ಬೆಳಗಾವಿ- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಸಮರ ಸಾರಿದ್ದು,ಹೆಬ್ಬಾಳಕರ ಎಷ್ಟು ಗಿಪ್ಟ್ ಕೊಡ್ತಾರೆ ಕೊಡಲಿ,ಬಹಳ ಅಂದ್ರೆ ಮೂರ್ನಾಲ್ಕು ಸಾವಿರ ಬೆಲೆಯ ಗೀಪ್ಟ್ ಕೊಡಬಹುದು,ನಾನು ಆರು ಸಾವಿರ ಬೆಲೆಯ ಗೀಫ್ಟ್ ಕೊಡ್ತೀನಿ,ಅವರಿಗಿಂತ ಹತ್ತು ಕೋಟಿ ರೂ ಹೆಚ್ವು ಖರ್ಚು ಮಾಡ್ತೀನಿ ಎಂದು ಬಹಿರಂಗ ಸಮಾವೇಶದಲ್ಲೇ ರಮೇಶ್ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೂಳೆಭಾವಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಏರ್ಪಡಿಸಿದ,ಸಮಾವೇಶದಲ್ಲಿ ಮಾತನಾಡಿದ, ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳಕರ ಅವರ ಹೆಸರು ಪ್ರಸ್ತಾಪಿಸದೇ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಈ ಸಮಾವೇಶದಲ್ಲಿ ಏನಾದ್ರೂ ಗೀಪ್ಟ್ ಕೊಡೋಣ ಎಂದು ಸಂಘಟಕರು ಹೇಳಿದ್ರು ಆದ್ರೆ ನಾನು ಬೇಡ ಎಂದಿದ್ದೆ ಮೊದಲು ನಮ್ಮ ಸಂಘಟನೆ ಎಷ್ಟಿದೆ ನೋಡೋಣ ಆಮೇಲೆ ಗಿಪ್ಟ್ ಕೊಡೋಣ ಎಂದು ಹೇಳಿದ್ದೆ,ಸ್ಥಳೀಯ ಶಾಸಕಿ ಎಳೆಂಟು ನೂರು ಬೆಲೆಯ ಮೀಕ್ಸರ್ ಕೊಡ್ತಾದ್ದಾರೆ,ಮುಂದೆ ಮತ್ತೆ ಕೊಡ್ತಾರೆ,ಅವರು ಬಹಳ ಅಂದ್ರೆ ಮೂರ್ನಾಲ್ಕು ಸಾವಿರ ಬೆಲೆಯ ಗೀಪ್ಟ್ ಕೊಡಬಹುದು ಆದ್ರೆ ನಾನು ಆರು ಸಾವಿರ ರೂ ಬೆಲೆಯ ಗಿಪ್ಟ್ ಕೊಡ್ತೀನಿ ಅವರಿಗಿಂತ ಹತ್ತು ಕೋಟಿ ಹೆಚ್ವು ಖರ್ಚು ಮಾಡ್ತೀನಿ ಎಂದು ರಮೇಶ್ ಜಾರಕಿಹೊಳಿ ಘೋಷಣೆ ಮಾಡಿದ್ರು…
ಈ ಹಿಂದೆ ಲಕ್ಷ್ಮೀ ಹೆಬ್ಬಾಳಕರ ತಮ್ಮ ಸಹೋದರನ ಎಂಎಲ್ಸಿ ಚುನಾವಣೆಯಲ್ಲಿ ಎಷ್ಟು ಖರ್ಚು ಮಾಡಿದ್ರು,ಆ ಹಣ ಎಲ್ಲಿಂದ ಬಂತು,? ಅದೆಲ್ಲಾ ಸಕ್ಕರೆ ಫ್ಯಾಕ್ಟರಿಯ ದುಡ್ಡು,ನಾನು ರಾಜೀನಾಮೆ ಕೊಟ್ಟ ಮೇಲೆ ನಾನು ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ ತಿಳ್ಕೊಂಡಿದ್ರು ಆದ್ರೆ ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ,ಜಾರಕಿಹೊಳಿ ಕುಟುಂಬ ಎಂದಿಗೂ ಮನೆಯಲ್ಲಿ ಕುಳಿತುಕೊಂಡಿಲ್ಲ ಕೊನೆಯ ಕ್ಷಣದವರೆಗೂ ನಾನು ಹೋರಾಡುವೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ
ಮಾಳಗಿ,ಕಿಣೇಕರ,ಅವರು ಶಾಸಕರಾಗಿದ್ದರು ಅವರೆಲ್ಲ ಒಳ್ಳೆಯ ವ್ಯಕ್ತಿಗಳಾಗಿದ್ದರು,ಸಂಜಯ ಪಾಟೀಲ ಕೂಡಾ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ.ಬಿಜೆಪಿ ವರಿಷ್ಠರು ಯಾರಿಗಾದ್ರೂ ಟಿಕೆಟ್ ಕೊಡಲಿ,ಅವರನ್ನು ಗೆಲ್ಲಿಸುವದೇ ನಮ್ಮ ಗುರಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು, ಆದ್ರೆ ಅವರ ಭಾಷಣ ಮುಗಿಯುವವರೆಗೂ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯ ಯಾವ ಆಕಾಂಕ್ಷಿಯ ಹೆಸರನ್ನೂ ಪ್ರಸ್ತಾಪ ಮಾಡಲಿಲ್ಲ.
ಈ ಕಾರ್ಯಕ್ರಮ ನಡೆಯುವ ಪಕ್ಕದಲ್ಲೇ ಪೆಂಡಾಲ್ ಹಾಕಿ ಮೀಕ್ಸರ್ ಕೊಡುತ್ತಿದ್ದಾರೆ,ಅದನ್ನು ಬಿಟ್ಟು ನೀವು ಇಲ್ಲಿಗೆ ಬಂದಿದ್ದೀರಾ, ಬಹಳ ಸಂತೋಷ ಇಂತಹ ಜನರನ್ನು ಪಡೆದಿದ್ದು ನನ್ನ ದೈವ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ