Breaking News

ಎರಡೂವರೆ ಲಕ್ಷ ರೂ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ.

ಬೆಳಗಾವಿ-ವ್ಯಾಪಾರಿಯೊಬ್ಬನ ಬ್ಯಾಗ್ ನಲ್ಲಿ ಇದ್ದ ಎರಡೂವರೆ ಲಕ್ಷ ರೂಗಳನ್ನು ಬೆಳಗಾವಿಯ ರಿಕ್ಷಾ ಚಾಲಕನೊಬ್ಬ ಪೋಲೀಸರಿಗೆ ಮರಳಿಸಿ ಪ್ರಾಮಾಣಿಕತೆಯನ್ನು ಮೆರೆದ ಘಟನೆ ನಡೆದಿದೆ.

ಬೆಳಗಾವಿಯ ಫ್ಲೈವುಡ್ ವ್ಯಾಪಾರಿ ಸುರೇಶ್ ಉರ್ಫ್ ಅರ್ಜುನ್ ಜೈನ್ ತಿಲಕವಾಡಿಯ ಬ್ಯಾಂಕಿನಿಂದ ಎರಡೂವರೆ ಲಕ್ಷ ರೂ ಡ್ರಾ ಮಾಡುಕೊಂಡಿದ್ದ,ಈತನ ಕ್ಯಾಶ್ ಬ್ಯಾಗ್ ಕ್ಯಾಂಪ್ ಪ್ರದೇಶದಲ್ಲಿ ಬಿದ್ದಾಗ, ಈ ಬ್ಯಾಗ್ ಗವಳಿ ಗಲ್ಲಿಯ ರಿಕ್ಷಾ ಚಾಲಕ ಹೊಸೂರಕರ ಎಂಬಾತರಿಗೆ ಸಿಕ್ಕಿತ್ತು.

ಈ ರಿಕ್ಷಾ ಚಾಲಕ ಕ್ಯಾಶ್ ಬ್ಯಾಗನ್ನು ಕ್ಯಾಂಪ್ ಪೋಲೀಸರಿಗೆ ಮರಳಿಸಿದ್ದಾನೆ.ನಂತರ ಕ್ಯಾಂಪ್ ಪೋಲೀಸರು ಸಿಸಿ ಟಿವ್ಹಿ ಆಧರಿಸಿ ಬ್ಯಾಗ್ ಯಾರದ್ದು ಎಂದು ಪರಶೀಲಿಸಿ,ವ್ಯಾಪಾರಿಗೆ ಎರಡೂವರೆ ಲಕ್ಷ ರೂಗಳನ್ನು ಮರಳಿಸಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *