ಬೆಳಗಾವಿ-ಹವಾಮಾನ ವೈಪರೀತ್ಯವಾದಾಗಲೂ ಇನ್ಮುಂದೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡೀಂಗ್ ಆಗುತ್ತವೆ.ಯಾಕಂದ್ರೆ ಅನಕೂಲವಾಗುವ ಅಗತ್ಯವರುವ ಹೊಸ ಟೆಕ್ನಾಲಾಜಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲೂ ಅಳವಡಿಸಲಾಗಿತ್ತು.ಆದ್ರೆ ಇಂದು ಈ ಟೆಕ್ನಾಲಜಿ ಬಳಿಸಿ ಹವಾಮಾನ ವೈಪರೀತ್ಯಗಳು ಇದ್ದಾಗಲೂ ಇಂಡಿಗೊ ವಿಮಾನ ಬೆಳಗಾವಿಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ರನ್‌ವೇ ಮೇಲೆ ಸೋಮವಾರ ಇಂಡಿಗೊ ಸಂಸ್ಥೆಯ ಅ320 ಏರ್‌ಕ್ರಾಫ್ಟ್ ವಿಮಾನವು ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ಮೂಲಕ ಲ್ಯಾಂಡಿಂಗ್ ಮಾಡಿತು. ಈ ಸಂಧರ್ಭದ ಇನ್ನೊಂದು ವಿಶೇಷತೆ ಏನಂದ್ರೆ ಹೊಸ ಟೆಕ್ನಾಲಾಜಿಯನ್ನು ಬಳಿಸುವಾಗ ವಿಮಾನದ ಪೈಲೆಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್ ಇಬ್ಬರೂ ಮಹಿಳೆಯರು ಅನ್ನೋದು ವಿಶೇಷ.ಮಹಿಳಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಆಗಸದಲ್ಲಿ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಸೆಂಟರ್‌ನಲ್ಲಿ ಮಹಿಳೆಯರೇ ಕೆಲಸ ಮಾಡಿದ್ದು ವಿಶೇಷವಾಗಿತ್ತು.
ಏರ್‌ಬಸ್ ಸೇರಿದಂತೆ ದೊಡ್ಡ ದೊಡ್ಡ ವಿಮಾನಗಳು ಲ್ಯಾಂಡಿಂಗ್ ಆಗಲು ಪೂರಕವಾದ ಸಾಮರ್ಥ್ಯ ಮತ್ತು ಸೌಕರ್ಯಗಳನ್ನು ಈ ನಿಲ್ದಾಣ ಹೊಂದಿದೆ. ಬೆಳಗಾವಿ ವಿಮಾನ ನಿಲ್ದಾಣವು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಸಂಪರ್ಕ ಕೊಂಡಿದೆ. ಪಕ್ಕದ ಗೋವಾ, ಮಹಾರಾಷ್ಟ್ರದ ಯಾತ್ರಿಗಳು ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ದೇಶದ ವಿವಿಧ ಮಹಾನಗರಳಿಗೆ ಪ್ರಯಾಣಿಸುತ್ತಾರೆ. ಬೆಂಗಳೂರು ಹೊರತುಪಡಿಸಿದರೆ, ಅತ್ಯಧಿಕ ಪ್ರಯಾಣಿಕರು ಪ್ರಯಾಣಿಸುವ ವಿಮಾನ ನಿಲ್ದಾಣ ಬೆಳಗಾವಿ ಎಂಬ ಹೆಗ್ಗಳಿಕೆಯಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲು ಎಲ್ಲ ಅರ್ಹತೆಗಳನ್ನು ಇದು ಹೊಂದಿದೆ. ಅದಕ್ಕೆ ಪೂರಕವಾದ ಎಲ್ಲ ಸೌಕರ್ಯಗಳಿವೆ.
ಮುಂದಿನ ದಿನಗಳಲ್ಲಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣವಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ.