Breaking News
Home / Breaking News / ಇಂದಿನಿಂದ ಬೆಳಗಾವಿ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಗಾಳಿಪಟ…

ಇಂದಿನಿಂದ ಬೆಳಗಾವಿ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಗಾಳಿಪಟ…

.ಬೆಳಗಾವಿ- ಪ್ರತಿವರ್ಷದಂತೆ ಈ ವರ್ಷವೂ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಳಗಾವಿಯಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸಿದ್ದು,ಇಂದಿನಿಂದ ಬೆಳಗಾವಿಯ ಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿಪಟಗಳು ಚಿತ್ತಾರ ಮೂಡಿಸಲಿವೆ.

ಇಂದು ಶನಿವಾರ ಬೆಳಗ್ಗೆ 8-30 ಕ್ಕೆ ಗಾಳಿಪಟ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಗಲಿದೆ.ಈ ಉತ್ಸವದಲ್ಲಿ ಅಂತರಾಷ್ಟ್ರೀಯ ಗಾಳಿಪಟ ಕ್ರೀಡಾಳುಗಳು ಬಾಗವಹಿಸುವದರ ಜೊತೆಗೆ ರಾಷ್ಟ್ರದ ಬೇರೆ ಬೇರೆ ರಾಜ್ಯಗಳ ಕ್ರೀಡಾಳುಗಳು ಭಾಗವಹಿಸುತ್ತಾರೆ.ಇಂದಿನಿಂದ ಮೂರು ದಿನಗಳ ಕಾಲ ಈ ಉತ್ಸವ ಬೆಳಗಾವಿಯ ಬಿ.ಎಸ್ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ನಡೆಯಲಿದೆ‌.

ಮೂರು ದಿನಗಳ ಕಾಲ ಗಾಳಿಪಟ ಉತ್ಸವದಲ್ಲಿ ಯುವಜನೋತ್ಸವ,ಮಹಿಳಾ ಉತ್ಸವ,ಮಕ್ಕಳ ಉತ್ಸವ ಕೊನೆಯ ದಿನ ಆಕರ್ಷಕ ಕ್ರ್ಯಾಕರ್ ಶೋ ನಡೆಯಲಿದ್ದು ತಪ್ಪದೇ ಎಲ್ಕರೂ ಭಾಗವಹಿಸಿ,ಬರುವಾಗ ನಿಮ್ಮ ಗೆಳೆಯರನ್ನು ಆಪ್ತರನ್ನು ಮಕ್ಕಳನ್ನು ಕರೆತನ್ನೀ…‌

Check Also

ಬೆಳಗಾವಿಯಲ್ಲಿ FM ರೇಡಿಯೋ ಶುರು ಮಾಡಿ…!!

ಬೆಳಗಾವಿ- ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಪ್ರಾರಂಭಿಸಲು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು …

Leave a Reply

Your email address will not be published. Required fields are marked *