Breaking News

ಬೆಳಗಾವಿಯಲ್ಲಿ ಈ ಹಿಂದೆ ಯಾವಾಗ ಲೋಕಸಭೆ ಉಪ ಚುನಾವಣೆ ನಡೆದಿತ್ತು ಗೊತ್ತಾ…..???

ಬೆಳಗಾವಿ-ಎಪ್ರೀಲ್ 17 ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು ಈ ಹಿಂದೆಯೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು ಈಗ ನಡೆಯಲಿರುವ ಉಪ ಚುನಾವಣೆ ಎರಡನೇಯ ಉಪ ಚುನಾವಣೆಯಾಗಿದೆ.

1962 ರಲ್ಲಿ ಬಿ.ಎನ್ ದಾತಾರ್ ಅವರು ಕೇಂದ್ರದ ಸಚಿವ ಸಂಪುಟದಲ್ಲಿ ಹೋಮ್ ಅಫೇಯರ್ಸ್ ಡೆಪ್ಯೂಟಿ ಮಿನಿಸ್ಟರ್ ಆಗಿದ್ದರು.1962 ರಲ್ಲಿ ಅವರ ಅಕಾಲಿಕ ನಿಧನದಿಂದಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 1963 ರಲ್ಲಿ ಉಪ ನಡೆದಿತ್ತು. ಬಿ.ಎನ್ ದಾತಾರ ಅವರು 1962 ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯೂ ಆಗಿದ್ದರು ಆದ್ರೆ 1962 ರಲ್ಲಿ ಅದೇ ವರ್ಷ ಅನಾರೋಗ್ಯದ ಕಾರಣ ನಿಧನರಾಗಿದ್ದರು

1962 ರಲ್ಲಿ ಬಿ.ಎನ್ ದಾತಾರ್ ಅವರು ನಿಧನರಾದ ಕಾರಣ 1963 ರಲ್ಲಿ ಬೆಳಗಾವಿ ಲೋಕಸಭಾ ಮತ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು ಈ ಚುನಾವಣೆಯಲ್ಲಿ,ಹೆಚ್ ವ್ಹಿ ಕೌಜಲಗಿ ಅವರು ಗೆಲವು ಸಾಧಿಸಿದ್ದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಸುರೇಶ್ ಅಂಗಡಿ ಅವರು 2019 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕೇಂದ್ರದ ರಾಜ್ಯ ರೇಲ್ವೆ ಸಚಿವರಾಗಿದ್ದರು 2020 ರಲ್ಲಿ ಅವರು ಅಕಾಲಿಕ ನಿಧನರಾದರು ಅವರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಎಪ್ರೀಲ್ 17  2021 ರಂದು ಈ ಕ್ಷೇತ್ರದಲ್ಲಿ ಎರಡನೇಯ ಬಾರಿಗೆ ಉಪ ಚುನಾವಣೆ ನಡೆಯಲಿದೆ. ಈ ಕ್ಷೇತ್ರದಲ್ಲಿ 1962 ರಲ್ಲಿ ಬಿ.ಎನ್ ದಾತಾರ್ ಅವರು ನಿಧನರಾದಾಗ ಅವರೂ ಕೇಂದ್ರ ಸಚಿವ ಸಂಪುಟದಲ್ಲಿ ಡೆಪ್ಯುಟಿ ಮಿನಿಸ್ಟರ್ ಆಗಿದ್ದರು,ಸುರೇಶ್ ಅಂಗಡಿ  ನಿಧನರಾದಾಗ ಅವರೂ ಕೇಂದ್ರದಲ್ಲಿ ಮಿನಿಸ್ಟರ್ ಆಗಿರುವುದು ವಿಶೇಷ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2019 ರವರೆಗೆ ಒಂದು ಉಪ ಚುನಾವಣೆ ಸೇರಿ ಒಟ್ಟು 17 ಚುನಾವಣೆಗಳು ನಡೆದಿವೆ ಈಗ ನಡೆಯುತ್ತಿರುವ ಉಪ ಚುನಾವಣೆ ಈ ಕ್ಷೇತ್ರದ 18 ನೇಯ ಚುನಾವಣೆ ಆಗಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *