Breaking News

ಚಂದ್ರಯಾನದ ಬಿಡಿಭಾಗಗಳು ತಯಾರಾಗಿದ್ದು ಕ್ರಾಂತಿಯ ನೆಲ ಬೆಳಗಾವಿಯಲ್ಲಿ….!!!

ಬೆಳಗಾವಿ- ಚಂದ್ರಯಾನ 3 ರ ರಾಕೇಟ್ ಹಾಗೂ ಲಾಂಚರ್ ಗಳ ಬಿಡಿಭಾಗಗಳು ತಯಾರಾಗಿದ್ದು ಐತಿಹಾಸಿಕ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ಅನ್ನೋದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

ಇಸ್ರೋದ (ISRO‌) ಮಹತ್ವಾಕಾಂಕ್ಷೆಯ ಚಂದ್ರಯಾನ-3 (Chandrayaan-3) ಉಪಗ್ರಹದ ರಾಕೆಟ್ ಹಾಗೂ ಲಾಂಚರ್‌ಗಳ ಬಿಡಿಭಾಗಗಳು ಬೆಳಗಾವಿಯಲ್ಲಿ (Belagavi) ತಯಾರಾಗಿವೆ. ನಗರದ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‍ನಲ್ಲಿ ಈ ಬಿಡಿಭಾಗಗಳು ತಯಾರಾಗಿವೆ.

ಈ ವಿಚಾರವಾಗಿ ಸಂಸ್ಥೆಯ ಎಂಡಿ ದೀಪಕ್ ಧಡೂತಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿ, ಚಂದ್ರಯಾನ-3 ಪ್ರಯಾಣ ಬೆಳೆಸಲಿರುವ ರಾಕೆಟ್, ಲಾಂಚರ್‌ಗೆ ಬಿಡಿಭಾಗಗಳನ್ನು ನಮ್ಮ ಸಂಸ್ಥೆಯಲ್ಲಿಯೇ ತಯಾರಿಸಿದ್ದೇವೆ. ಚಂದ್ರಯಾನ-2 ಕೊನೆಯ ಘಳಿಗೆಯಲ್ಲಿ ವಿಫಲವಾಯಿತು. ಚಂದ್ರಯಾನ-3 ಯಶಸ್ವಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮಾಜಿ ರಾಷ್ಟ್ರಪತಿಗಳ ಕರೆಯಿಂದ ವಿದೇಶದಿಂದ ಭಾರತಕ್ಕೆ ವಾಪಸ್‌ ಆಗಿ ಇಲ್ಲಿ ಸಂಸ್ಥೆ ಆರಂಭಿಸಿ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಕೆಲಸದಲ್ಲಿ ತೊಡಗಿಕೊಳ್ಳಲಾಗುತ್ತದೆ. ಉಪಗ್ರಹದ ವಿಚಾರದಲ್ಲಿ ಯಂತ್ರಗಳ ತೂಕವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ಆದಷ್ಟು ತೂಕವನ್ನು ಕಡಿಮೆ ಮಾಡಿ ಬಿಡಿ ಭಾಗಗಳನ್ನು ತಯಾರಿಸುವ ಸವಾಲು ಇರುತ್ತದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಮಂಗಳಯಾನ ಯಶಸ್ವಿಯಾದ ರಾಕೆಟ್‍ಗೂ ಬೆಳಗಾವಿಯಿಂದಲೇ ಬಿಡಿಭಾಗಗಳನ್ನು ಪೂರೈಸಲಾಗಿತ್ತು. ಸ್ವದೇಶಿ ಹಾಗೂ ವಿದೇಶಿ ಟೆಕ್ನಾಲಜಿ ಬಳಸಿ ಬಿಡಿಭಾಗಗಳನ್ನು ಇಸ್ರೋಗೆ ಪೂರೈಕೆ ಮಾಡಲಾಗಿದೆ. ಇಸ್ರೋ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯವಾಗಿದೆ. ಇದು ಕರ್ನಾಟಕವೇ ಹೆಮ್ಮೆ ಪಡುವ ವಿಚಾರವಾಗಿದೆ. ವಿಜ್ಞಾನಿಗಳ ಪ್ರಯತ್ನಕ್ಕೆ ಶುಭವಾಗಲಿ ಎಂದು ಕಂಪನಿಯ ಎಂ.ಡಿ ದೀಪಕ ಧಡೂತಿ ಹಾರೈಸಿದ್ದಾರೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *