ಬೆಳಗಾವಿ, ಏ.01 (ಕರ್ನಾಟಕ ವಾರ್ತೆ): ‘ಪರೀಕ್ಷಾ ಪೇ ಚರ್ಚಾ’ ಕಾಯಕ್ರಮದ 5ನೇ ಆವೃತ್ತಿಯನ್ನು ಪ್ರಧಾನಿ ಮೋದಿಯವರು ಶುಕ್ರವಾರ(ಏ.01)ರಂದು ಬೆಳಿಗ್ಗೆ 11 ಗಂಟೆಯಿAದ ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ 1000 ಶಾಲಾ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಜಿಲ್ಲಾ ಕೇಂದ್ರದಲ್ಲಿ ಕೆ.ಎಲ್.ಎಸ್. ಶಾಲೆ ಆಡಿಟೋರಿಯಂದಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲಾದಿಕಾರಿಗಳಾದ ಎಂ.ಜಿ.ಹಿರೇಮಠ, ಉಪನಿರ್ದೇಶಕರಾದ ಬಸವರಾಜ ನಲತವಾಡ, ಜಿಲ್ಲಾ ಉಪ ಸಮನ್ವಯಾಧಿಕಾರಿಗಳಾದ ಬಿ.ಎಚ್.ಮಿಲ್ಲಾನಟ್ಟಿ, ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೈ.ಜೆ.ಭಜಂತ್ರಿ ಮತ್ತು ಮೇದಾರ, ನಾವಗೇಕರ, ಶಾಲೆಯ ಶಿಕ್ಷಕರು ಹಾಗೂ ಸುಮಾರು 450 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಜಿಲ್ಲೆಯಾದ್ಯಂತ 1557 ಶಾಲೆಗಳ ಸುಮಾರು 142380 ವಿದ್ಯಾರ್ಥಿಗಳು ವಿವಿಧ ಮಾಧ್ಯಮಗಳಾದ ಟಿ.ವಿ.ಕಂಪ್ಯೂಟರ್, ಮೊಬೈಲ್ ಅಥವ ಸ್ಮಾರ್ಟ್ ಕ್ಲಾಸ್ ಮೂಲಕ ವೀಕ್ಷಿಸಿದರು. ಸಂವಾದದಲ್ಲಿ ನೇರವಾಗಿ ಭಾಗವಹಿಸಲು ಬೆಳಗಾವಿ ಜಿಲ್ಲೆಯಿಂದ ವಿದ್ಯಾರ್ಥಿಗಳಾದ ಶ್ರೇಯಸ ಮಾರ್ಗನಕೊಪ್ಪ ಹಾಗೂ ಜಾಹ್ನವಿ ದ್ವಿವೇದಿ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವಿದ್ಯಾರ್ಥಿಗಳು ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾಗಿದ್ದು, ವಿಶೇಷ ಪ್ರಶಸ್ತಿ ಪತ್ರ ಹಾಗೂ ಪರೀಕ್ಷಾ ಪೇ ಚರ್ಚಾ ಕಿಟ್‌ನ್ನು ಬಹುಮಾನವಾಗಿ ಪಡೆದುಕೊಂಡಿದ್ದಾರೆ.