Breaking News

ಕಿಡ್ನ್ಯಾಪ್ ಕೇಸ್ ದಾಖಲಾಗಿದೆ,ತನಿಖೆಗೆ ತಂಡ ರಚಿಸಲಾಗಿದೆ

ಬೆಳಗಾವಿ-   ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿದ್ದ ಯುವತಿ ತಂದೆ ತನ್ನ ಮಗಳನ್ನು ಬೆಂಗಳೂರಿನಲ್ಲಿ ಯಾರೋ ಅಪರಿಚಿತರು ಅಪಹರಣ ಮಾಡಿ, ಕಿರುಕುಳ ನೀಡುತ್ತಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ.ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಡಿಸಿಪಿ ವಿಕ್ರಂ ಅಮಟೆ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಯುವತಿ ತಂದೆ ನಿನ್ನೆ ಎಂಪಿಎಂಸಿ ಠಾಣೆಗೆ ಬಂದು, ತಮ್ಮ ಮಗಳನ್ನು ಬೆಂಗಳೂರಿನಲ್ಲಿ ಯಾರೋ ಅಪರಿಚಿತರು ಅಪಹರಿಸಿ, ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಪ್ರಕರಣನ್ನು ದಾಖಲಿಸಿಕೊಳ್ಳಲಾಗಿದ್ದು, ಮಾರ್ಕೆಟ್ ಎಸಿಪಿ, ಎಪಿಎಂಸಿ ಠಾಣೆ ಸಿಪಿಐ ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ಪ್ರಕರಣವನ್ನು ಎಸ್‌ಐಟಿಗೆ ಹಸ್ತಾಂತರಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಯುವತಿಯ ಪೋಷಕರಿಗೆ ರಕ್ಷಣೆಯನ್ನು ನೀಡಲಾಗಿದೆ

Check Also

ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ.ನಾನು ಆಂಕಾಂಕ್ಷಿಯೂ ಅಲ್ಲ,ಸ್ಪರ್ದೆಯೂ ಮಾಡೋದಿಲ್ಲ…

ಬೆಳಗಾವಿ-ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ …

Leave a Reply

Your email address will not be published. Required fields are marked *