ಬೆಳಗಾವಿ-ನಾಲೆಗಳ ಒತ್ತುವರಿ ವಿರುದ್ಧ ಬೆಳಗಾವಿ ಪಾಲಿಕೆ ಸಮರ ಸಾರಿದ್ದು ಒತ್ತುವರಿ ತೆರವಿಗೆ ಪಾಲಿಕೆ ವಿಶೇಷ ನೋಡಲ್ ಅಧಿಕಾರಿಯನ್ನ ನಿಯೋಜಿಸಿ ಆದೇಶ ಹೊರಡಿಸಿದೆ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪ್ರಚಾರದ ಹಂಗಿಲ್ಲದೆ ಸಾರ್ವಜನಿಕ ಸೇವೆ ಮಾಡುವ ಅನೇಕ ಜನ ಪ್ರಾಮಾಣಿಕ ಅಧಿಕಾರಿಗಳಿದ್ದಾರೆ ನಗರ ಯೋಜನಾ ಅಧಿಕಾರಿಗಳಾಗಿ,ಕಂದಾಯ ಅಧಿಕಾರಿಗಳಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಮಾಡಿ ಸಾಧನೆ ಮಾಡಿರುವ ಎಲ್ಲ ಕೆಲಸಗಳಿಗೂ ಸೈ  ಎನ್ನುವ ಎ.ಎಸ್ ಕಾಂಬಳೆ ಅವರಿಗೆ ನಾಲೆಗಳ ಒತ್ತುವರಿ ತೆರವು ಮಾಡುವ ಜವಾಬ್ದಾರಿ ನೀಡಲಾಗಿದೆ
ಬೆಳಗಾವಿ ನUರದ ಹಲವಾರು ಪ್ರಮುಖ ನಾಲೆಗಳು ಒತ್ತುವರಿ ಆಗಿವೆ ನಾಲೆಗಳ ತೆರವಿಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ ಹೀಗಾಗಿ ಈ ಸವಾಲಿನ ಕೆಲಸಕ್ಕೆ ಖಡಕ್ ಅಧಿಕಾರಿ ಎಂದೇ ಹೆಸರು ಮಾಡಿರುವ  ಎ ಎಸ್ ಕಾಂಬಳೆ ಅವರನ್ನು   ನೋಡಲ್ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿದೆ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಗರ ಯೋಜನಾ ಅಧಿಕಾರಿಯಾಗಿ   ಹಿಂದಿನ ಆಲಿಕೆ ಆಯುಕ್ತ ರವಿಕುಮಾರ್ ಅವರ ಜತೆ ಜತೆಯಾಗಿ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸಿ ನಂತರ ಕಂದಾಯ ಅಧಿಕಾರಿಯಾಗಿ ದಾಖಲೆ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಿ ಸಾಧನೆ ಮಾಡಿದ ಸಾಧಕನನ್ನು ನಾಲೆಗಳ ಒತ್ತುವರಿ ತೆರವು ಮಾಡುವ ಜವಾಬ್ದಾರಿ ನೀಡಿದ್ದು ಸಂತಸದ ಸಂಗತಿಯಾಗಿದೆ
ಬೆಳಗಾವಿ ಮಹಾನಗರ ಪಾಲಿಕೆ ಈಗಾಗಲೇ ಬೆಳಗಾವಿಯ ಭೂಮಾಪನ ಇಲಾಖೆಗೆ ಪತ್ರ ಬರೆದು ನಗರದ ನಾಲೆಗಳ ಸರ್ವೆ ಮಾಡಿ ವರದಿ ನೀಡಲು ಸೂಚಿಸಿದ್ದು ವರದಿ ಬಂದ ಬಳಿಕ ಕಾಂಬಳೆ ಸಾಹೇಬರ ಸಮರ ಶುರುವಾಗಲಿದೆ
		
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ