ವೈನ್ ಇಸ್ ಇನ್…ಮೈಂಡ್ ಇಸ್ ಔಟ್ ಆತ ಹೇಳ್ತಾರೆ ಅದು ಸತ್ಯ…. ಆತ ಕಂಠಪೂರ್ತಿ ಕುಡುದಿದ್ದ ಬೆಳಗಾವಿಗೆ ಬರಲು ಬಸ್ ಏರಿದ್ದ ಆದ್ರೆ ನಶೆಯಲ್ಲಿ ಆತ ಬೆಳಗಾವಿ ಬಂತು ಅಂತ ತಿಳಿದು ದಾರಿ ಮದ್ಯದ ಊರಿನಲ್ಲಿ ಇಳಿದಿದ್ದ ಅದು ಬೆಳಗಾವಿ ಅಲ್ಲ ಎಂದು ಆತನಿಗೆ ತಿಳಿದಾಗ ದಾರಿಯಲ್ಲಿ ಹೋಗುವ ಬೈಕ್ ತಡೆದು ಲೀಫ್ಟ್ ಕೇಳಿದ್ದ ನಿಮಗೆ ಎಷ್ಟು ಬೇಕಾದ್ರೂ ಹಣ ಕೊಡ್ತೀನಿ ನನ್ನನ್ನು ಬೆಳಗಾವಿಗೆ ಮುಟ್ಟಿಸಿ ಎಂದು ಕೇಳಿಕೊಂಡಿದ್ದ ಲಿಫ್ಟ್ ಕೊಟ್ಟ ಇಬ್ಬರು ಕಿರಾತಕರು ಆತನಿಗೆ ಬೆಳಗಾವಿಗೆ ಮುಟ್ಟಿಸುವ ಬದಲು ದಾರಿ ಮದ್ಯದಲ್ಲೇ ಬಾರ್ ನಲ್ಲಿ ಕುಡಿದು ಆತ ಬಿಲ್ ಕೊಡದೇ ಇದ್ದಾಗ ಆತನನ್ನು ಬರ್ಬರವಾಗಿ ಹತ್ಯೆ ಮಾಡಿ, ಆತನ ಶವವನ್ನು ಸಾಂಬ್ರಾ ವಿಮಾನ ನಿಲ್ಧಾಣದ ಹತ್ತಿರ ಎಸೆದು ಹೋಗಿದ್ದ ಇಬ್ಬರು ಕಿರಾತಕರನ್ನು ಮಾರಿಹಾಳ ಪೋಲೀಸರು ಅರೆಸ್ಟ್ ಮಾಡಿದ ರೋಚಕ ಕಹಾನಿ ಇಲ್ಲಿದೆ ನೋಡಿ…….
ಬೆಳಗಾವಿ: ಬೆಳಗಾವಿವರೆಗೆ ಲಿಫ್ಟ್ ಕೊಡಲು ಸಾರಾಯಿ ಕುಡಿಸಿದ ಬಿಲ್ ನೀಡದ್ದಕ್ಕೆ ಯುವಕನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದ್ದು, ಬೆಳಗಾವಿ ವಿಮಾನ ನಿಲ್ದಾಣ ಕಂಪೌಂಡ್ ಬಳಿ ನಡೆದ ಹತ್ಯೆ ಪ್ರಕರಣವನ್ನು 11 ದಿನಗಳ ಬಳಿಕ ಮೊಬೈಲ್ ಲೋಕೇಶನ್ ಮೂಲಕ ಪೊಲೀಸರು ಭೇದಿಸಿದ್ದಾರೆ.
ಮಾರಿಹಾಳ ಠಾಣೆ ವ್ಯಾಪ್ತಿಯ ಹೊನ್ನಿಹಾಳ-ಮಾವಿನಕಟ್ಟಿ ಗ್ರಾಮದ ವಿಮಾನ ನಿಲ್ದಾಣ ಕಂಪೌಂಡ್ ಬಳಿ ನ. 18ರಂದು ಬೆಳಗಾವಿ ಜಾವ ಮೂಲತಃ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದ, ಸದ್ಯ ಶ್ರೀನಗರದ ನಿಂಗನಗೌಡ ಸಂಗನಗೌಡ ಸಣ್ಣಗೌಡ್ರ(26) ಹತ್ಯೆ ಪ್ರಕರಣವನ್ನು ಪೊಲೀಸರು ಚಾಣಾಕ್ಷö್ಯತನದಿಂದ ಭೇದಿಸಿದ್ದಾರೆ. ಯಾವುದೇ ಕುರುಹುಗಳ ಪತ್ತೆಯಾಗದ್ದಕ್ಕೆ ಮೊಬೈಲ್ ಲೋಕೇಶನ್ ಮೂಲಕ ಹಂತಕರನ್ನು ಪತ್ತೆ ಹಚ್ಚಿದ್ದೇ ವಿಶೇಷ.
ಬೆಳಗಾವಿಯ ತಾಲೂಕಿನ ಮಾರಿಹಾಳ ಗ್ರಾಮದ ಇಬ್ಬರು ಹಂತಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ಓರ್ವ ಡಬಲ್ ಮರ್ಡರ್ ಪ್ರಕರಣದ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಈಗ ಮತ್ತೊಂದು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
ನ. 17ರಂದು ರಾತ್ರಿ ಯರಗಟ್ಟಿಯಿಂದ ಬೆಳಗಾವಿ ಕಡೆಗೆ ಬಸ್‌ನಲ್ಲಿ ಹೊರಟಿದ್ದ ನಿಂಗನಗೌಡ ಸಣ್ಣಗೌಡ್ರ ಕುಡಿದ ಮತ್ತಿನಲ್ಲಿ ಮೋದಗಾ ಗ್ರಾಮದ ಬಳಿ ಇಳಿದಿದ್ದಾನೆ. ಈತನ ಬಳಿಕ ಬೆಲೆಬಾಳುವ ಐಫೋನ್ ಇತ್ತು. ನಡೆದುಕೊಂಡು ಮಾರಿಹಾಳ ಕಡೆಗೆ ಬಂದಿದ್ದಾನೆ. ಮಾರಿಹಾಳ ಬಳಿ ಪಲ್ಸರ್ ವಾಹನದಲ್ಲಿ ಇಬ್ಬರು ಹೊರಟಾಗ ಲಿಪ್ಟ್ ಕೇಳಿದ್ದಾನೆ. ಬೆಳಗಾವಿವರೆಗೆ ಬಿಟ್ಟರೆ ಒಂದು ಸಾವಿರ ರೂ. ಕೊಡುವುದಾಗಿ ನಿಂಗನಗೌಡ ಹೇಳಿದ್ದಾನೆ. ಇದಕ್ಕೆ ಒಪ್ಪಿದ್ದ ವಾಹನ ಸವಾರರು ನಿಂಗನಗೌಡನನ್ನು ಪಲ್ಸರ್‌ನಲ್ಲಿ ಕೂಡಿಸಿಕೊಂಡು ಬಾಳೇಕುಂದ್ರಿ ಕೆ.ಎಚ್. ಗ್ರಾಮದ ಬಳಿಯ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದಾರೆ.
ಬಾರಿನಲ್ಲಿ ಬಿಲ್ ಕೊಡಲಿಲ್ಲ ಆತ ಬದುಕಲಿಲ್ಲ…..!
ಅಲ್ಲಿ ಮೂವರೂ ಸಾರಾಯಿ ಖರೀದಿಸಿ ಕಂಠಪೂರ್ತಿ ಕುಡಿದಿದ್ದಾರೆ. ಸಾರಾಯಿ ಬಿಲ್ ನೀಡಲು ನಿಂಗನಗೌಡ ಬಳಿ ಹಣ ಇರಲಿಲ್ಲ. ಬಿಲ್ ನೀಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಆ ಇಬ್ಬರೂ ಆರೋಪಿಗಳು, ನಿಂಗನಗೌಡನ ಕಿವಿಗೆ ಹೊಡೆದಾಗ ರಕ್ತಸ್ರಾವವಾಗಿದೆ. ಆಗ ನಿಮ್ಮನ್ನು ಬಿಡುವುದಿಲ್ಲ, ಪೊಲೀಸರನ್ನು ಕರೆಯಿಸುತ್ತೇನೆ ಎಂದು ಚೀರಾಡಿದಾಗ, ಆತನನ್ನು ಪಲ್ಸರ್ ಮೇಲೆ ಹೊತ್ತುಕೊಂಡು ಹೊನ್ನಿಹಾಳ-ಮಾವಿನಕಟ್ಟಿ ಮಧ್ಯೆ ಹೊಲದಲ್ಲಿ ಹಲ್ಲೆಗೈದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತೀವ್ರ ವಿಚಾರಣೆ ಬಳಿಕ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಮಾರಿಹಾಳ ಠಾಣೆ ಇನ್ಸಪೆಕ್ಟರ್ ಕಲ್ಯಾಣಶೆಟ್ಟಿ ಅವರ ನೇತೃತ್ವದಲ್ಲಿ ಪೊಲೀಸರು ಹಂತಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹಂತಕರ ಪತ್ತೆ ಮಾಡುವಲ್ಲಿ ಪೊಲೀಸರ ಕರಾಮತ್ತು…
ನ. 18ರಂದು ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಕಣ್ಣಿಗೆ ಎಣ್ಣೆ ಹಾಕಿ ಹಂತಕರ ಶೋಧ ನಡೆಸಿದ್ದಾರೆ. ಈ ಭಾಗದಲ್ಲಿ ಸಣ್ಣ ಅನುಮಾನ ಬಂದರೂ ವಿಚಾರಣೆ ನಡೆಸಿದ್ದಾರೆ. ಯರಗಟ್ಟಿಯಿಂದ ಬೆಳಗಾವಿವರೆಗಿನ ಬಹುತೇಕ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಅನೇಕ ಮೊಬೈಲ್ ಲೋಕೇಶನ್‌ಗಳ ಜಾಡು ಹಿಡಿದು ತನಿಖೆ ನಡೆಸಿದ್ದಾರೆ. ಹಂತಕರ ಬಳಿ ಮೊಬೈಲ್ ಇರಲಿಲ್ಲ. ಹೀಗಾಗಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಸುಮಾರು 15ರಿಂದ 20 ಜನರನ್ನು ಠಾಣೆಗೆ ತಂದು ವಿಚಾರಣೆ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಪೊಲೀಸರ ಚಾಣಾಕ್ಷ್ಯತನದಿಂದ ಹಂತಕರು ಸಿಕ್ಕಿ ಬಿದ್ದಿದ್ದಾರೆ.
ಹಂತಕರ ಬಳಿ ಮೊಬೈಲ್ ಇಲ್ಲದಿದ್ದರೂ ಸಿಕ್ಕಿಬಿದ್ರು…
ಇಬ್ಬರು ಹಂತಕರ ಬಳಿ ಮೋಬೈಲ್ ಇರಲಿಲ್ಲ ಆದ್ರೂ ಮೊಬೈಲ್ ಲೋಕೇಶನ್‌ದಿಂದ ಇಬ್ಬರು ಬಲೆಗೆ ಬಿದ್ದಿದ್ದು ಮಾರಿಹಾಳ ಪೋಲೀಸರ ಚಾನಾಕ್ಷ್ಯ ನಡೆಯಿಂದ,
ನ. 17ರಂದು ರಾತ್ರಿ ರಾತ್ರಿ 12:30ರ ಸುಮಾರಿಗೆ ಹೊನ್ನಿಹಾಳ ಗ್ರಾಮದಲ್ಲಿ ಇಬ್ಬರು ಯುವಕರ ಮೊಬೈಲ್ ಬಳಕೆಯಾಗಿತ್ತು,ಇದು ಲೋಕೇಶನ್ ಮೂಲಕ ಪೊಲೀಸರಿಗೆ ಗೊತ್ತಾಗಿತ್ತು ಕೂಡಲೇ ಆ ಯುವಕರನ್ನು ತಂದು ಪೋಲೀಸರು ವಿಚಾರಣೆ ಮಾಡಿದ್ರು ಮದ್ಯರಾತ್ರಿ ನೀವು ಏನ್ ಮಾಡ್ತಿದ್ರಿ ಅಂತ ಪೋಲೀಸರು ಆ ಇಬ್ಬರು ಯುವಕರನ್ನು ಕೇಳಿದ್ದಾರೆ ಮನೆಯಲ್ಲಿ ಒಬ್ಬರಿಗೆ ಹುಷಾರಿರಲಿಲ್ಲ ದವಾಖಾನೆಯಿಂಧ ಬಂದ ಬಳಿಕ ಮನೆಯ ಕಟ್ಟೆಯ ಮೇಲೆ ಕುಳಿತು ರೀಲ್ಸ್ ನೋಡುವಾಗ ಇಬ್ಬರು ಯುವಕರು ಆ ಸಂಧರ್ಭದಲ್ಲಿ ಬಂದ್ರು ವೇಗವಾಗಿ ಪಲ್ಸರ್ ವಾಹನದಲ್ಲಿ ಬಂದ ಅವರು ನಮ್ಮ ಮುಂದೆ ಬೈಕ್ ನಿಲ್ಲಿಸಿ ಸಾರಾಯಿ ಎಲ್ಲಿ ಸಿಗುತ್ತದೆ? ಎಂದು ಕೇಳಿದ್ರು ಅವರ ಕೈಗೆ ರಕ್ತದ ಕಲೆಗಳು ಇದ್ದಿದ್ದು ಕಂಡು ಬಂತು ಅಂತಾ ಪೋಲೀಸರಿಗೆ ಹೇಳಿದ್ದಾರೆ ಅವರಿಬ್ಬರು ಮಾರಿಹಾಳದ ಯುವಕರೆಂದು ಬಾಯಿ ಬಿಟ್ಟಾಗ, ಹಂತಕರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿಗೆ ಬಂದಿದ್ರೆ ಯುವಕ ಬದುಕುಳಿಯುತ್ತಿದ್ದ
ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಮಹಾಂತೇಶ ಕಲ್ಲೋಳಿ ಅವರ ಕಾರಿಗೆ ನಿಂಗನಗೌಡ ಚಾಲಕನಾಗಿದ್ದನು. ನ. 17ರಂದು ವೈದ್ಯರ ಕುಟುಂಬವನ್ನು ಕರೆದುಕೊಂಡು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೋಗಿದ್ದನು. ದರ್ಶನ ಮುಗಿಸಿ ಯರಗಟ್ಟಿಯಲ್ಲಿ ಇಳಿದು ತನ್ನ ತಾಯಿಯ ತವರೂರು ಉಜ್ಜಿನಕೊಪ್ಪಕ್ಕೆ ಹೋಗಿದ್ದನು. ತನ್ನ ಅಳಿಯ, ಮತ್ತೊಬ್ಬ ಸ್ನೇಹಿತ ಸೇರಿ ಯರಗಟ್ಟಿಯ ವೈನ್ಸ್ನಲ್ಲಿ ಸಾರಾಯಿ ಕುಡಿದು ಬೆಳಗಾವಿಗೆ ಬಸ್‌ನಲ್ಲಿ ಬರುವಾಗ ಮಾರ್ಗ ಮಧ್ಯೆ ಮೋದಗಾದಲ್ಲಿ ಇಳಿದು ನಡೆದುಕೊಂಡೇ ಮಾರಿಹಾಳ ಕಡೆಗೆ ಬಂದಾಗ ಲಿಪ್ಟ್ ನೆಪದಲ್ಲಿ ಈತನನ್ನು ಕರೆದುಕೊಂಡು ಹೋಗಲಾಗಿತ್ತು. ಬಸ್‌ನಲ್ಲಿ ಬೆಳಗಾವಿವರೆಗೆ ಯುವಕ ಬಂದಿದ್ದರೆ ಬದುಕುಳಿಯುತ್ತಿದ್ದ.
ಮೋಬೈಲ್ ಬಳ್ಳಾರಿ ನಾಲೆಯಲ್ಲಿ ಎಸೆದಿದ್ರು…
ಹತ್ಯೆಗೀಡಾದ ನಿಂಗನಗೌಡ ಬಳಿ ಸುಮಾರು ಒಂದು ಲಕ್ಷ ರೂ. ಬೆಲೆಬಾಳುವ ಐಫೋನ್ ಇತ್ತು. ಮೋದಗಾ ಬಳಿ ಇಳಿದಾಗ ಈತ ಗೂಗಲ್ ಮ್ಯಾಪ್ ಮೂಲಕ ರಸ್ತೆ ಹುಡುಕಾಡುತ್ತಿದ್ದನು. ಫೋನ್ ಪೇದಲ್ಲಿ ಇದ್ದ ಹಣದಲ್ಲಿ ಯರಗಟ್ಟಿಯಲ್ಲಿ ಕಂಠಪೂರ್ತಿ ಕುಡಿದಿದ್ದನು. ಹಣ ಸಂಪೂರ್ಣ ಖಾಲಿಯಾಗಿತ್ತು. ಹೊನ್ನಿಹಾಳ ಕೊಲೆ ಮಾಡಿದ ಆರೋಪಿಗಳು, ಐಫೋನ್ ಕಿತ್ತುಕೊಂಡು ಬಂದಿದ್ದಾರೆ. ಮರುದಿನ ಆರೋಪಿ ಕೆಲಸಕ್ಕೆ ಹೋಗುವಾಗ ಬಳ್ಳಾರಿ ನಾಲಾದಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಮೊಬೈಲ್ ಹುಡುಕಾಟ ನಡೆಸಿದ್ದಾರೆ.