Breaking News
Home / Breaking News / ಬೆಳಗಾವಿ ಜಿಲ್ಲೆಯ ಯಾವ ಡ್ಯಾಂ ನಲ್ಲಿ ಎಷ್ಟು ನೀರು ಸಂಗ್ರಹ ಆಗಿದೆ,ಎಷ್ಟು ಬಾಕಿ ಇದೆ ಗೊತ್ತಾ..??

ಬೆಳಗಾವಿ ಜಿಲ್ಲೆಯ ಯಾವ ಡ್ಯಾಂ ನಲ್ಲಿ ಎಷ್ಟು ನೀರು ಸಂಗ್ರಹ ಆಗಿದೆ,ಎಷ್ಟು ಬಾಕಿ ಇದೆ ಗೊತ್ತಾ..??

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ನಿರೀಕ್ಷೆಗೆ ಮೀರಿ ಜಿಲ್ಲೆಯ ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತಿದ್ದು ಬಹುತೇಕ ಎಲ್ಲ ಜಲಾಶಯಗಳು ತುಂಬುವ ಹಂತ ತಲುಪಿವೆ.

ಬೆಳಗಾವಿ ಮಹಾನಗರಕ್ಕೆ ನೀರು ಪೂರೈಸುವ ರಾಕಸಕೊಪ್ಪ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯ ಹಾಗೂ ಹಿಡಕಲ್ ಜಲಾಶಯಗಳು ತುಂಬುವ ಹಂತ ತಲುಪಿವೆ,ಜೊತೆಗೆ ಕೃಷ್ಣಾ ನದಿಯ ಒಳ ಹರಿವು 1 ಲಕ್ಷ 40 ಸಾವಿರ ಕ್ಯುಸೆಕ್ಸ್ ಇದ್ದು ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

*ಬೆಳಗಾವಿ ಜಿಲ್ಲೆಯ ನವೀಲುತೀರ್ಥ ಜಲಾಶಯ*

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ಇರೋ ಡ್ಯಾಂ.ಮಲಪ್ರಭಾ‌ ನದಿ ಅಡ್ಡಲಾಗಿ ನಿರ್ಮಿಸಿರು ನವೀಲುತೀರ್ಥ ಜಲಾಶಯ ಭರ್ತಿಯಾಗುತ್ತಿದೆ.
ಗರಿಷ್ಠ ಮಟ್ಟ- 2079.50 ಅಡಿಇಂದಿನ ಮಟ್ಟ – 2060.80 ಅಡಿ ಇದೆ.ಒಳ‌ ಹರಿವು- 16930 ಕ್ಯೂಸೆಕ್
ಹೊರ ಹರಿವು- 194 ಕ್ಯೂಸೆಕ್ ಇದೆ.
ಇಂದಿನ ಸಂಗ್ರಹ- 17.220 tmc
ಸಂಗ್ರಹಣಾ ಸಾಮರ್ಥ್ಯ- 37.73 tmc ಇದ್ದು ಈಗಾಗಲೇ 17 tmc ನೀರು ಸಂಗ್ರಹವಾಗಿದೆ.ಇನ್ನೊಂದು ವಾರ ಮಳೆ ಇದೇ ಪ್ರಮಾಣದಲ್ಲಿ ಸುರಿದ್ರೆ ಡ್ಯಾಂ ವಾರದಲ್ಲೇ ಭರ್ತಿಯಾಗಲಿದೆ.

ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯ..

ಘಟಪ್ರಭಾ ನದಿಗೆ ನಿರ್ಮಿಸಲಾಗಿರುವ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಸಾಮರ್ಥ್ಯ 2175 ಅಡಿ ಇದ್ದು ಈಗಾಗಲೇ 2064 ಅಡಿ ನೀರು ಸಂಗ್ರಹವಾಗಿದೆ.ಈ ಜಲಾಶಯದ ಸಾಮರ್ಥ್ಯ 51 tmc ಇದ್ದು ಇವತ್ತಿಗೆ 29 tmc ನೀರು ಸಂಗ್ರಹವಾಗಿದೆ,ಘಟಪ್ರಭಾ ನದಿಯ ಒಳಹರಿವು 30 ಸಾವಿರ 526 ಕ್ಯಸೆಕ್ಸ್ ಇದೆ.

ಒಟ್ಟಾರೆ ಬೆಳಗಾವಿ ಜಿಲ್ಲೆಯ ಎಲ್ಲ ಜಲಾಶಯಗಳು ಖಾಲಿಯಾಗಿ ಜನ ನೀರಿಗಾಗಿ ಪರದಾಡುತ್ತಿರುವಾಗ ಎರಡು ವಾರದಲ್ಲೇ ಮಳೆರಾಯ ಬೆಳಗಾವಿ ಜಿಲ್ಲೆಯ ಜನರ ಮೇಲೆ ಕೃಪೆ ತೋರಿದ್ದು ಈಗ ಜಿಲ್ಲೆಯ ಎಲ್ಲ ಜಲಾಶಯಗಳು ತುಂಬುವ ಹಂತದಲ್ಲಿವೆ.

Check Also

ದ ಮೇಕರ್ ಆಫ್ ನ್ಯೂ ಇಂಡಿಯಾ ಪುಸ್ತಕ ರೆಡಿ ಮಾಡಿದವರು ಯಾರು ಗೊತ್ತಾ..??

ಪ್ರಾಮಿಸ್ಡ್ ನೇಷನ್’ ಪ್ರಧಾನಿಗೆ ಅರ್ಪಣೆ * ಹುಬ್ಬಳ್ಳಿಯ ‘ಸೆನ್ಸ್ ಎಸೆನ್ಸ್’ ಸಂಸ್ಥೆಯಿಂದ ಅಂಧರಿಗಾಗಿ ಸಿದ್ಧಪಡಿಸಿದ ಪುಸ್ತಕ ಬೆಂಗಳೂರು ದೇಶದ ಏಳು …

Leave a Reply

Your email address will not be published. Required fields are marked *