Breaking News

ಬೆಳಗಾವಿಯಲ್ಲಿ, ಬಾವಿಗೆ ಬಿದ್ದು ಹನ್ನೊಂದು ವರ್ಷದ ಬಾಲಕನ ಸಾವು..

ಬೆಳಗಾವಿ- ಈದ್ ಮಿಲಾದ್ ಹಬ್ಬದ ಮೆರವಣಿಗೆ ಹೊರಟಾಗ ಮಕ್ಕಳ ಜೊತೆ ಆಟವಾಡುತ್ತ ಹೋಗಿದ್ದ ಹನ್ನೊಂದು ವರ್ಷದ ಬಾಲಕ ಬಾವಿಗೆ ಬಿದ್ದು ಸಾವನ್ನೊಪ್ಪಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ಬೆಳಗಾವಿಯ ಅನಿಗೋಳದ ರಾಜಹಂಸ ಗಲ್ಲಿಯಲ್ಲಿ ಈ ದುರ್ಘಟನೆ ನಡೆದಿದೆ‌ ಮೃತಪಟ್ಟ ಬಾಲಕ ಸದೀದ್ ಮುಜಮ್ಮಿಲ್ ಮುಲ್ಲಾ 11 ವರ್ಷ ಎಂದು ಗುರುತಿಸಲಾಗಿದೆ.Sadhid Mujamil Mulla (11) unexpected fell in to the well at Rajahansagalli Angol

ಸದೀದ ಮುಜಮ್ಮಿಲ್ ಮುಲ್ಲಾ ಈದ್ ಮಿಲಾದ್ ಹಬ್ಬ ಆಚರಿಸಲು ತನ್ನ ಅತ್ಯವ್ವನ ಮನೆಗೆ ಬಂದಿದ್ದ,ಈತ ಮೂಲತಹ ಎಂ.ಕೆ ಹುಬ್ಬಳ್ಳಿ ಗ್ರಾಮದವನು ಎಂದು ತಿಳಿದು ಬಂದಿದೆ.

ಗೆಳೆಯರ ಜೊತೆ ಆಟವಾಡುತ್ತಿದ್ದ ಸದೀದ್ ಆಯ ತಪ್ಪಿ ಬಾವಿಗೆ ಬಿದ್ದಿದ್ದಾನೆ‌. ಆತನ ಜೊತೆಗಿದ್ದ ಮಕ್ಕಳು ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾರೆ.ಈ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *