Breaking News

ಅಭ್ಯರ್ಥಿಗಳ ಘೋಷಣೆ,ನಾ ಮೊದಲೋ,ನೀ..ಮೊದಲೋ….???

ಬೆಳಗಾವಿ-ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಬಿರುಸಿನ ಕಸರತ್ತು ನಡೆದಿದೆ.

ಈ ವಿಚಾರದಲ್ಲಿ ಎರಡೂ ಪಕ್ಷಗಳು ಕಾದುನೋಡುವ ತಂತ್ರವನ್ನು ಅನುಸರಿಸುತ್ತಿವೆ.ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬಳಿಕ,ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆಗಳೇ ಹೆಚ್ಚಾಗಿವೆ,ಈ ಎರಡೂ ಪಕ್ಷಗಳು ಅಣಬ್ಯರ್ಥಿಗಳ ಆಯ್ಕೆಯ ಕುರಿತು ರಾಜಧಾನಿ ಬೆಂಗಳೂರಿನಲ್ಲಿ ತಂತ್ರ,ಪ್ರತಿತಂತ್ರ ರೂಪಿಸುತ್ತಿವೆ.

ಶನಿವಾರ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ದಿನವಿಡೀ ಸರಣಿ ಸಭೆಗಳನ್ನು ನಡೆಸಿ ಬೆಳಗಾವಿ ಜಿಲ್ಲೆಯ ನಾಯಕರ ಜೊತೆ ಸುದೀರ್ಘ ಚರ್ಚೆ ಮಾಡಿ ಒಂದು ಸೂತ್ರ ರೆಡಿ ಮಾಡಿದ್ದಾರೆ.ಬಿಜೆಪಿ ಒಂದು ವೇಳೆ ಲಿಂಗಾಯತ ಸಮುದಾಯದ ಅಣಬ್ಯರ್ಥಿ ಘೋಷಣೆ  ಮಾಡಿದರೆ,ಕಾಂಗ್ರೆಸ್ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ನಿರ್ಧಿರಿಸಿದೆ.ಬಿಜೆಪಿ ಲಿಂಗಾಯತ ಸಮುದಾಯ ಬಿಟ್ಡು ಬೇರೆ ಸಮುದಾಯದ ಅಣಬ್ಯರ್ಥಿಯನ್ನು ಘೋಷಣೆ ಮಾಡಿದರೆ,ಕಾಂಗ್ರೆಸ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಕಣಕ್ಕಿಳಿಸು ಕಾಂಗ್ರೆಸ್ ಫಾರ್ಮುಲಾ ರೆಡಿ ಮಾಡಿದೆ ಎಂದು ನಂಬಲರ್ಹ ಮೂಲಗಳುತಿಳಿಸಿದ್ದು ,ಕಾಂಗ್ರೆಸ್ ನಾಯಕರು ಬಿಜೆಪಿ ನಡೆ ಯಾವ ಕಡೆ,ಅನ್ನೋದನ್ನು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಅಭ್ಯರ್ಥಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಕೋರ್ ಕಮೀಟಿ ಸಭೆ ನಡೆದಿದೆ.ಬಿಜೆಪಿ ಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವದರಿಂದ ಸಹಜವಾಗಿ ಒತ್ತಡವೂ ಹೆಚ್ಚಾಗಿದೆ, ಬಲ್ಲ ಮೂಲಗಳ ಪ್ರಕಾರ ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ನಾಲ್ಕು ಜನರ ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ,ಮಾಜಿ ಶಾಸಕ ಸಂಜಯ ಪಾಟೀಲ,ಎಂ.ಬಿ ಝಿರಲಿ,ಡಾ. ರವಿ ಪಾಟೀಲ,ಮತ್ತು ಸುರೇಶ್ ಅಂಗಡಿ ಅವರ ಪುತ್ರಿ ಶ್ರದ್ಧಾ ಶೆಟ್ಟರ್ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ ಎಂದು ಗೊತ್ತಾಗಿದೆ.

ಕಂದಾಯ ಸಚಿವ ಆರ್ ಅಶೋಕ ಅವರು ಬೆಳಗಾವಿಯಲ್ಲಿ ಶನಿವಾರ ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎನ್ನುವ ಸುಳಿವು ನೀಡಿದ್ದು,ಬಿಜೆಪಿ ಹೈಕಮಾಂಡ್ ಕೋರ್  ಕಮೀಟಿ ಶಿಫಾರಸು ಮಾಡಿದ ನಾಲ್ವರಲ್ಲಿ ಒಂದು ಹೆಸರನ್ನು ಘೋಷಣೆ ಮಾಡುತ್ತದೆಯೋ ಅಥವಾ,ಈ ನಾಲ್ಕೂ ಹೆಸರು ಬಿಟ್ಟು ಸಾಮಾನ್ಯ ಕಾರ್ಯಕರ್ತನ ಹೆಸರು  ಘೋಷಣೆ ಮಾಡುತ್ತದೆಯೋ ಅನ್ನೋದನ್ನು ಕಾದು ನೋಡಬೇಕು,ಯಾಕಂದ್ರೆ ಬಿಜೆಪಿ ನಿಲುವು ತರ್ಕಕ್ಕೆ ನಿಲಕದ್ದು ಎನ್ನುವದು ಎಲ್ಲರಿಗೂ ಖಾತ್ರಿಯಾಗಿದೆ,ಬಿಜೆಪಿ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎನ್ನವ ಸುದ್ಧಿ ಈಗ ಪ್ರಚಾರದಲ್ಲಿದೆ.

ಬಿಜೆಪಿ ಇನ್ನೊಂದು ಆಯಾಮದಲ್ಲಿ ವಿಚಾರ ಮಾಡುತ್ತಿದೆ,ಈ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಅರ್ದ ಶತಕ ದಾಟಿದ್ದು,ಒಬ್ಬರಿಗೆ ಟಿಕೆಟ್ ಕೊಟ್ಟರೆ ಇನ್ನೊಬ್ಬರು ಸಿಟ್ಟಾಗಿ ಗುಂಪುಗಾರಿಕೆ ಮಾಡಬಹುದು ಎನ್ನುವ ಮುಂದಾಲೋಚನೆ ಬಿಜೆಪಿ ನಾಯಕರಿಗೆ ಇದೆ,ಅದಕ್ಕಾಗಿ ಈ ಎಲ್ಲ ಮುಜುಗರ ದಿಂದ ಪಾರಾಗಲು ಬಿಜೆಪಿ ಸುರೇಶ್ ಅಂಗಡಿ ಅವರ ಪುತ್ರಿ ಶ್ರದ್ಧಾ ಶೆಟ್ಟರ್ ಅವರಿಗೆ ಕಣಕ್ಕಿಳಿಸುವ ಚಿಂತನೆ ಬಿಜೆಪಿ ಹೈಕಮಾಂಡ್ ಮಾಡುತ್ತಿದೆ ಎಂದು ತಿಳಿದು ಬಂದಿದ್ದು,ಶ್ರದ್ಧಾ  ಶೆಟ್ಟರ್ ಅವರನ್ನು ಕಣಕ್ಕಿಳಿಸಿದ್ರೆ, ಜಾತಿ,ಅನುಕಂಪ ವರ್ಕೌಟ್ ಆಗುತ್ತದೆ,ಬಿಜೆಪಿ ಸುಲಭ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರವೂ ಇದೆ.

ಒಟ್ಟಾರೆ ಬೆಳಗಾವಿ ಉಪಕದನಕ್ಕೆ ಪೈಲವಾನ್ ಗಳನ್ನು ಕಣಕ್ಕಿಳಿಸುವ ಕಸರತ್ತು ಜೋರಾಗಿಯೇ ನಡೆದಿದ್ದು,ಈ ವಿಚಾರದಲ್ಲಿ ನಾ..ಮೊದಲೋ .ನೀ ಮೊದಲೋ ಎನ್ನುವ ಸೂತ್ರವನ್ನು ಕಾಂಗ್ರೆಸ್ ಮತ್ತು ಬಿಜೆಪಿ,ಎರಡೂ ಪಕ್ಷಗಳು ಅನುಸರಿಸುತ್ತಿವೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *