ಬೆಳಗಾವಿ- ಮುಂಗಾರು ಈ ಬಾರಿ ಲೇಟಾಗಿ ಬಂದ ಕಾರಣ, ಹಿಡಕಲ್ ಜಲಾಶಯ ಸಂಪೂರ್ಣವಾಗಿ ಬತ್ತಿ ಹೋದ ಕಾರಣ ಬೆಳಗಾವಿಯ ಹಿಡಕಲ್ ಜಲಾಶಯದಲ್ಲಿ ಮುಳುಗಿದ್ದ ಅತ್ಯಂತ ಹಳೇಯದಾದ ವಿಠೋಬಾ ದೇವಸ್ಥಾನ ಭಕ್ತರ ದರ್ಶನಕ್ಕೆ ಲಭ್ಯವಾಗಿತ್ತು.
ಹುನ್ನೂರು ಗ್ರಾಮವನ್ನು ಹಿಡಕಲ್ ಜಲಾಶಯದ ನಿರ್ಮಾಣದ ಸಂಧರ್ಭದಲ್ಲಿ ಸಂಪೂರ್ಣವಾಗಿ ಸ್ಥಳಾಂತರ ಮಾಡಲಾಗಿತ್ತು.ಈ ಗ್ರಾಮದಲ್ಲಿದ್ದ ವಿಠ್ಠಲ ದೇವರ ಮಂದಿರ ಜಲಾಶಯದಲ್ಲೇ ಮುಳುಗಿತ್ತು, ಆದ್ರೆ ಈ ಬಾರಿ ಈ ದೇಗುಲ ಭಕ್ತರ ದರ್ಶನಕ್ಕೆ ಲಭ್ಯವಾಗಿತ್ತು,ಕಳೆದ ಒಂದು ತಿಂಗಳಿಂದ ದಿನನಿತ್ಯ ಭಕ್ತರ ಮಹಾಪೂರವೇ ಇಲ್ಲಿಗೆ ಹರಿದು ಬಂದಿತ್ತು,ದಿನನಿತ್ಯ ಸಾವಿರಾರು ಜನ ಭಕ್ತರು ವಿಠೋಬಾ ದೇವರ ದರ್ಶನ ಪಡೆದು ಪುಣೀತರಾಗಿದ್ದರು.
ಹಿಡಕಲ್ ಜಲಾಶಯ ನೀರಿನಿಂದ ಬತ್ತಿ ಹೋಗಿದ್ದರೂ ಸಹ,ವಿಠ್ಠಲನ ದರ್ಶನದಿಂದಾಗಿ ಈ ಜಲಾಶಯ ಭಕ್ತಿಯ ಭಂಡಾರದಿಂದ ತುಂಬಿ ತುಳಕಿತ್ತು.
ಸಹ್ಯಾದ್ರಿಯ ಮಡಿಲಲ್ಲಿ ಈಗ ಮಳೆ ನಿರಂತರವಾಗಿ ಸುರಿಯುತ್ತಿದೆ.ಘಟಪ್ರಭಾ ನದಿಯ ಒಳಹರಿವು ಹೆಚ್ಚಾಗಿ,ಹಿಡಕಲ್ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.ಜಲಾಶಯದಲ್ಲಿರುವ ವಿಠ್ಠಲನ ಮಂದಿರ ಮತ್ತೆ ಮುಳುಗುತ್ತಿದ್ದು,ಇಂದು ಮಧ್ಯಾಹ್ನದಿಂದ ಪೋಲೀಸರ ಸರ್ಪಗಾವಲಿದ್ದು ಭಕ್ತರನ್ನು ಮಾರ್ಗದ ಮದ್ಯದಲ್ಲೇ ತಡೆಯಲಾಗುತ್ತಿದೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					
