ ಮುಟ್ಟಿಸುತ್ತದೆ ಎನ್ನುವ ಮಾತು,ಬೆಳಗಾವಿ ಜಿಲ್ಲೆಯಲ್ಲಿ ಈಗ ಸಾರ್ವತ್ರಿಕವಾಗಿದೆ.
ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರು ಎರಡು ಬಾರಿ ಗೆದ್ದು ಮೂರನೇಯ ಬಾರಿಗೆ ಜಯಬೇರಿ ಬಾರಿಸಲು ಪ್ರಯತ್ನ ಮುಂದುವರೆಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 13 ಜನ ಬಿಜೆಪಿ ಶಾಸಕರಿದ್ದು,ಸಿಎಂ ಬೊಮ್ಮಾಯಿ ಬೆಳಗಾವಿಯಿಂದ ನಿರ್ಗಮಿಸಿದ ತಕ್ಷಣ ಫೀಲ್ಡ್ ಗೆ ಇಳಿದಿದ್ದು ಬಿಜೆಪಿ ಶಾಸಕರ ನಿಷ್ಠೆಯೇ ಮಹಾಂತೇಶ್ ಕವಡಗಿಮಠ ಅವರ ಗೆಲುವಿಗೆ ಕಾರಣ ಆಗಲಿದೆ.
ಒಟ್ಟಾರೆ ಬೆಳಗಾವಿ ಪರಿಷತ್ತಿನ ಚುನಾವಣೆ ರಾಜ್ಯದ ಗಮನ ಸೆಳೆದಿದ್ದು ಮೂವರು ದಿಗ್ಗಜರಲ್ಲಿ ಇಬ್ಬರು ಗೆಲ್ತಾರೆ ಒಬ್ರು ಸೋಲ್ತಾರೆ,ಈ ತ್ರಿಬಲ್ ಫೈಟ್ ನಲ್ಲಿ ಯಾರಿಗೆ ಟ್ರಬಲ್ ಅಂತಾ ಡಿಸೆಂಬರ್ 14 ರಂದು ಗೊತ್ತಾಗಲಿದೆ.ಅಂದು ಮತ ಏಣಿಕೆ ಕಾರ್ಯ ಚಿಕ್ಕೋಡಿಯಲ್ಲಿ ನಡೆಯೋದು ಕನಫರ್ಮ ಆಗಿದೆ.