Breaking News

ಇವರು ಪೋಲಿಸರಾ?ಅಥವಾ ರಾಕ್ಷಸರಾ….??

ಬೆಳಗಾವಿ-ಬೆಳಗಾವಿಯ ನಡು ರಸ್ತೆಯಲ್ಲಿ ವಿಕಲಾಂಗನ ಮೇಲೆ ಖಾಕಿ ಕ್ರೌರ್ಯ ತೋರಿಸಿದ್ದು,ವಿಕಲಾಂಗನಿಗೆ, ಬೂಟಿನಿಂದ ಒದ್ದು, ಲಾಠಿ ಮುರಿಯುವಂತೆ ಥಳಿಸಿರುವ ಪೋಲಿಸರು ಆ ವಿಕಲಾಂಗನನ್ನು ಮನಬಂದಂತೆ ಥಳಿಸಿ,ಆತನಿಗೆ ನಡು ರಸ್ತೆಯಲ್ಲೇ ಮಲಗಿಸಿ ಅಮಾನವೀಯವಾಗಿ ನಡೆದುಕೊಂಡ ವಿಡಿಯೋ ಈಗ ರಾಜ್ಯಾದ್ಯಂತ ವೈರಲ್ ಆಗಿದೆ.

ಮಂಗಳವಾರ ರಾತ್ರಿ ನಡೆದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ನಗರದ ಖಾನಾಪೂರ ರಸ್ತೆಯ ಹೊಟೇಲ್ ವೊಂದರ ಮುಂಭಾಗದಲ್ಲಿ ಈ ಘಟನೆ ನಡೆದಿದೆ.
ಉದ್ಯಮಭಾಗ ಠಾಣೆ ಪಿಎಸ್ ಐ ಸರ್ದಾರ ಮುತ್ತಟ್ಟಿ,ಪೇದೆಗಳಾದ ಮಲ್ಲಪ್ಪ ಪೂಜಾರಿ, ಎಸ್.ಆರ್ .ಮೇತ್ರಿ ಈ ಮೂವರು ಪೇದೆಗಳು ತಡರಾತ್ರಿ ನಡು ರಸ್ತೆಯಲ್ಲೇ ವಿಕಲಾಂಗನಿಗೆ ಥಳಿಸಿದ ವಿಡಿಯೋ ನೋಡಿದ್ರೆ ಈ ವಿಕಲಾಂಗ ಮಾಡಿರುವ ತಪ್ಪಾದರು ಏನು ಎನ್ನುವ ಪ್ರಶ್ನೆ ಕಾಡುತ್ತದೆ.

ರಾತ್ರಿ ಹೊತ್ತು ಹೊರ ಓಡಾಡುತ್ತಿದ್ದಾನೆಂಬ ಕಾರಣವೊಡ್ಡಿ ಹಲ್ಲೆಮಾಡಿರುವ ಪೋಲೀಸರ ಕ್ರೌರ್ಯ, ತಾಳಲಾಗದೇ ಚೀರಾಡಿ,ತಪ್ಪಾಯಿತು ಎಂದು ಆ ವಿಕಲಾಂಗ ನರಳಾಡಿದ ದೃಶ್ಯಗಳನ್ನು ನೋಡಿದ್ರೆ ನಾವಿರೋದು ಎಲ್ಲಿ ? ಎನ್ನುವ ಅನುಮಾನ ಕಾಡುತ್ತೆ.

ಪೋಲಿಸರು ವಿಕಲಾಂಗನ ಮೇಲೆ ಹಲ್ಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ಈ ಹಲ್ಲೆ ನಡೆದಿರುವುದು ಬೆಳಗಾವಿಯ ನಿರಂಜನ ಚೌಗಲೆ(25)ಎನ್ನುವ ಅಂಗವಿಕಲ ವ್ಯಕ್ತಿಯ ಮೇಲೆ.

ಬೈಕ್ ಮೇಲೆ ರಾತ್ರಿ 11.50ಕ್ಕೆ ಪಾರ್ಸಲ್ ಪಡೆದುಕೊಂಡು ಹೋಗುತ್ತಿದ್ದ ನಿರಂಜನ ನನ್ನು
ಮನಸೋ ಇಚ್ಛೆ ಥಳಿಸಿ, ಬೈಕ್, ಮೊಬೈಲ್ ಕಸಿದುಕೊಂಡು ಹೋದ ಪೋಲಿಸರುಮೆರೆದಿರುವ ಕೌರ್ಯದ ವಿಡಿಯೋ ಕಂಡು ಬೆಳಗಾವಿ ಮಂದಿ ಶಾಕ್ ಆಗಿದ್ದಾರೆ.
ಇವರು ಪೋಲಿಸರಾ?ಅಥವಾ ರಾಕ್ಷಸರಾ? ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

ಪೋಲಿಸರಿಂದ ಹಲ್ಲೆಗೊಳಗಾದ ನಿರಂಜನ ಚೌಗಲೆ ಹೇಳಿದ್ದು…

ನಾನು ಅಂದು ಊಟ ಪಾರ್ಸಲ್ ತೆಗೆದುಕೊಳ್ಳಲು ಹೊಟೇಲ್‌ಗೆ ಹೋಗಿದ್ದೆ ಊಟ ಕಟ್ಟಿಸಿಕೊಂಡು ಹೊರಡುವಾಗ ಪೋಲಿಸರು ಬಂದು ತಡೆದರು
ಇಷ್ಟೋತ್ತಿಗೆ ಇಲ್ಲೇಕೆ? ಎಂದು ಏಕಾಏಕಿ ಹಲ್ಲೆ ಮಾಡಲು ಶುರು ಮಾಡಿದರು ನಾನು ಅಂಗವಿಕಲ, ಸರಿಯಾಗಿ ನಡೆಯಲು ಬರಲ್ಲ ಅಂತ ಹೇಳಿದ್ರೂ ಕೇಳಲಿಲ್ಲ
ನೆಲಕ್ಕೆ ಕೆಡವಿ ಬೂಟಿನಿಂದ ಒದ್ದರು, ಎರಡು ಲಾಠಿ ಮುರಿಯುವವರೆಗೆ ಹೊಡೆದರು ಕೈ ಮುಗಿದರೂ ಕೇಳಲಿಲ್ಲ, ಹೊಡೆದು ಮೊಬೈಲ್ , ಬೈಕ್ ಕಸಿದುಕೊಂಡು ಹೋದರು
ರಾತ್ರಿ ನಡೆಯಲಾಗದೇ ಬೀದಿಯಲ್ಲಿ ಮಲಗಿ, ಬೆಳಿಗ್ಗೆ ಮನೆಗೆ ಬಂದೆ ನನ್ನ ಜೊತೆ ಪೋಲಿಸರು ಕೆಟ್ಟದ್ದಾಗಿ ನಡೆದುಕೊಂಡಿದ್ದಾರೆನನ್ನ ಮೇಲೆ ಒಂದು ಎಕ್ಸಿಡೆಂಟ್ ಕೇಸ್ ಬಿಟ್ರೆ ಯಾವ ಕೇಸ್ ಇಲ್ಲ,ಘಟನೆ ನಡೆದ್ದಾಗ ಕುಡಿದಿದ್ದು ನಿಜ, ಟೈಂ ಸಹ ಹೆಚ್ಚಾಗಿತ್ತು, ಆದರೆ ಹೊಡೆಯುವಂತಹ ತಪ್ಪು ಮಾಡಿರಲಿಲ್ಲ ಎಂದು ನಿರಂಜನ್ ಮಾದ್ಯಮಗಳ ಎದುರು ಹೇಳಿಕೊಂಡಿದ್ದಾನೆ.

ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಒತ್ತಿ…

https://fb.watch/m21IzevRzV/?mibextid=Nif5oz

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *