ಬೆಳಗಾವಿ-
ದೇಶ ಸೇವೆ ಮಾಡುವ ಕನಸು ಹೊತ್ತಿದ್ದ ಯುವಕರಿಗೆ ಆರ್ಮಿಯಲ್ಲಿ ಕೆಲಸ ಕೊಡಿಸುವದಾಗಿ ನಂಬಸಿ ನೇಮಕಾತಿ ಆದೇಶದ ಪ್ರತಿಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ವಸುಲಿ ಮಾಡುತ್ತಿದ್ದ ಜಾಲವನ್ನ ಬೆಳಗಾವಿ ಮಾರ್ಕೆಟ್ ಪೋಲಿಸರು ಭೇದಿಸಿದ್ದಾರೆ
. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಶಾನೂಲ ಹತ್ತಿವಾಲೆ (೨೩), ಅನ್ನೊ ಆರೋಪಿಯನ್ನ ಬಂದಿಸಲಾಗಿದೆ ಇನ್ನೂ ದೇಶ ಸೇವೆ ಮಾಡಬೇಕೆಂಬ ಬಯಕೆ ಹೊತ್ತಿದ್ದ ಸದಾಶಿವ ಮಾದರ(೨೭) ಅನ್ನೊ ಯುವಕ ನಕಲಿ ಆದೇಶ ಪ್ರತಿಯನ್ನು ತೆಗೆದುಕೊಂಡು ಆರ್ಮಿ ಸೇರಲು ಹೋಗಿದ್ದಾಗ ಆರ್ಮಿ ಅಧಿಕಾರಿಗಳಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನೂ ಆರೋಪಿಯಿಂದ ನಕಲಿ ಆದೇಶ ಪ್ರತಿಗಳನ್ನ ತಯಾರಿಸಲು ಬಳುಸುತಿದ್ದ ಶೀಲಗಳು, ಪೇಪರ್ ಪ್ರತಿಗಳು, ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮತ್ತು ವಿವಿಧ ದಾಖಲೆಗಳನ್ನ ವಶಪಡಿಸಿಕೊಂಡ ಐಪಿಸಿ ಕಲಂ 463, 465,420,468 ಅಡಿ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					