ಬೆಳಗಾವಿ – ಕಾಂಗ್ರೆಸ್ ಪಕ್ಷ ಎರಡನೇಯ ಕಂತಿನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು,ಗೋಕಾಕ್ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು,ಕಿತ್ತೂರಿನಿಂದ ಬಾಬಾಸಾಹೇಬ್ ಪಾಟೀಲ ಅವರ ಹೆಸರನ್ಬು ಕೊನೆಗೂ ಪೈನಲ್ ಮಾಡಿದೆ.
ಕಾಂಗ್ರೆಸ್ಸಿನ ಎರಡನೇಯ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದೆ. ಗೋಕಾಕ್ ಕ್ಷೇತ್ರದಿಂದ ಅಶೋಕ ಪೂಜಾರಿ ಅವರನ್ನು ಕೈಬಿಟ್ಟು,ಮಹಾಂತೇಶ್ ಕಡಾಡಿ,ಸವದತ್ರಿ ಕ್ಷೇತ್ರದಿಂದ ವಿಶ್ವಾಸ್ ವೈದ್ಯ,ಕಿತ್ತೂರಿನಿಂದ ಬಾಬಾಸಾಹೇಬ್ ಪಾಟೀಲ,ನಿಪ್ಪಾಣಿಯಿಂದ ಕಾಕಾಸಾಹೇಬ್ ಪಾಟೀಲ ಅವರ ಹೆಸರನ್ನು ಪೈನಲ್ ಮಾಡಲಾಗಿದೆ.
ಇಂದು ಸಂಜೆ ಹೊತ್ತಿಗೆ ಇನ್ನೊಂದು ಪಟ್ಟಿ ಬಿಡುಗಡೆಯಾಗಲಿದ್ದು ಅದರಲ್ಲಿ ಬೆಳಗಾವಿ ಜಿಲ್ಲೆಯ ಉಳಿದ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
